ಈ ವಾಟ್ಸಾಪ್ ಗ್ರೂಪುಗಳ ಉದ್ದೇಶವೇನು?
೧. ಗನ್ನು ಹಿಡಿದು ಚೀನಾ ವಿರುದ್ಧ ಯುದ್ಧಕ್ಕೆ ಹೋಗುವ ರೀತಿ ಚೀನಾ ವಸ್ತುಗಳನ್ನು ನಿಷೇಧಿಸಿ ಎಂದು ಹೇಳುವ ಅಸಾಧ್ಯದ(India imports 61.5 billion USD from China and Exports 9.5 billion USD to China. Think what if china stops importing from India- Wikipedia) ಮೆಸೇಜುಗಳನ್ನು ಫಾರ್ವರ್ಡ್ ಮಾಡಲಿಕ್ಕಾ?
೨. ಪ್ರತಿನಿತ್ಯ ಶುಭೋದಯ ಹೇಳಿ ಎಬ್ಬಿಸಲಿಕ್ಕಾ ಅಥವಾ ಶುಭರಾತ್ರಿ ಹೇಳಿ ಎಲ್ಲರನ್ನು ಮಲಗಿಸಲಿಕ್ಕಾ?
೩. ಕ್ರಿ.ಪೂ ದಲ್ಲಿ ಕಳೆದು ಹೋದ ಯಾವುದೋ ಮಗುವಿನ ಫೋಟೋ ಹಾಕಿ ಹುಡುಕಲು ಸಹಾಯ ಮಾಡಲಿಕ್ಕಾ?
೪. ಏನನ್ನೂ ಡಿಕ್ಲೇರ್ ಮಾಡದ ಯುನೆಸ್ಕೋ ಏನನ್ನೋ (Best PM, Best national anthem ಹೀಗೆ) ಡಿಕ್ಲೇರ್ ಮಾಡಿದ್ದನ್ನು ಶೇರ್ ಮಾಡಲಿಕ್ಕಾ?
೫. ಹುಲಿ ಬಂತು ಹುಲಿ ಕಥೆಂತೆ ನಿಜವಾಗಿಯೂ ರಕ್ತ ಬೇಕಾದಾಗ ಆ ಸಂದೇಶವನ್ನು ನಂಬದ ಹಾಗೆ ಮಾಡುವ ರಕ್ತದ ಅವಶ್ಯಕತೆ ಇದೆ, ಶೇರ್ ಮಾಡಿ ಎಂದು ಬರುವ ಸಂದೇಶವನ್ನು ಕಳಿಸಲಿಕ್ಕಾ?
೬. ಆ ಗ್ರೂಪಿನಿಂದ ಈ ಗ್ರೂಪಿಗೆ ನಾ ಮುಂದು ತಾ ಮುಂದು ಎಂದು ಬಂದ ಜೋಕುಗಳನ್ನು ವೀಡಿಯೋಗಳನ್ನು ಶೇರ್ ಮಾಡಲಿಕ್ಕಾ?
ಸ್ವಲ್ಪ ಯೋಚಿಸಿ ಯಾವುದೇ ವಿಷಯವನ್ನು ಅದರ ಸತ್ಯಾಸತ್ಯತೆಯನ್ನು ತಿಳಿದು ಹಂಚಿದರೆ ಒಳ್ಳೆಯದು. ಆ ರೀತಿ ಹಂಚಲೇ ಬೇಕು ಎಂದರೆ ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲಿ, ಯಾರಿಗೂ ಹೊರೆಯಾಗುವುದಿಲ್ಲ, ಬೇಕಾದವರು ನೋಡಿಕೊಳ್ಳುತ್ತಾರೆ. ವಾಟ್ಸಾಪಿನಲ್ಲಾದರೆ ಎಲ್ಲರ ಮೊಬೈಲಿನಲ್ಲೂ ಬಂದು ಬೀಳುತ್ತವೆ ನೀವು ಕಳಿಸಿದ ಸಂದೇಶಗಳು. ಯಾವುದೋ ಅತ್ಯವಶ್ಯಕ ಸಂದೇಶಗಳು ಈ ಹಾಳು ಜೋಕು, ಫೇಕು ಸಂದೇಶಗಳಲ್ಲಿ ಕಳೆದು ಹೋಗುತ್ತವೆ.