Sunday, October 18, 2015

‎ನನ್ನ ಸನಾತನ ನನ್ನ ಹೆಮ್ಮೆ‬..

ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಷಿ ಕೊಡಬಹುದು ಹಾಗಾದರೆ ಸಂತೋಷಕ್ಕೆ ವಿಜ್ಞಾನದಲ್ಲಿರುವ ವ್ಯಾಖ್ಯಾನವೇನು?
"ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು" ಎಂಬುದರ ಹಿಂದಿನ ನಿಜವಾದ ಮರ್ಮವೇನು?
ಅಂತರಂಗ ಶುದ್ಧಿಯು ಬಹಿರಂಗ ಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಮನಸ್ಸು ಎಂಬುದು ಎಲ್ಲದಕ್ಕೂ ಮೂಲ, ಇದನ್ನು ನಿಮ್ಮ ವಿಜ್ಞಾನವೂ ಇತ್ತೀಚೆಗೆ ಒಪ್ಪಿದೆ. ಮನಸ್ಸಿನಿಂದ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕ್ಕೊಳ್ಳಬಹುದು. ನಿಮ್ಮ ಮನಸ್ಸನ್ನು ಯಾವುದಾದರೂ ಒಂದು ವಿಷಯದಲ್ಲಿ ಕೇಂದ್ರೀಕರಿಸಲು ಸುತ್ತಮುತ್ತಲಿನ ವಾತಾವರಣ ಹಾಗು ದೇಹಕ್ಕೆ ಸ್ಪರ್ಷವಾಗಿರುವ ಎಲ್ಲಾ ವಸ್ತುಗಳು ಅತ್ಯಂತ ಪ್ರಭಾವ ಬೀರುತ್ತದೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ,
1. ಧ್ಯಾನ ಮಾಡಲು ಕೈಯ್ಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡರೆ ಸಾಧ್ಯವಿಲ್ಲ, ಹಾಗಾಗಿ ಧ್ಯಾನ ಮಾಡುವಾಗ ಆ ರೀತಿಯ ವಸ್ತುಗಳಿಂದ ದೂರವಿರಬೇಕು ಇದನ್ನೇ ಮಡಿ ಎಂಬುವರು.
2. ಹೊಸ ಬಟ್ಟೆ ಅಥವ ತನಗೆ ಇಷ್ಟವಾದ ಬಟ್ಟೆ ಹಾಕಿ ಧ್ಯಾನ ಮಾಡಲು ಕುಳಿತರೆ ಮರ್ಕಟವೆಂಬ ಮನಸ್ಸು ಸದಾ ಅದರ ಕಡೆಯಲ್ಲಿ ಇರುತ್ತದೆ, ತಾನು ಹೇಗೆ ಕಾಣುವೆ, ಸರಿಯಾಗಿದೆಯ, ನನ್ನ ನೋಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಹಾಗಾಗಿ ಧ್ಯಾನಕ್ಕೆ ಅಥವ ದೇವರ ಪೂಜೆ ಮಾಡುವಾಗ ಅದಕ್ಕಾಗಿಯೇ ವಿಶೇಷ ಉಡುಪು ಅಗತ್ಯ ಅದನ್ನೇ ಮಡಿ ಬಟ್ಟೆ ಎಂಬುವರು.
3. ದೇಹಕ್ಕೆ ಸುಖ ಸಿಕ್ಕಾಗ ಮನಸ್ಸು ಎಂಬ ಪ್ರೊಸೆಸರ್ ಆಫ್ ಆಗುವುದು ಸಾಮಾನ್ಯ, ವಿಶ್ರಾಂತಿ ಅಥವ ನಿದ್ದೆ ಬಯಸುತ್ತದೆ, ಸ್ವಲ್ಪ ಬೆಚ್ಚನೆಯ ವಾತಾವರಣ ನಮ್ಮ ದೇಹಕ್ಕೆ ತಾಕಿದ ಕೂಡಲೇ ಮನಸ್ಸು ಹಾಗೆ ವಿಶ್ರಮಿಸಲು ಶುರು ಮಾಡುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ, ಒದ್ದೆ ಬಟ್ಟೆ ಉಟ್ಟು ಕೂಡುವುದು, ಇದನ್ನೇ ಮಡಿಯಲ್ಲಿ ಸ್ನಾನ ಮಾಡುವುದು ಎನ್ನುತ್ತಾರೆ.
4. ಧ್ಯಾನದ, ಪೂಜೆಯ ಸಮಯ ನೋಡಿ, ಎಲ್ಲಾ ಬೆಳಗಿನ ಜಾವದಲ್ಲೆ ಹೆಚ್ಚು, ಏಕೆಂದರೆ ಬೆಳಗಿನ ಸಮಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳ್ಯಾವು ಇರುವುದಿಲ್ಲ, ಹಾಗಾಗಿ ಜೀರ್ಣಕ್ರಿಯೆ ವಿಶ್ರಾಂತಿಯಲ್ಲಿ ಇರುತ್ತದೆ, ಹಾಗಾಗಿ ಮನಸ್ಸು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಹಾಗೂ ಸೂರ್ಯನ ಕಿರಣಗಳು ಒಂದು ನಿರ್ಧಿಷ್ಟ ಓರೆಯಲ್ಲಿ ಬೀಳುವುದರಿಂದ ಪ್ರಕೃತಿ ನಮ್ಮ ದೇಹಕ್ಕೆ ಒಂದು ಧನಾತ್ಮಾಕ ವಾತಾವರಣ ಕಲ್ಪಿಸಿಕೊಡುತ್ತದೆ. (ಸೂರ್ಯನ ಕಿರಣಗಳಿಂದಾಗುವ ಪರಿಣಾಮಗಳು ವಿಜ್ಞಾನದಲ್ಲಿ ಬಹಳಷ್ಟು ಹೇಳಿಯಾಗಿದೆ)
ಹಾಗಾಗಿ ಬಾಹ್ಯ ಮಡಿಯೂ ಅತ್ಯಗತ್ಯ. 
ದಾಸರು, ವಚನಕಾರರು ಹೇಳಿರುವುದು ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು. ಅಂದರೆ ಬಟ್ಟೆಯನು ನೀರೊಳಗದ್ದದೇ ಸೂಟು ಬೂಟು ಹಾಕಿಯೂ ಮದ ಮತ್ಸರ ಬಿಡಬಹುದು ಎಂದಲ್ಲ, ಅದು ಸಾಧ್ಯವಿಲ್ಲ. ಅವರು ಹೇಳಿರುವುದು ಏನೆಂದರೆ ಬರೀಯ ಬಾಹ್ಯ ಮಡಿ ಮಾಡಬೇಡಿ ಅಂತರಂಗವನ್ನು ಶುದ್ಧಿಕರಿಸಿ ಎಂದೇ ಹೊರೆತು, ಬಾಹ್ಯವನ್ನು ಶುದ್ಧಿಗೊಳಿಸದೇ ಅಂತರಂಗವನ್ನು ಶುದ್ಧಿಗೊಳಿಸಿ ಎಂದಲ್ಲ, ಅದು ಸಾಧ್ಯವೇ ಇಲ್ಲ. 
ಎಲ್ಲವನ್ನು ವೈಜ್ಣ್ಯಾನಿಕವಾಗಿ ನೋಡಲು ಹೋಗುವುದು ಅತ್ಯಂತ ಮೂರ್ಖತನ. ವೈಜ್ಞಾನಿಕವಾಗಿ ನೆಮ್ಮದಿ, ಸಂತೋಷ ಎಂಬ ಪದಗಳಿಗೆ ಸರಿಯಾದ ವ್ಯಾಖ್ಯಾನ ಇಲ್ಲ. ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ, ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಶಿ ಕೊಡಬಹುದು. ಹೀಗೆ ಎರೆಡು ವ್ಯಾಖ್ಯಾನಗಳನ್ನು ವಿಜ್ಞಾನ ಒಪ್ಪುವುದಿಲ್ಲ. ಯಾವುದನ್ನು ತಪ್ಪು ಅಥವ ಸುಳ್ಳು ಎಂಬುದು ಹೇಳಲು ಬರುವುದೋ ಅದನ್ನು statement ಎಂದು mathematical reasoningಲಿ ಕರೆಯುತ್ತಾರೆ, ಹಾಗೆ ಆ statement ಲಿ ಯಾವುದೇ ಗುಣವಾಚಕಗಳು ಇರಬಾರದು, ಉದಾಹರಣೆಗೆ ಗಣಿತ ಒಂದು ಸುಂದರ ವಿಷಯ, ಇಲ್ಲಿ ಸುಂದರ ಎಂಬುದು ಗುಣವಾಚಕ, ಇದು ವ್ಯಕ್ತಿಯ ಭಾವನೆಗಳ ಮೇಲೆ ಅವಲಂಬಿತ, ಒಬ್ಬನಿಗೆ ಸುಂದರವಾಗಿ ಕಂಡದ್ದು ಇನ್ನೊಬ್ಬನಿಗೆ ಕಾಣದೇ ಇರಬಹುದು, ಹಾಗಾಗಿ ಅಂಥ statement ಅಲ್ಲದೇ ಇರುವುದಕ್ಕೆ mathematical formation ಮಾಡಲು ಸಾಧ್ಯವಿಲ್ಲ, mathematics ಲಿ express ಮಾಡಲು ಸಾಧ್ಯವಾಗದಿದ್ದರೆ ಅದನ್ನು ವಿಜ್ಞಾನ ತನ್ನ ವ್ಯಾಪ್ತಿ ಇಂದ ಹೊರಗಿಡುತ್ತದೆ. ಮನಸ್ಸು ಕೂಡ ಹಾಗೆ ಮನಸ್ಸಿನ ಭಾವನೆಗಳನ್ನು ವಿಜ್ಞಾನ ವ್ಯಾಖ್ಯಾನಿಸಲೂ ಸಾಧ್ಯವೇ ಇಲ್ಲ. ಆದರೆ ಆ ಭಾವನೆಗಳ ಮಹತ್ವ ದೊಡ್ಡದ್ದು.
1. ಮಗುವಿಗೆ ಎಷ್ಟೇ ವೈಜ್ಞಾನಿಕ ಔಷಧಿಗಳನ್ನು ಕೊಟ್ಟು ಬೆಳಸಿದರೂ ತಾಯಿಯ ಪ್ರೀತಿಯ ಹಾಲು ಸಮವಾಗಲಾರದು.
2. ತುಂಬಾ ಕಷ್ಟದಲ್ಲಿ ದೇವರ ಮುಂದೆ ಬಂದು ನಿಂತು ಮನಃಪೂರ್ತಿಯಾಗಿ ಬೇಡಿಕೊಂಡಾಗ ಆಗುವ ಸಂತೃಪ್ತಿಗೆ ಹಾಗು ಸಿಗುವ ಆತ್ಮಸ್ಥೈರ್ಯಕ್ಕೆ ಬೇರೆ ಪರಿಹಾರವಿಲ್ಲ.
3. ನಂಬಿಕೆ ಎಂಬುದಕ್ಕೆ ವಿಜ್ಞಾನದಲ್ಲಿ ಏನಿದೆ? ವಿಜ್ಞಾನದ ಕುಡಿಗಳೇ ಆದ ಇಬ್ಬರು ವೈದ್ಯರ ಬಳಿ ಆಯ್ಕೆ ಮಾಡುವಾಗ ವಿಜ್ಞಾನ ಮಧ್ಯ ಬರುವುದಿಲ್ಲ, ನಮ್ಮಲ್ಲಿ ಇರುವ ನಂಬಿಕೆ ವೈದ್ಯನನ್ನು ಹುಡುಕಲು ನೆರವಾಗುತ್ತದೆ. ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವೇ?
4. ವಿಜ್ಞಾನ ಉಪಯೋಗಿಸುವ ಪ್ರಕೃತಿ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಇಲ್ಲ. ಇವೆಲ್ಲಾ ಪ್ರಕೃತಿಯ ವಿಸ್ಮಯ ಎಂದು ಕೈ ತೊಳೆದುಕೊಳ್ಳುತ್ತಾರೆ, ನಾವು ಅದನ್ನೇ ದೇವರ ಆಟ ಎಂದರೆ ಮೂಗೆಳೆಯುತ್ತಾರೆ, ಮೂಢನಂಬಿಕೆ ಎಂದು ಬೊಬ್ಬೆಹಾಕುತ್ತಾರೆ.
ಆಚರಣೆಗಳನ್ನು ಮನಸ್ಸಿನ ನೆಮ್ಮದಿಗೋಸ್ಕರ ಮಾಡುವುದು, ಅದರಲ್ಲಿ ವಿಜ್ಞಾನದ ಎಳೆಯನ್ನು ಹುಡುಕುವುದು ಅತ್ಯಂತ ಮೂರ್ಖತನವಲ್ಲದೇ ಮತ್ತೇನಲ್ಲ.
‪#‎ನನ್ನ_ಸನಾತನ_ನನ್ನ_ಹೆಮ್ಮೆ‬
‪#‎ನನಗನಿಸಿದ್ದು‬

Friday, October 9, 2015

ಸಂಭವನೀಯತೆ ಸಿದ್ಧಾಂತ(probability theory)

ಸಂಭವನೀಯತೆ ಸಿದ್ಧಾಂತ(probability theory)
ಎಲ್ಲೋ ಒದಿದ್ದು, ಸಂಭವನೀಯತೆ ಸಿದ್ಧಾಂತ ಹೇಗೆ ಜನ್ಮ ತಾಳಿತು ಎಂದು. ಪ್ರತೀ ಬಾರಿ ನಾನು ಪ್ರೊಬಾಬಿಲಿಟಿ ಕ್ಲಾಸ್ ಮಾಡುವಾಗ ಹೇಳಿರುತ್ತೇನೆ. ಈ ಥೀಯರಿ ಅರಿವಿಲ್ಲದೇ ಬಹಳ ಕಡೆಯಲ್ಲಿ ಉಪಯೋಗಿಸುತ್ತಿದ್ದಾದರೂ ಅದಕ್ಕೆ ಗಣಿತದ ಒಂದು ರೂಪ ಕೋಟ್ಟಿದ್ದು 17ನೇ ಶತಮಾನದಲ್ಲಿ, ಬ್ಲೈಸ್ ಪಾಸ್ಕಲ್ ಮತ್ತು ಪೀರ್ರೆ ಡೆ ಫೆರ್ಮ್ಯಾಟ್‌ ಎಂಬುವರು ಇದಕ್ಕೆ ಸಂಖ್ಯಾಶಾಸ್ತ್ರವನ್ನು ಸೇರಿಸಿ ಮುನ್ನಡೆಸಿದರು. ಈ ಕಥೆ ಅವರ ಬಗ್ಗೆ.
ಒಮ್ಮೆ ಪಾಸ್ಕಲ್ ಮತ್ತು ಫೆರ್ಮ್ಯಾಟ್ ಒಂದು ಉದ್ಯಾನವನದಲ್ಲಿ ಯಾವೂದೋ ಗಣಿತದ ಧೀರ್ಘ ಚರ್ಚೆಯಲ್ಲಿ ಮುಳುಗಿದ್ದರಂತೆ. ಅಲ್ಲಿಯೇ ಪಕ್ಕ ಸ್ವಲ್ಪ ದೂರದಲ್ಲಿ ಜೂಜಾಟದಲ್ಲಿ ತನ್ನ ಎಲ್ಲಾ ಸಂಪತ್ತನ್ನು ಕಳೆದು ದಿವಾಳಿಯಾಗಿದ್ದ ಒಬ್ಬ ಕುಡುಕ ಕೂಗುತ್ತಾ ಬಿದ್ದಿದ್ದನಂತೆ. ಅವನ ಆ ಕೂಗಾಟ ಈ ಗಣಿತಜ್ಞರ ಧೀರ್ಘ ಚರ್ಚೆಗೆ ತೊಂದರೆಯುಂಟಾಯಿತು. ಇವರು ಆ ಕುಡುಕನಿಗೆ ನಾವಿಲ್ಲಿ ಗಣಿತದ ಬಗ್ಗೆ ಏನೋ ಘಂಭೀರ ಚರ್ಚೆ ಮಾಡುತ್ತಿದ್ದೇವೆ ಅತ್ತ ಹೋಗು ಎಂದು ಗದರಿಸಿದರಂತೆ. ಅದರಿಂದ ಕೋಪಗೊಂಡ ಕುಡುಕ, ಹತ್ತಿರ ಬಂದು, ನೀವು ಬಹಳಾ ದೊಡ್ಡ ಗಣಿತಜ್ಞರೇ ಹಾಗಾದರೇ ನನ್ನ ಸವಾಲಿಗೆ ಉತ್ತರಿಸಿ ಎಂದು ಸವಾಲೆಸೆದನು. ಅವನ ಸವಾಲು ಹೀಗಿತ್ತು. ನನ್ನ ಬಳಿ ಈಸ್ಪೀಟ್ ಕಾರ್ಡ್ಸ್ಗಳಿವೆ, ನಾನು ಈಗ ತೆಗೆಯುವ ಕಾರ್ಡ್ ಯಾವುದೆಂದು ಹೇಳುವಿರ?
ಸವಾಲನ್ನು ಕೇಳಿ ಇಬ್ಬರ ಮನಸಲ್ಲಿ ಕುತೂಹಲ ಮೂಡಿತಂತೆ, ಆ ಪ್ರಶ್ನೆಗೆ ಉತ್ತರ ಇಲ್ಲವೆಂದು ಗೊತ್ತಿದ್ದರೂ ಎಲ್ಲೋ ಮೂಲೆಯಲ್ಲಿ ಒಂದು ಥೀಯರಿಯ ಜನ್ಮವಾಯಿತು. ಅದೇ ಸಂಭವನೀಯತೆ ಸಿದ್ಧಾಂತ. ಅದರಿಂದ ಅವರು ಜಗಕ್ಕೆ ಕೊಟ್ಟಿದ್ದು, ಒಂದು ನಾಣ್ಯವನ್ನು ಹಾರಿಸಿದಾಗ ಅದರ ಯಾವ ಮುಖ ಮೇಲಾಗಿ ಬೀಳುತ್ತದೆಂದು ಹೇಳಲು ಸಾಧ್ಯವೇ ಇಲ್ಲ, ಆದರೆ ಒಂದು ಮುಖ ಬೀಳುವ ಸಂಭವನೀಯತೆ ಎಷ್ಟು ಎಂದು ಹೇಳಬಹುದು.
ಗಣಿತದ ಭಾಷೆಯಲ್ಲಿ ಬರೆಯುವುದಾದರೆ, Head and Tail ಇರುವ ನಾಣ್ಯ ಹಾರಿಸಿದಾಗ Head ಬೀಳುವ ಸಂಭವನೀಯತೆ 1/2 (50%) ಹಾಗೇ Tail ಬೀಳುವ ಸಂಭವನೀಯತೆ 1/2 (50%).
ಹಾಗಾಗಿ ಜಗತ್ತಿನ ದೊಡ್ಡ ದೊಡ್ಡ ಆವಿಷ್ಕಾರಗಳೆಲ್ಲ ಅತೀ ಸಣ್ಣ ಸಣ್ಣ ಸಂದರ್ಭಗಳಲ್ಲೇ ಉದ್ಭವಿಸಿರುತ್ತವೆ. ಹೇಗೆ ನ್ಯೂಟನ್ ನ ಗುರುತ್ವಾಕರ್ಷಣೆ ಸೇಬು ಬೀಳುವುದರಿಂದ ಹುಟ್ಟಿತೋ, ಆರ್ಕಿಮಿಡಿಸ್ ಗೆ ಹೇಗೆ "volume of water displaced must be equal to the volume of the part of his body he had submerged" ಎಂಬುದು ಸ್ನಾನದ ಮನೆಯಲ್ಲಿ ಹೊಳೆಯಿತೋ, ಗೂಗಲ್, ಫೇಸ್ ಬುಕ್ ಒಂದು ಗ್ಯಾರೇಜ್ನಲ್ಲಿ ಜನ್ಮ ತಾಳಿತೋ ಹಾಗೆ.
ಪ್ರಕೃತಿಯ ಬಗ್ಗೆ, ಸುತ್ತಮುತ್ತಲಿನ ಪರಿಸರದ ಚಲನವಲನಗಳ ಮೇಲೆ ಕುತೂಹಲವೊಂದಿದ್ದರೆ ಈ ರೀತಿಯ ಆವಿಷ್ಕಾರಗಳು ನಡೆಯುತ್ತವೆ.
‪#‎ಬಾಲ್ಯಕ್ಕಿಂತ_ಮಿಗಿಲಾದ_ಶಾಲೆಯಿಲ್ಲ‬
‪#‎ಕುತೂಹಲಕ್ಕಿಂತ_ಮಿಗಿಲಾದ_ಟೀಚರ್_ಇಲ್ಲ‬.
ಈ ಥೀಯರಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕೆಳಗಿನ ಕೊಂಡಿಯನ್ನು ಒತ್ತಿ ಬಹಳ ಸರಳವಾಗಿ ಕನ್ನಡದಲ್ಲಿ ಇದರ ಬಗ್ಗೆ ವಿವರಿಸಿದ್ದಾರೆ.
ನೆನ್ನೆ ಶೋಲೆ ಎಂಬ ಹಿಂದಿ ಸಿನಿಮಾ ನೋಡುವಾಗ ಈ ಥೀಯರಿ ಒಮ್ಮೆ ನನ್ನ ಕಣ್ಣ ಮುಂದೆ ಹಾದು ಹೋಯಿತು. ಆ ಚಿತ್ರದ screenshot ಹಾಕಿದ್ದೇನೆ. ಅದರಲ್ಲಿ ಗಬ್ಬರ್ ತನ್ನ 3 ಢಕಾಯಿತರನ್ನು ಕೊಲ್ಲಲು ಮುಂದಾದ ಪಿಸ್ತೂಲ್ ನಲ್ಲಿ 6 ಬುಲೆಟ್ಸ್ ಇರುತ್ತದೆ, ಆಗ ಪ್ರತಿಯೊಬ್ಬರ ಪ್ರಾಣ ಹೋಗುವ ಸಂಭವನೀಯತೆ 100%. ಆದರೆ ಅದು ಸರಿಯಲ್ಲ ಎಂದು 3ನ್ನು ಗಾಳಿಯಲ್ಲಿ ಹಾರಿಸಿ 3 ಉಳಿಸುತ್ತಾನೆ. ಈಗ ಪ್ರಾಣ ಹೋಗುವ ಸಂಭವನೀಯತೆ 50%(3 bullets among 6 options, 3/6=1/2). ಮೊದಲೇಯವನ ತಲೆಗೆ ಪಿಸ್ತೂಲಿಟ್ಟು ಟ್ರಿಗ್ಗರ್ ಎಳೆದಾಗ ಗುಂಡು ಹಾರುವುದಿಲ್ಲ ಆಗ ಎರಡನೇಯವನ ಪ್ರಾಣ ಹೋಗುವ ಸಂಭವನೀಯತೆ ಹೆಚ್ಚಾಗುತ್ತದೆ 60% (3 bullets among 5 options, 3/5). ಎರಡನೇಯವನೂ ಗುಂಡಿನಿಂದ ತಪ್ಪಿಸಿಕೊಳ್ಳುತ್ತಾನೆ ಆಗ 3ನೇಯವನ ಪ್ರಾಣ ಹೋಗುವುದು ಇನ್ನು ಹೆಚ್ಚಾಗುತ್ತದೆ 75% (3 bullets among 4 options, 3/4).
ಹಾ ಇವಾಗ ‪#‎ನನಗನಿಸಿದ್ದು‬, ಈ ತಲೆಕೆಡಿಸುವ probability ಪೋಸ್ಟ್ ಓದಿ ಬಯ್ಕೊಳ್ಳುವವರ ಸಂಭವನೀಯತೆ????.
ಒಕೆ ಒಕೆ ಬಯ್ಕೋಬೇಡಿ, ಕಥೆ ಓದಿ ಸಾಕು.

Wednesday, October 7, 2015

ವೈಜ್ಞಾನಿಕ ಮನೋಭಾವ ಎಂಬ ಮೂಢನಂಬಿಕೆ.

ವಿಜ್ಞಾನದಿಂದ ನಮ್ಮ ಸಂಸ್ಕೃತಿಯಲ್ಲಿಯ ಮೌಢ್ಯ ಹೋಗಲಾಡಿಸಬಹುದು ಎಂದು ನಮ್ಮ ಮೇಲೆ ಗೂಬೆ ಕೂರಿಸಿ ನಮ್ಮನ್ನು ಆಳಿಹೋದ ಬ್ರಿಟೀಷರ ಮರಕ್ಕೆ ಜೋತುಬಿದ್ದಿರುವ ಬುದ್ದಿಜೀವಿಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಹಾಗದರೆ ವಿಜ್ಞಾನದಲ್ಲಿಯ nuclear weapons, biological weapons, cyber crimes ಇವೆಲ್ಲಾ ವೈಜ್ಞಾನಿಕ ಮೌಢ್ಯವಲ್ಲವೇ? ವಿಜ್ಞಾನದಿಂದ ಹುಟ್ಟಿದ ಇವುಗಳು ಮನುಕುಲಕ್ಕೆ ಹಾನಿಕಾರಕವಲ್ಲವೇ? ಇವುಗಳೂ ಕೂಡ ಜನರಿಗೆ ಮಂಕು ಬೂದಿ ಎರಚಿ ದುಡ್ಡು ಮಾಡುತ್ತಿಲ್ಲವೇ? ಇವುಗಳನ್ನು ಪ್ರಶ್ನೆ ಮಾಡುವರ್ಯಾರು?
ಮಾನಸಿಕ ನೆಮ್ಮದಿಗಾಗಿ ನಡೆಸುವ ಆಚರಣೆಗಳಿಗೆ ವಿಜ್ಞಾನದಲ್ಲಿ ಉತ್ತರ ಹುಡುಕಲು ಸಾಧ್ಯವಿಲ್ಲ. ಅದರಿಂದ ಜನರಿಗಾಗುವ ನೆಮ್ಮದಿ, ಖುಷಿ ವಿಜ್ಞಾನದ sin, cos, tan ಇಂದ ಸಿಗುವುದಿಲ್ಲ. ಭಾರತದ ಸಂಸ್ಕೃತಿ, ಜ್ಞಾನ ಹಲಸಿನ ಹಣ್ಣಾದರೆ, ವಿಜ್ಞಾನ ಆ ಹಣ್ಣಲ್ಲಿರುವ ಬೀಜ. ಬೀಜದಲ್ಲಿ ಹಣ್ಣು ಹುಡುಕುವ ಕೆಲಸ ಬಿಡಿ.
> ಹಬ್ಬದ ದಿನ ಹೊಸ ಬಟ್ಟೆ ಹಾಕಿ ಪಡುವ ಖುಷಿಗೆ ವೈಜ್ಞಾನಿಕ ಕಾರಣ ಹುಡುಕಿ.
> ಹೊಸ ವಾಹನ ತಂದಾಗ ಪೂಜೆ ಮಾಡುವಾಗ ಆಗುವ ಉಲ್ಲಾಸಕ್ಕೆ ವೈಜ್ಞಾನಿಕ ಮನೋಭಾವದಲ್ಲಿ ಜಾಗವಿಲ್ಲ.
> ದೀಪಾವಳಿಯಂದು ಮಕ್ಕಳು ಹಾರಿಸುವ ಪಟಾಕಿಯಲ್ಲಿ ಅವರ ಸಂತೋಷ ಅಡಗಿರುವುದನ್ನು ನಿಮ್ಮ ವಿಜ್ಞಾನದ ಕನ್ನಡಕದಲ್ಲಿ ಕಾಣಸಿಗುವುದಿಲ್ಲ.
> ಮದುವೆಯನ್ನು ವೈಜ್ಞಾನಿಕವಾಗಿ ಯೋಚಿಸಿದರೆ ಪ್ರಾಣಿಗಳಿಗೂ ನಮಗೂ ಭೇದವಿರುವುದಿಲ್ಲ.
ಹೇಳಲು ಬಹಳಷ್ಟು ಸಿಗುತ್ತವೆ.
ಹೊಸದಿಗಂತದಲ್ಲಿ ಬಂದಿರುವ ರಾಜರಾಮ ಹೆಗಡೆಯವರ ಅಂಕಣವನ್ನು ಓದಿ ‪#‎ನನಗನಿಸಿದ್ದು‬
http://hosadigantha.in/index.php…
page no 6

Thursday, October 1, 2015

ನೋಡಿ ಸ್ವಾಮಿ ನಾವಿರೋದೇ ಹೀಗೆ

‪#‎ಆ_ನೋ_ಭದ್ರಾಃ_ಕೃತವೋ_ಯಂತು_ವಿಶ್ವತಃ‬|| ಅರ್ಥ ಮುಂದೆ ಹೇಳ್ತೀನಿ. ಶ್ಲೋಕದ ಜೊತೆ ಈ ಹಾಡು ನೆನಪಾಯ್ತು.
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು_ಕಿವಿ_ಮುಚ್ಚಿದರು_ನನಗಿಲ್ಲ_ಚಿಂತೆ.
ಇದನ್ನು ಏಕೆ ಹೇಳ್ತಾ ಇದಿನಿ ಅಂದ್ರೆ, ಇವತ್ತು ನನ್ನ ಸ್ನೇಹಿತನೊಬ್ಬ ತನ್ನ ಫೇಸ್ಬುಕ್ ಲಿ news feed scroll down ಮಾಡ್ತಾ ಇರುವಾಗ ನಾನು ನೋಡ್ತಾ ಇದ್ದೆ. ಅವಾಗ ‪#‎ನನಗನಿಸಿದ್ದು‬.
ಆತನ news feedಲಿ ಕೆಳಗಿನ ಸಂಗತಿಗಳು ಹೆಚ್ಚಾಗಿ ಕಾಣುಸ್ತಾ ಇತ್ತು. ಇದು ಸಾಧಾರಣವಾಗಿ ಎಲ್ಲರದ್ದು ಇವೇ ಇರುತ್ತದೆ.
೧. ಹಲ್ಲು ಕಿರಿದಿಕೊಂಡು, ತಲೆ ಸೊಟ್ಟ ಮಾಡಿಕೊಂಡು, ಬರೀ ಕಣ್ಣು, ಮೂಗು ಬಾಯಿ ಅಥವ ಕೂದಲು ಮುಚ್ಚಿಕೊಂಡ ಮುಖ ಇರುವ, ವಿಚಿತ್ರ ವಿಚಿತ್ರ ಮುಖ ಮಾಡಿಕೊಂಡು ತೆಗೆದುಕೊಂಡ selfiಗಳು, ಅದಕ್ಕೆ ಅರ್ಥ ಆಗದ, ಸಂಭಂದವೇ ಇರದ ಸ್ವಯಂ ಘೋಷಿತ captions. (ಹೆಚ್ಚಾಗಿ ಹುಡುಗಿಯರದ್ದೇ selfieಗಳು)
೨. ಕರ್ನಾಟಕದೋರಾಗಿದ್ರು ಮಹೇಶ್ ಬಾಬು, ಪ್ರಭಾಸ್ ಮತ್ತಿತರ ತೆಲುಗು ನಾಯಕರ ಫೋಟೋಗಳು, ಅಪರೂಪಕ್ಕೆ ನಮ್ಮ ಸುದೀಪ್ ಕೂಡ ಕಾಣುಸ್ತಿದ್ರು ತೆಲುಗು ಚಿತ್ರದಲ್ಲಿ ನಟಿಸಿದ ಕಾರಣಕ್ಕೋ ಏನೊ. ಬಿಟ್ರೆ ನಾಯಕಿಯರದ್ದು ಅದೇನ್ ಸಿಗೊತ್ತೋ ಅವರ ಫೋಟೋ ಇಂದ ನಾ ಕಾಣೆ.
೩. good morning, good night, good evening ಈ ಫೋಟೋಕೆ like ಮಾಡಿ ಎಂದು ಅಂಗಲಾಚೋ ಫೋಟೋಗಳು, photoshop ಲಿ ಕಂಡಕಂಡಲ್ಲೆಲ್ಲಾ ದೇವರ ಚಿತ್ರ ಹಾಕಿ like ಮಾಡಿ ಇಲ್ಲ ಎಂದರೆ ಕಾಟ ತಪ್ಪಿದ್ದಲ್ಲ ಎಂದು ದೇವರ ಹೆಸರಲ್ಲಿ like ಗಿಟ್ಟಿಸುವ ಫೋಟೋಗಳು.
೪. life ಬಗ್ಗೆ, love ಬಗ್ಗೆ ಅಥವ friendship ಬಗ್ಗೆ quotesಗಳು, ಇನ್ನು ಒಂದು ಮಜಾ ಸಂಗತಿ ಎಂದರೆ, ಇಲ್ಲೆ ಶಿವಮೊಗ್ಗ ಇಂದ ದಾವಣಗೆರೆಗೋ ಅಥವ ತಮ್ಮ ಊರಿಗೋ ಹೋಗ್ತಾ ಇರ್ತಾರೆ ಅದ್ರುದ್ದು status ಲಿ airplane ಚಿತ್ರ.
ಇಷ್ಟೆಲ್ಲರ ಮಧ್ಯೆ ಮಧ್ಯೆ ನನ್ನ updates(ಸ್ವಲ್ಪ ಜಾಸ್ತೀನೇ ಇದ್ವು ಅನ್ನಿ, ಯಾಕಂದ್ರೆ ನಂದು FBಲಿ ಸ್ವಲ್ಪ ಜಾಸ್ತಿ activities), ವಿಜ್ಞಾನದ ಬಗ್ಗೆನೋ, ಹಿಂದು ಸಂಸ್ಕೃತಿ ಬಗ್ಗೆನೊ, ಪ್ರಸ್ತುತ ರಾಜಕೀಯದ ಬಗ್ಗೆನೋ ಅಥವ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಬಗ್ಗೆನೋ ಇರ್ತಿದ್ವು.
ಇವಾಗ ಮೇಲಿನ ಜಿ. ಎಸ್. ಶಿವರುದ್ರಪ್ಪನವರ ಹಾಡು ಏಕೆ ಬರೆದೆ ಅಂತ ಹೇಳ್ತೀನಿ. ಅಷ್ಟೊಂದು news feedಲಿ ನನ್ನ ಸ್ನೇಹಿತ ಯಾವುದನ್ನು like ಮಾಡಬಹುದು, ಅವನ ಅಭಿರುಚಿ ಎಂತದ್ದು ಅಂತ ಕಾಯ್ತಾ ಕುತಿದ್ದೆ. ನನ್ನ ದುರಂತ ಎಂದರೆ like ಬಯಸಲಿಲ್ಲ ನಾನು, ಕೊನೇ ಪಕ್ಷ ನನ್ನ updatesಲಿ ಇದ್ದ ವಿಷಯದ ಕಡೆಗೆ ಗಮನ ಕೂಡ ಹರಿಸಲಿಲ್ಲ. ಮೇಲಿನ ೪ ಅಂಶದಲ್ಲಿನವುಗಳನ್ನು like, share ಮಾಡಿದ.
ಛೇ, ನಮ್ಮ ಸಂಸ್ಕೃತಿಯನ್ನು ತಿಳಿಸುವ, ಅಥವ ವಿಜ್ಞಾನದ ಮಾಹಿತಿಗಳನ್ನು ತಿಳಿದುಕೊಳ್ಳುವ ಆಸಕ್ತಿಯೇ ಇಲ್ಲವಲ್ಲಾ ಎಂದೆನಿಸಿತು. ಹಾಗೆ ನನ್ನ postಗಳಿಗೆ ಅವನೇನೆಂದುಕೊಳ್ಳುವನು ಎಂದು ಓಹಿಸಿದೆ. ಇವನ್ಯಾವನೋ ಬರೀ facebook ಲೇ ಸಾಯ್ತಿರ್ತಾನೆ. ಹುಚ್ಚುಚ್ಚಾಗಿ ಬರಿತಾನೆ ಏನೇನೊ ಅಂತ ಅವನಷ್ಟೆ ಅಲ್ಲ ಇನ್ನು ಹಲವರೂ ಎಂದು ಕೊಳ್ಳಬಹುದು. ಕೆಲವರು ನೇರವಾಗಿ ಹೇಳಿಯೂ ಇದ್ದಾರೆ. ಹಾಗಾಗೆ ಮೇಲೆನ ಸಾಲುಗಳು ನಮಗಾಗೆ ಬರೆದು ಕೊಟ್ಟಹಾಗೆ ಇದೆ. 
ನೀವು social mediaವನ್ನು ಹೇಗೆ ಬಳಸಿಕೊಳ್ಳುತ್ತೀರೋ ಹಾಗೆ ಕಾಣುತ್ತದೆ. ನನ್ನ news feedಲಿ ಮೇಲಿನ ಅಂಶಗಳನ್ನು ಯಾರದರು ನನ್ನ ಸ್ನೇಹಿತರು ಪದೆ ಪದೆ ಹಾಕುತ್ತಿದ್ದರೆ ಅಂತವರನ್ನು unfollow ಮಾಡುತ್ತೇನೆ. ಹಾಗು ನಾನು groupಗಳಿಗೆ ಸೇರುವುದು ಕೂಡ ಅದರಿಂದ ಯಾವ ಮಾಹಿತಿ ನನಗೆ ಸಿಗುತ್ತದೆ ಎನ್ನುವುದರ ಆಧಾರದ ಮೇಲೆ. ಹಾಗಾಗಿ ನನ್ನ news feed ತುಂಬ ವಿಜ್ಞಾನದ, ಸಂಸ್ಕೃತಿಯ ಬಗ್ಗೆ, ಆಚರಣೆಗಳು, ಆಧ್ಯಾತ್ಮ, ಹೆಮ್ಮೆಯ ಮೋದಿ ಬಗ್ಗೆ ಅಥವ ಯಾವುದೇ ಜ್ಞಾನದ postಗಳೇ ತುಂಬಿರುತ್ತದೆ. ಅವುಗಳನ್ನು ಓದಿ ನನಗೆ ನಿಮ್ಮ ಬಳಿ ಹಂಚಿಕೊಳ್ಳಬೇಕೆಂದೆನಿಸಿ share ಮಾಡುತ್ತೇನೇ ಹೊರೆತು ಯಾವುದೇ likeಗಳಿಗಾಗಿ ಅಲ್ಲ. ಇನ್ನು ಒಂದು ಗಮನಿಸಿದ್ದೇನೆ, ನಾನು ಎಂದಾದರು ನನ್ನ profile pic update ಮಾಡಿದಾಗ ಎಲ್ಲಿಲ್ಲದ likeಗಳು ಬರುತ್ತದೆ. ಅದನ್ನು ನೋಡಿದಾಗ ನನಗನಿಸೋದು ಒಂದೆ, ನನ್ನ profile pic ಇಂದ ಅವರಿಗೇನು ಲಾಭ? ಅಷ್ಟೊಂದು ವಿಷಯಗಳನ್ನು ಬಿಟ್ಟು ನನ್ನ pic like ಮಾಡ್ತರಲಾ ಎಂದು. ನನ್ನ ಮುಖ ಅಷ್ಟೊಂದು ಇಷ್ಟ ಎಂತಾದರೆ ಖುಷಿಯೇ ಆದರೂ ನನಗೆ ಹೆಚ್ಚು ಖುಷಿಯಾಗೋದು ನನ್ನಿಂದ ಸ್ವಲ್ಪವಾದರೂ knowledge share ಆದಾಗ.
ಹಾ, ಇವಾಗ ಮತ್ತೆ ಹಾಡಿಗೆ ಬರೋಣ, (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಯಾರಿಗಾದರೂ ನನ್ನ post irritate ಆಗುತ್ತಿದ್ದರೆ ನನ್ನ ಮುಖಪುಟಕ್ಕೆ ಹೋಗಿ unfollow ಆಗಿ, ನಿಮ್ಮ ನೆಚ್ಚಿನ ನಾಯಕ ನಾಯಕಿಯರ updates ಮಾತ್ರ ಪಡೆದುಕೊಳ್ಳಿ.
ಇನ್ನೊಂದು ಹೇಳ ಬಯಸುತ್ತೇನೆ, ನಾನೆಂದು ಬರೆದವನಲ್ಲ, facebook ನನ್ನ ಬರೆಯಲು ಪ್ರೇರೇಪಿಸಿದೆ. ನನ್ನ drawings, paintings, programming ಗಳ ಬಗ್ಗೆ ಆಸಕ್ತರ ಬಳಿ ಹಂಚಿಕೊಳ್ಳಲು ಸಹಾಯ ಮಾಡಿದೆ. (ಹಾಡುವುದು ಅನಿವಾರ್ಯ ಕರ್ಮ ನನಗೆ, ಕೇಳುವವರಿಹರೆಂದು ನಾ ಬಲ್ಲೆ ಅದರಿಂದ, ಹಾಡುವೆನು ಮೈದುಂಬಿ ಎಂದಿನಂತೆ)
ನನ್ನ ಬಳಿ ಹೇಳ್ಕೊಳೊಕ್ಕೆ ತುಂಬ ಇದೆ ಸ್ವಾಮಿ, ಹೇಳ್ಕೊತೀನಿ. ನಿಮಿಗೆ ಬೇಡ ಎಂದ್ರೆ unfollow ಮಾಡಿ ಇಲ್ಲ unfriendಏ ಮಾಡಿ. ಒಂದಂತು ಸತ್ಯ,
"#ಆ_ನೋ_ಭದ್ರಾಃ_ಕೃತವೋ_ಯಂತು_ವಿಶ್ವತಃ "
ಅಂಥ ಋಗ್ವೇದದಲ್ಲಿ ಒಂದು ಮಾತಿದೆ. ಅಂದರೆ, ಒಳ್ಳೆ ವಿಷಯ ಪ್ರಪಂಚದ ಯಾವುದೇ ಮೂಲೆಲಿದ್ರೂ ತೆಗೆದುಕೊಳ್ಳಬಹುದು ಅಂಥ.