ಹಾಗೇ ವಿಜ್ಞಾನ ದಿನದಂದು ಏನಾದರೂ ವಿಜ್ಞಾನದ ಬಗ್ಗೆ ನನಗೆ ತಿಳಿದಿರೋ ಸಣ್ಣ ಮಾಹಿತಿ ಹೇಳೋಣಾ ಅನ್ನಿಸಿತು.
ಸಾಮಾನ್ಯವಾಗಿ ತುಂಬಾ ಜನ ಹೇಳ್ತಾರೆ, ನನಗೆ Facebook ನೋಡ್ಲಿಕ್ಕೆ ಟೇಮ್ ಇಲ್ಲ ಅಂತ. ನಿಜವಾಗಿಯೂ ಅವರಾಡಿದ ಮಾತಿನ ಅರ್ಥ ಬೇರೆನೇ ಅರ್ಥಕೊಡೊತ್ತೆ. ನನಗೂ ಗೊತ್ತಿರಲಿಲ್ಲ, ಹಾಗೆ ಎಲ್ಲೋ ಒದಿದ್ದು, ನೋಡಿದ್ದು.
ವಿಚಿತ್ರ ಏನೆಂದರೆ, ಯಾರಾದರೂ ನನಗೆ time ಇಲ್ಲ ಎಂದರೆ ಅವರು ಬೆಳಕಿನ ವೇಗದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರ್ಥ. ನಂಗೆ ಗೊತ್ತು ನಿಮಗೆ ಮುಂದಿನದ್ದು ಓದಲಿಕ್ಕೆ ಟೇಮ್ ಇಲ್ಲ ಅಂತ..
ಜಗತ್ತಿನಲ್ಲಿ ಬೆಳಕಿನ ವೇಗದಲ್ಲಿ ಯಾವ ವಸ್ತುವೂ ಚಲಿಸಲು ಸಾಧ್ಯವಿಲ್ಲ ಎಂದು ನಮಗೆಲ್ಲ ತಿಳಿದಿರುವ ವಿಷಯ, ಆದರೂ time ಇಲ್ಲ ಎಂದು ಅವರೆಲ್ಲ ಹೇಗೆ ಬೆಳಕಿನ ವೇಗದಲ್ಲಿ ಚಲಿಸಲು ಸಾಧ್ಯವೋ ನನಗೆ ಗೊತ್ತಿಲ್ಲ.
ವಿಷಯಕ್ಕೆ ಬರೋಣ, ಅಕಸ್ಮಾತ್!! ನಾವು ಬೆಳಕಿನ ವೇಗದಲ್ಲಿ ಪ್ರಯಾಣಿಸಿದರೆ??
ಒಂದು ಕಾರು ಬಾಹ್ಯಾಕಾಶದಲ್ಲಿ ತನ್ನ ಹೆಡ್ ಲೈಟನ್ನು ಆನ್ ಮಾಡಿದೆ ಎಂದಿಟ್ಟುಕೊಳ್ಳಿ, ಅದರಿಂದ ಹೊರೆಟ ಬೆಳಕಿನ ಕಿರಣ ಒಂದು ಸೆಕೆಂಡಿನಲ್ಲಿ ಎಷ್ಟು ದೂರ ಚಲಿಸುತ್ತದೋ ಅದನ್ನು ಲೈಟ್ ಸೆಕೆಂಡ್ ಎನ್ನುತ್ತಾರೆ. 1 ಲೈಟ್ ಸೆಕೆಂಡ್ = 299792 ಕಿ.ಮೀ. ಅದೇ ಸಮಯದಲ್ಲಿ ಇನ್ನೊಂದು ಕಾರು ಬೆಳಕಿನ ವೇಗಕ್ಕೆ (99.999999999999999%)ಅತೀ ಹತ್ತಿರದ ವೇಗದಲ್ಲಿ ಮೊದಲನೇ ಕಾರಿನ ಹೆಡ್ ಲೈಟಿನಿಂದ ಚಲಿಸಲು ಪ್ರಾರಂಭಿಸಿದರೆ??
ನಮ್ಮ ಒಂದು ಲೈಟ್ ಸೆಕೆಂಡಿನ ನಂತರ ಎರಡು ಕಾರಿನ ಲೈಟ್ ಒಂದೇ ದೂರವನ್ನು ಕ್ರಮಿಸಿರುತ್ತದೆ. ಹಾಗದರೆ ಚಲಿಸುತ್ತಿದ್ದ ಕಾರಿನ ಲೈಟ್ ಕಡಿಮೆ ದೂರ ಚಲಿಸಿತ್ತಾ? ಇಲ್ಲ, ಬೆಳಕು ಎರಡರಲ್ಲೂ ಒಂದೇ ದೂರವನ್ನು ಕ್ರಮಿಸಿರೊತ್ತೆ, ಆದರೆ ಚಲಿಸುತ್ತಿದ್ದ ಕಾರಿನಲ್ಲಿದ್ದವರಿಗೆ ಕಡಿಮೆ ದೂರ ಕ್ರಮಿಸಿದೆ ಎಂದೆನಿಸುತ್ತದೆ, ಹೇಳಬೇಕೆಂದರೆ ಅವರಿಗೆ ಇನ್ನು ಒಂದು ಸೆಕೆಂಡ್ ಆಗಿರುವುದೇ ಇಲ್ಲ. ನಮಗೆ ಒಂದು ಸೆಕೆಂಡ್ ಆದ ಮೇಲೆ ಅವರಿಗೆ ಒಂದು ಸೆಕೆಂಡ್ ಆಗುತ್ತದೆ. ಅಂದರೆ ನಮ್ಮ ಚಲಿಸುವ ವೇಗ ಬೆಳಕಿನ ವೇಗಕ್ಕೆ ಸಮೀಪಿಸುತ್ತಾ ಹೋದರೆ ಸಮಯ ನಿಧಾನವಾಗುತ್ತಾ ಬರುತ್ತದೆ (Time is stretchable).
ಒಂದು ವೇಳೆ ಬೆಳಕಿನ ವೇಗದಲ್ಲಿ ಚಲಿಸಿದರೆ ನಮ್ಮ ಸಮಯ ಸೊನ್ನೆಯಾಗುತ್ತದೆ. ಅದೆ ಹೇಳ್ತಾರಲ್ಲಾ, ನಂಗೆ ಟೇಮ್ ಇಲ್ಲ ಅಂತ ಹಾಗೆ.
No comments:
Post a Comment