Wednesday, November 25, 2015

ನನ್ನ ಭಾರತ ನನ್ನ ಹೆಮ್ಮೆ

ನನ್ನ ಭಾರತ ಸುರಕ್ಷಿತವಾಗಿದೆ, ನನ್ನ ಭಾರತ ಸಹಿಷ್ಣು, ನನ್ನ ಭಾರತ ಸುಂದರ, ನನ್ನ ಭಾರತ ಶ್ರೀಮಂತ, ನನ್ನ ಭಾರತ ವಿಶ್ವಗುರು, ನನ್ನ ಭಾರತ ಜಗತ್ತಿಗೆ ಮಾದರಿ.
ಈತರ ಹೇಳಿ ಜಗತ್ತಿಗೆ ನಮ್ಮ ಮೇಲೆ ನಂಬಿಕೆ ಬರೋ ಹಾಗೆ ಮಾಡ್ಬೇಕ್ರಯ್ಯಾ, 4 ಜನಕ್ಕೆ, 4 ದೇಶ, 4 ಭಾಷೆ ಗೊತ್ತಿರೋರು.
ಭಾರತ ತುಂಬಾ ಕೊಲೆ ನಡಿತಾ ಇದಾವೆ, ಕೆಟ್ಟ ಚರಂಡಿ, ದಟ್ಟ ದರಿದ್ರ, ನಮ್ಮನ್ನ ಮಾತ್ರ ನೋಡಬೇಡಿ, ನಮ್ಮಲ್ಲಿ ಕಲಿಯೋದು ಏನು ಇಲ್ಲ.
ಈತರ ಹೇಳಿ,India is my country, I love it, I feel fortunate for being born here ಅಂದ್ರೆ ಏನು ಅರ್ಥ? ಅಂದ್ರೆ ವಿರೋಧಾಭಾಸ ಆಗೊಲ್ವೇ? ಈತರ ಹೇಳಿ TV program ಮಾಡಿ ದುಡ್ಡು ಮಾಡಿಕೊಳ್ಳೋದಲ್ಲ. ನನ್ನ ದೇಶದ positives ಹೇಳಿ, ಹೆಮ್ಮೆ ಇಂದ ಬೀಗೋ ಹಾಗೆ ಮಾಡಿ.‪#‎JaagoBharath‬ ತರ ದೇಶವನ್ನು ಒಳ್ಳೆ ರೀತಿಯಲ್ಲಿ ಬಿತ್ತರಿಸಿ. ಈ ದೇಶಕ್ಕೆ ಎಷ್ಟು ಜನ ಪ್ರಾಣ ತೆತ್ತಿದಾರೆ, ಋಷಿಮುನಿಗಳ ಕರ್ಮ ಭೂಮಿ, ವಿಜ್ಞಾನದ ಎಷ್ಟೋ ಆವಿಷ್ಕಾರಗಳು ಮೊದಲು ನನ್ನ ದೇಶದಲ್ಲೇ ಆಗಿದ್ದು, ತತ್ವ ಜ್ಞಾನಿಗಳು ತಮ್ಮ ಅಪಾರ ಜ್ಞಾನದಿಂದ ಈ ದೇಶಕ್ಕೆ ಬಲಿಷ್ಟ ಸಿದ್ಧಾಂತದ ತಳಪಾಯ ಹಾಕಿದಾರೆ. ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ, ಅವುಗಳನ್ನೇ ಮುಂದು ಮಾಡಿತೋರಿಸೋ ಕೆಟ್ಟ ಮನಸ್ಸು ಯಾರಿಗ್ರಯ್ಯಾ ಬೇಕು? ಅಹಿಂಸೋ ಪರಮೋ ಧರ್ಮ, ವಸುದೈವ ಕುಟುಂಬಕಂ, ಸರ್ವೇ ಜನೋ ಸುಖಿನೋ ಭವಂತು, ಕಾಯಕವೇ ಕೈಲಾಸ, ಸತ್ಯಮೇವ ಜಯತೆ ಇವೆಲ್ಲಾ ಸ್ವಾಮಿ ನನ್ನ ದೇಶದಲ್ಲಿರೋ ಗಾಳಿ, ಮಣ್ಣು, ನೀರಲ್ಲಿ ಇದೆ. ISISಲಿ ಇರುವ ಭಾರತದ ಉಗ್ರರು ಅಶಕ್ತರಂತೆ ಉಗ್ರವಾದಕ್ಕೆ. ಯಾಕಂದ್ರೆ ಅವ್ರು ಇಲ್ಲಿ ಮಣ್ಣು, ನೀರು, ಗಾಳಿ ಜೊತೆ ಬೆಳೆದೋರು. ನಾವು ಕೆಟ್ಟ ಕೆಲಸ ಮಾಡ್ತೀವಿ ಅಂದ್ರು ಸರಿ ಮಾಡೋಕೆ ಬರೊಲ್ಲಾ ಸ್ವಾಮೀ.


ನನ್ನ ಭಾರತ ಬಗ್ಗೆ ಒಳ್ಳೆದೆಲ್ಲಾ ಹೇಳಿದ್ದು ಸುಳ್ಳು ಅನ್ನೋರು google ಅಂತ ಒಂದು ಇದೆ, ಅಲ್ಲಿ ನಿಮಗೆ ಬೇಕಾದ statistics ಸಿಗೊತ್ತೆ, ಓದಿ, ಓದಿದ ಮೇಲೂ, ಭಾರತ ಕೆಟ್ಟೋಗಿದೆ ಅನ್ನೋರು ಒಣ ಹಾಕಿರೋ ## pack ಮಾಡ್ಕೋಂಡು ಹೋಗಿ, ನನ್ ಮಕ್ಳಾ...
ಧನ್ಯವಾದಗಳು.
‪#‎ನನಗನಿಸಿದ್ದು‬ ಏನ್ ಗೊತ್ತಾ..
‪#‎IndiaIsTolerant‬
‪#‎IndiaIsSafe‬
‪#‎IndiaIsGreat‬

Saturday, November 21, 2015

ಗಣಿತ ನಿಜವಾಗಿಯೂ ಒಂದು ವಿಷಯವಲ್ಲ, ಅದು ಒಂದು ಭಾಷೆ

ಬಹಳಷ್ಟು ಗಣಿತಜ್ಞರು ಗಣಿತದ ಸೌಂದರ್ಯವನ್ನು ಕಂಡಿದ್ದು ಗಣಿತದಲ್ಲಿ ಅಲ್ಲ ಬೇರೆಯದರಲ್ಲಿ. ಹೇಗೆ ತಾಯಿ ತನ್ನ ಮಕ್ಕಳಲ್ಲಿ ಸಂತೋಷ ಕಾಣುತ್ತಾಳೆಯೋ. ಗುರು ವಿಧ್ಯಾರ್ಥಿಗಳ ಯಶಸ್ಸಿನಲ್ಲಿ ಸಂತೋಷ ನೋಡುತ್ತಾರೋ ಹಾಗೆ. ಹಾಗಾಗೇ ಗಣಿತವನ್ನು ವಿಜ್ಞಾನದ ತಾಯಿ ಎಂದು ಹೋಲಿಸಿದ್ದು. Maths is mother of all sciences. ಹೌದು, ಗಣಿತದ ಸೌಂದರ್ಯ ಇರುವುದು ಗಣಿತದಲ್ಲಿ ಅಲ್ಲ ಬೇರೆಯದರಲ್ಲಿ. ಶುದ್ಧ ಗಣಿತ ನಿಜವಾಗಿಯೂ ಭಯಂಕರವಾಗಿರುತ್ತದೆ. ಅರ್ಥ ಮಾಡಿಕೊಳ್ಳಲು ಬಲು ಕಠಿಣ. ನಿಮ್ಮ ಕೈಯಲ್ಲಿರುವ ಬೆರಳುಗಳನ್ನು ಎಣಿಸಿ ಎಂದಾಕ್ಷಣ ಸುಲಭವಾಗಿ ಏಣಿಸುತ್ತೀರಲ್ಲವೇ? ಆದರೆ ಅದರ ಹಿಂದೆ ಒಂದು ದೊಡ್ಡ ಗಣಿತದ ಸಿದ್ದಾಂತವಿದೆ (countable things, which means things that can be bijectively mapped into natural numbers). ಗಣಿತ ನಮಗಾಗಿ ಬೆರಳೆಣಿಕೆಯ ಹಾಗೆ ಸುಲಭವನ್ನಾಗಿ ಮಾಡಿಯೂ ಕೂಡ ಕೊಡುತ್ತದೆ. ಹಾಗಾಗೆ ನಾನು ಹೇಳಿದ್ದು ಗಣಿತದ ಸಂದರ್ಯ ಗಣಿತದಲ್ಲಿ ಇಲ್ಲ ಎಂದು.
ವಿಜ್ಞಾನದ ಇತಿಹಾಸ ನೋಡೋಣ, ಸೌರಮಂಡಲದ ಪರಿಕಲ್ಪನೆ ಕೊಟ್ಟ ನಿಕೋಲಸ್ ಕೋಪರ್ನಿಕಸ್(Nicolaus Copernicus)ಗೆ ಪ್ರೇರಣೆ ಒಬ್ಬ ಜರ್ಮನಿಯ ಗಣಿತಜ್ಞ ಜೊಹಾನಸ್ ಕೆಪ್ಲರ್(Johannes Kepler). ಕೆಪ್ಲರ್ ಗಣಿತವನ್ನು ಉಪಯೋಗಿಸಿ ಗ್ರಹಗಳ ಚಲನೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಒಂದು ಸಮೀಕರಣದಲ್ಲಿ(equation) ಅಡಗಿಸಿಟ್ಟಿದ್ದ. ಸಮೀಕರಣ ತಯಾರಿಸಲು 200-300ಪುಟಗಳಷ್ಟು ಲೆಕ್ಕವನ್ನು 70 ಬಾರಿ ಮಾಡಿದ್ದನೆಂದರೆ ಗಣಿತದ ಸೌಂದರ್ಯ ಎಲ್ಲಿದೆ ಎಂದು ನೀವೇ ಊಹಿಸಿ.
ಗೆಲೆಲಿಯೋ ಗೆಲೆಲಿ ಯಾರಿಗೆ ತಾನೆ ತಿಳಿದಿರುವುದಿಲ್ಲ? ಭೂತಕನ್ನಡಿ ಎಂದ ಮಕ್ಕಳಿಗೆಲ್ಲಾ ಈತ ಗೊತ್ತು. ದೂರದರ್ಶಕ(Telescope) ಕಂಡು ಹಿಡಿದದ್ದು ಗೆಲೆಲಿ ಆದರೆ ಇಲ್ಲಿ ಗಮನಿಸಬೇಕಾದದ್ದು ಆತ ಒಬ್ಬ ಗಣಿತಜ್ಞನೆಂದು, ಆತನೂ ಒಂದು ಸಮೀಕರಣ ನಿರ್ಮಿಸಿ, ದೂರದರ್ಶಕದ ಸಮರ್ಥ ಉಪಯೋಗವನ್ನು ಅದರಲ್ಲಿ ಹುದುಕಿಸಿಟ್ಟ. ಸೌಂದರ್ಯ ಸಮೀಕರಣಕ್ಕಿಂತ ದೂರದರ್ಶಕದಲ್ಲೇ ಹೆಚ್ಚು ಅಲ್ಲವೇ?
ಕಾಸ್ಮೋಸ್, ಗುರುತ್ವಾಕರ್ಷಣೆ ಎಂದು ವಿಶ್ವದ ಪರಿಕಲ್ಪನೆಗೆ ಒಂದು ದ್ರುಡವಾದ ರೂಪ ಕೊಟ್ಟ ಐಸಾಕ್ ನ್ಯೂಟನ್ ಒಬ್ಬ ಗಣಿತಜ್ಞ. ಸೌಂದರ್ಯ ಹಣ್ಣು ಮರದಿಂದ ಬೀಳುವುದರಲ್ಲಿ ಇದೆಯೇ ಹೊರೆತು ಉಫ್...!!! gravity equationಲಿ ಇಲ್ಲ.
ಮಂದಗತಿಯಲ್ಲಿ ಓಡುತ್ತಿದ್ದ ಭೂಮಿಯನ್ನು ವೇಗವಾಗಿ ಓಡಿಸಿದ್ದು ಇವಾಗಿನ fast world ಗೆ ಕಾರಣ ಯಾವುದಿರಬಹುದು? ಪವನ ಶಕ್ತಿ ಉಪಯೋಗಿಸಿ ಚಲಿಸುವ ವಿಂಡ್ಮಿಲ್. ಹೌದು ಪವನ ಚಾಲಿತ ಯಂತ್ರಗಳು ಕೈಗಾರಿಕಾ ವಲಯದಲ್ಲಿ ಒಂದು ಕ್ರಾಂತಿಯನ್ನು ಮಾಡಿತು ಎಂದರೆ ತಪ್ಪಾಗಲಾಗದು. ಆದರೆ ಅದರ ವಿನ್ಯಾಸ ಮಾಡಿದ್ದು ಒಬ್ಬ ಗಣಿತಜ್ಞ ಸೈಮನ್ ಸ್ಟೀವನ್(Simon Stevin). ಸ್ಟೀವನ್ ನೀರನ್ನು ಎತ್ತಲು ಮಾತ್ರ ಉಪಯೋಗಿಸುತ್ತಿದ್ದ ವಿಂಡ್ಮಿಲ್ ಗಳನ್ನು ಗಣಿತದ ಸಮೀಕರಣದಲ್ಲಿ ಹಾಕಿ ರುಬ್ಬಿ ಅದರಿಂದ ಹೆಚ್ಚು ವೇಗ ತೆಗೆದು ಕೈಗಾರಿಕಾವಲಯದ ಉತ್ಪಾದನೆಯ ವೇಗ ಹೆಚ್ಚಾಗುವಂತೆ ಮಾಡಿದ. ಆ ಸಮೀಕರಣಕ್ಕಿಂತ ವಿಂಡ್ಮಿಲ್ ನೋಡಲು ಸುಂದರ ಅಲ್ಲವೇ?
ಆಕಾಶವನ್ನು ನೋಡುತ್ತಾ ಕೇಳಿಕೊಂಡ What is out there? ಎಂಬ ಪ್ರಶ್ನೆ ಮನುಷ್ಯನನ್ನು ಸೌರಮಂಡಲಕ್ಕೆ ಕರೆದುಕೊಂಡು ಹೋಗಿತು. ಸಮೀಕರಣಗಳಲ್ಲಿ ವಿಶ್ವವನ್ನು ಹುದುಕಿಸಿಟ್ಟ ನಂತರ ಹುಡುಕಾಟ ತನ್ನಲ್ಲೇ ಶುರುವಾಯಿತು. What is the world made of? ಅದಕ್ಕೂ ಉತ್ತರ ಸಮೀಕರಣದಲ್ಲೇ ಸಿಕ್ಕಿತೆಂದರೆ ಗಣಿತ ತಾಯಿಯಲ್ಲದೇ ಮತ್ತೇನು. ಹೌದು, ಇಟಲಿಯ ಗಣಿತಜ್ಞ ಬೊರೆಲ್ಲಿ(Giovanni Borelli) ಮನುಷ್ಯನ ಕೈ ಕಾಲುಗಳ ಚಲನೆಯ ಹಿಂದೆ ಅಡಗಿರುವ ಯಾಂತ್ರಿಕ ಕಲ್ಪನೆಯನ್ನು ತನ್ನ ಸಮೀಕರಣದಿಂದ ವಿವರಿಸುತ್ತಾನೆ. 
ನಾವೆಲ್ಲ ಉಪಯೋಗಿಸುವ computer ಬಹಳಷ್ಟು ಸುಂದರವಾಗಿದೆಯಲ್ಲವೇ? ಆದರೆ ಆ ಸೌಂದರ್ಯ, ಹಿಂದೆ ಇರುವ ಗಣಿತದಿಂದ ಬಂದಿದ್ದು, ಹಾಗು ಅದನ್ನು ಸೃಷ್ಟಿಸಿದ್ದು ಒಬ್ಬ ಗಣಿತಜ್ಞ ಚಾರ್ಲ್ಸ್ ಬ್ಯಾಬೇಜ್(Charles Babbage).


ಒಟ್ಟಾರೆ ‪#‎ನನಗನಿಸಿದ್ದು‬ ಏನೆಂದರೆ, ಗಣಿತ ನಿಜವಾಗಿಯೂ ಒಂದು ವಿಷಯವಲ್ಲ, ಅದು ಒಂದು ಭಾಷೆ, ಅದರಲ್ಲಿಯೇ ವಿಜ್ಞಾನ ಬರೆದಿರುವುದು. ಪ್ರಕೃತಿಯ ಯಾವುದೇ ಕ್ರಿಯೆ, ವಸ್ತುವನ್ನು ವಿವರಿಸಲು ಉಪಯೋಗಿಸುವ ಭಾಷೆ ಗಣಿತ. ಹಾಗಾಗಿಯೇ ಇನ್ನೂ ಅನೇಕ ಗಣಿತಜ್ಞರು ತಮ್ಮನ್ನು ಬೇರೆಯದರಲ್ಲೇ ಗುರುತಿಸಿಕೊಳ್ಳುತ್ತಾರೆ. ಶುದ್ಧ ಗಣಿತ ಒಂದು ಕಠಿಣ ಕಾವ್ಯ, ಕೆಲವೇ ಕೆಲವು ಜನರು ಅದನ್ನು ಮೆಚ್ಚಬಹುದು. ಆದರೆ ಎಲ್ಲರೂ ಗಣಿತದ ಸೌಂದರ್ಯವನ್ನು ಸವಿಯಬೇಕಾದರೆ ಗಣಿತದಲ್ಲಿ ಬಿಟ್ಟು ಬೇರೆಯದರಲ್ಲಿ ಗಣಿತವನ್ನು ಹುಡುಕಿದಾಗ ಮಾತ್ರ ಕಾಣಸಿಗುತ್ತದೆ.
ಬಹಳ ದಿನದ ನಂತರ ಗಣಿತದ ಬಗ್ಗೆ ಬರೆಯಲು ಮನಸ್ಸಾಗಿದ್ದು, ಮೋದಿಜಿ ಜಗತ್ತಿಗೆ ಪರಿಚಯಿಸಿಕೊಟ್ಟ ರಾಜಸ್ತಾನದ ಇಮ್ರಾನ್ ಖಾನ್ ಎಂಬ ಗಣಿತ ಶಿಕ್ಷಕ 52 ಮೊಬೈಲ್ ಆಪ್ ಗಳನ್ನು ನಿರ್ಮಿಸಿದ್ದನ್ನು ಕೇಳಿ. ಇತ್ತೀಚೆಗೆ ಗಣಿತವನ್ನು ಇಷ್ಟಪಡುವವರು ಅದೇಕೋ programming ಅಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ, ನನ್ನನ್ನೂ ಸೇರಿ. ಏಕಿರಬಹುದೆಂದು ಯೋಚಿಸಿದಾಗೀ ಮೇಲಿನ ವಿಷಯ ತಲೆಯಲ್ಲಿ ಹೊಳೆಯಿತು, ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

Friday, November 20, 2015

11 ಮೇ 1998 ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕು ಭಾರತದ ಶತ್ರುಗಳಿಗೆಲ್ಲ ಅಂದು ಶತ್ರುವಾದ ದಿನ

1974ರಲ್ಲಿ ಇಂದಿರಾ ಗಾಂಧಿಯ ಆಡಳಿತದಲ್ಲಿ ಪರೀಕ್ಷೆ ನಡೆದಿತ್ತಾದರೂ ಇಂದಿರಾ ಗಾಂಧಿಯವರಿಗೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಜಗತ್ತು ಬಲಾಡ್ಯವಾಗುತ್ತಿದ್ದಾಗ ನಾವು ಕೈ ಕಟ್ಟಿ ಶಾಂತಿ ಮಂತ್ರ ಪಟಿಸುವುದರಲ್ಲಿ ಅರ್ಥವಿರಲಿಲ್ಲ. ನಾವಾಗೇ ಮೇಲೆರಗುವುದಿರಲಿ, ಮೇಲೆ ಬಂದವರನ್ನೂ ಕೂಡ ಶಾಂತಿ ಮಾತುಕತೆಯಲ್ಲಿ ಬಗೆಹರಸಿಕೊಳ್ಳಲು ಮೊದಲು ಪ್ರಯತ್ನಿಸಿ, ಒಪ್ಪದಿದ್ದಲ್ಲಿ ಶಿಕ್ಷೆ ಅನಿವಾರ್ಯ ಎಂಬುದನ್ನು ಕೃಷ್ಣ ಮಹಾಭಾರತದಲ್ಲಿ ಹಲವು ಕಡೆ ತೋರಿಸಿಕೊಟ್ಟಿದ್ದಾನೆ. ಅದಕ್ಕಾದರೂ ನಾವು ಸಿದ್ಧರಿರಬೇಕಲ್ಲವೇ. ಇರಲಿ, ಆದರೆ ಎರಡನೇ ಬಾರಿ ಪೋಕ್ರಾನಲ್ಲಿ ಅಣು ಬಾಂಬ್ ಸಿಡಿಸಿದ್ದು ನಿಜಕ್ಕೂ ಭಾರತ ತನ್ನ ಶಕ್ತಿಯನ್ನು ಹಾಗು ಗೌಪ್ಯವಾಗಿ ಪರೀಕ್ಷೆ ನಡೆಸಿ ಯುಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದು ವಾಜಪೇಯಿ. ವೈಜ್ನಾನಿಕ ಕ್ಷೇತ್ರದಲ್ಲಿ ಹೋಮಿ ಜಹಂಗೀರ್ ಬಾಬ, ವಿಕ್ರಮ್ ಸಾರಭಾಯ್ ಹಾಗು ಅಬ್ದುಲ್ ಕಲಾಮ್ ಅವರ ಕೊಡುಗೆ ಅಪಾರ. ಎಷ್ಟೋ ಪ್ರದಾನಿಗಳು ಬಂದರೂ ಹೋದರೂ ಆದರೆ ಪರೀಕ್ಷೆ ನಡೆಸಲು ಮುಂದಾಗಲಿಲ್ಲ, ಕಾರಣ ಇಷ್ಟೆ ತಮ್ಮ ಅಧಿಕಾರ. ಆದರೆ ಅಟಲ್ ಜಿ ನಿಜಕ್ಕೂ ಯಾವುದೋ ಇಂಗ್ಲೀಷ್ ಚಲನಚಿತ್ರದಂತೆ ತಂತ್ರ ರೂಪಿಸಿ ಗೌಪ್ಯವಾಗಿ ಭಾರತದ ಶಕ್ತಿ ಜಗಜ್ಜಾಹಿರ ಮಾಡಿದರು. 11 ಮೇ 1998ರಂದು ವಾಜಪೇಯಿ ಮಾಧ್ಯಮದೋರಿಗೆ ವಿಷಯ ತಿಳಿಸಿದಾಗ ವಿಶ್ವ ಭಾರತದ ಕಡೆ ತೆರೆದ ಬಾಯಿಯಲ್ಲಿ ನೋಡಿತ್ತು. ಅಮೇರಿಕಾದ ಬಲಾಢ್ಯ ಸೆಟಲೈಟ್ಸ್ ಗಳ ಕಣ್ಣಿಗೆ ಕಾಣದೇ ಉಡಾಯಿಸಿದ್ದರು.
ನಿಜಕ್ಕೂ ಅದು ಒಂದು ಮೈಲಿಗಲ್ಲು. ಅದಾದ ನಂತರ ಮತ್ತೆ ಕಳೆದ ಒಂದು ವರ್ಷದಿಂದ ವಿಶ್ವ ನಮ್ಮ ಕಡೆ ನೋಡುತ್ತಿದೆ. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕೆ ಹಲವು ದೇಶಗಳು ನಮ್ಮ ಪರ ನಿಲ್ಲುತ್ತಿವೆ. ಈ ಮಧ್ಯದ ಅವದಿಯಲ್ಲಿ ಭಾರತ ಎಲ್ಲಿ ಅಡಗಿತ್ತೋ ಗೊತ್ತಿಲ್ಲ.
ಚಕ್ರವರ್ತಿ ಸೂಲಿಬೆಲೆಯವರೂ ಕೂಡ ಇದರ ಬಗ್ಗೆ ಬರೆದಿದ್ದರು. ಆದರೆ ನಾನು ರಷ್ಯಾದ ಅಧ್ಯಕ್ಷ ಪುಟಿನ್ ಸಿರಿಯಾದ ಮೇಲೆ ನಡೆಸುತ್ತಿರುವ ದಾಳಿಯ ವೀಡಿಯೋಗಳನ್ನು ನೋಡಿದಾಗ, ನಮ್ಮ ಭಾರತ ಎಷ್ಟರ ಮಟ್ಟಿಗೆ ತಯಾರಿದೆ ಎಂದು ಹುಡುಕುತ್ತಿದ್ದೆ. ಆಗ ಸಿಕ್ಕ ಈ ವೀಡಿಯೋ ನಿಜಕ್ಕೂ ನನ್ನ ಮೈ ನವಿರೇರಿಸಿತು. ವೀಡಿಯೋ ಜೊತೆ #ನನಗನಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
https://www.youtube.com/watch?v=DjrKX1EJGW8

Monday, November 2, 2015

ನಮ್ಮ ಕಾಲದಲ್ಲಿ ಹೀಗಿರಲಿಲ್ಲ‬..

http://ddnational.blogspot.in/sea…/label/Doordarshan%20Films
ಒಮ್ಮೆ ಇದಕ್ಕೆ ಬೇಟಿ ನೀಡಿ. ದೂರದರ್ಶನದಲ್ಲಿ ಬರುತ್ತಿದ್ದ ಕಾರ್ಯಕ್ರಮಗಳ ಸಂಗ್ರಹ.
ನೀಡಿದವರಲ್ಲಿ 90ರ ದಶಕದವರನ್ನು ಈ blog 15-20 ವರ್ಷ ಹಿಂದಕ್ಕೆ ಎಳೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವೇ ಇಲ್ಲ. ನಂತರದವರಿಗೆ ಹಿಂದಿನವರ ಅಭಿರುಚಿ ನಗೆ ತರಸುವುದರಲ್ಲಿ ಸಂದೇಹವಿಲ್ಲ.
ಸುಮಾರು 90ರ ದಶಕ. ಸಿದ್ಧಾರ್ಥ್ ಹಾಗು ರೇಣುಕಾ ಸಹಾನೆ ನಡೆಸಿ ಕೊಡುತ್ತಿದ್ದ ಸುರಭಿ - ಯಾರಿಗೆ ತಾನೆ ಆ ಕಾರ್ಯಕ್ರಮದ ಪ್ರಾರಂಭದಲ್ಲಿ ತೋರಿಸುತ್ತಿದ್ದ ಮಡಕೆ ಮಾಡುವುದು,ಅದರ ಒಳಗೆ ನಾವೇ ನುಸುಳುವ ಹಾಗೆ ಆಗುತ್ತಿದ್ದ ಅನುಭವ ಹಾಗು ವಿವಿಧ ಚಿತ್ರಗಳು, ವಸ್ತುಗಳು ಅದರೊಳಗೆ ಬರುವ ಹಾಗೆ ಮಾಡಿದ್ದ ಆ graphics ನೆನಪಾಗುವುದಿಲ್ಲ ಹೇಳಿ. ನಮ್ಮ ಪಾಲಿಗೆ ಅದು ಮಾಯೆಯೆ ಸರಿ, ಅದೊರೊಳಗೆ ಹೇಗೆ ಅವೆಲ್ಲಾ ಬಂದವು ಎಂಬುದು ನಮ್ಮೆಲ್ಲರ ಯಕ್ಷಪ್ರಶ್ನೆ. 93ರಲ್ಲಿ ಪ್ರಾರಂಭವಾಗಿತ್ತಂತೆ, ನನಗೆ ನೆನಪಿದ್ದಿದ್ದು 98-99ರದ್ದು. ಲಿಮ್ಕಾ ಪುಸ್ತಕದಲ್ಲಿ ಅತಿ ಹೆಚ್ಚು ವೀಕ್ಷಕರ ಪ್ರತಿಕ್ರಿಯೆ(ಸುಮಾರು ಒಂದು ವಾರಕ್ಕೆ 14ಲಕ್ಷ ಪತ್ರಗಳು) ಹೊಂದಿದ ಕಾರ್ಯಕ್ರಮವಂತೆ. ಅದನ್ನು ಪ್ರಾಯೋಜಿಸಿದ್ದು ಅಮೂಲ್.
https://www.youtube.com/watch?v=J1rNDOdFOYY
"ಅಮೂಲ್ ದಿ ಟೇಸ್ಟ್ ಆಫ್ ಈಂಡಿಯಾ", ದೇಶದ ಎಲ್ಲಾ ಸಂಸ್ಕೃತಿಯನ್ನು ತೋರಿಸುವ ಹಾಲಿನ ಉತ್ಪನ್ನಗಳ ಜಾಹಿರಾತು ನಮ್ಮೆಲ್ಲರ ಬಾಯಲ್ಲಿ ನೀರೂರಿಸುತ್ತಿದ್ದಾದರೂ ಆ ಕಾಲದಲ್ಲಿ ಅದು ಸ್ವಲ್ಪ ದುಬಾರಿಯೇ.
https://www.youtube.com/watch?v=mndv6gdZ7M0
ಇದೇ ತರ ಮತ್ತೊಂದು ಚಾಕ್ಲೇಟ್ ನೀರೂರಿಸಿದ್ದು ಎಂದರೆ cadbury dairy milk ಆಟಗಾರ six ಹೊಡೆದಾಗ ಮೈದಾನಕ್ಕಿಳಿದು ಬಂದು ಹುಡುಗಿ ವಿಚಿತ್ರವಾಗಿ ಕುಣಿಯುತ್ತಿದ್ದುದ್ದು, ತಾಯಿ ಕುಂಟಾಪಿಲ್ಲೆ ಆಡುತ್ತಿದ್ದುದ್ದು ಏನೋ ಅದರಲ್ಲಿ ನಿಜವಾಗಿಯೂ "ಕುಚ್ ಖಾಸ್ ಹೈ", ಈಗಿನ ಹಾಗೆ kiss me ಅಂತ ಬಾಯೆಲ್ಲ ಮೆತ್ತಿಕೊಂಡು, ರಾಡಿ ಮಾಡಿ ಅಸಹ್ಯವಾಗಿ ಬೆರಳನ್ನು ಚೀಪುತ್ತಿರಲಿಲ್ಲ, ತಿನ್ನುತ್ತಿರಲಿಲ್ಲ.
ಒಂದೇ ಚಾಕ್ಲೇಟ್ - ತಿನ್ನುವ ವಿಧಾನ ಮಾತ್ರ ಬೇರೆ, ಎಂತ ಬದಲಾವಣೆ ಅಲ್ವಾ.
https://www.youtube.com/watch?v=uuDKvYYMjsM
ಇನ್ನು cricket ಎಂದರೆ ನಮ್ಮೆಲ್ಲರ ಜೀವವೇ ಆಗಿತ್ತು, ಗುಂಗುರು ಕೂದಲಿನ ಸಚಿನ್ ವೇಷ ಧರಿಸಿ ಬಂದ ಶಾರುಖ್, ಸಚಿನ್ ಮುಖವಾಡ ಹಾಕಿಕೊಂಡು ಬಂದ ಹುಡುಗರು ಕೊನೆಗೆ ಹೇಳುತ್ತಿದ್ದ "ಯೆ ದಿಲ್ ಮಾಂಗೆ ಮೋರ್, ಆಹಾ". ಆಹಾ ಅದು cricket ದೇವರ ಬಾಲ್ಯ ಕೂಡ ಆಗಿತ್ತು. ದಿನಾ ಸಾಯುವವರಿಗೆ ಅಳುವರ್ಯಾರು ಎಂಬಂತೆ, ಪಂದ್ಯಗಳು ಹೆಚ್ಚಿ ಅದರ ವಿಶಿಷ್ಟತೆಯನ್ನೇ ಕಳೇದುಕೊಂಡಿದೆ.
https://www.youtube.com/watch…
ಹುಡುಗಿಗಾಗಿ ಹುಚ್ಚು ಹುಚ್ಚು stunts ಮಾಡುವ ಈಗಿನ ಗಾಡಿಗಳ ಜಾಹಿರಾತಿಗಿಂತ, ನಮ್ಮಲ್ಲಿ ದೇಶಪ್ರೇಮ ಹುಟ್ಟಿಸುತ್ತಿದ್ದ 'ಹಮಾರಾ ಬಜಾಜ್, ಬುಲಂದ್ ಭಾರತ ಕಿ ಬುಲಂದ್ ತಸ್ವೀರ್' ನಮ್ಮೆಲ್ಲರನ್ನು ಹೆಚ್ಚು ಹಿಡಿದಿಟ್ಟುಕೊಂಡಿತ್ತು. ಈಗ en-field bike ತೆಗೆದುಕೊಂಡವರಿಗಿಂತ ಹೆಚ್ಚು ಜನರಲ್ಲಿ ಸಂತೋಷ ಹಾಗು ಪ್ರೀತಿ ಹುಟ್ಟಿಸಿತ್ತು. ಮತ್ತೆ ಬಂದಂತಿದೆ ವೆಸ್ಪಾ ಗಾಡಿಗಳು.
https://www.youtube.com/watch?v=scltYH13uEY
ಕೋಡು ಬೆಳಸಿಕೊಂಡ ಬೋಡ, ಯಾರಿರಬಹುದು ನೆನಪಿಸಿಕೊಳ್ಳಲು ಸಾಧ್ಯವಾ? ಪಕ್ಕದ ಮನೆಯಲ್ಲಿ ಅಸೂಯೆ ಹುಟ್ಟಿಸಿ, ನಮ್ಮ ಮನೆಯಲ್ಲಿ ಹೆಮ್ಮೆ ತರುಸುತ್ತಿದ್ದ ಆ ಬೋಡ.
ಹೌದು ಅವನೇ ONIDA devil ಬೋಡ.
https://www.youtube.com/watch?v=_tishLr19-c
ದೊಡ್ಡವರಿಗೆಲ್ಲ ಮುಖೇಶ್ ಖನ್ನ ಭೀಷ್ಮನಾಗಿದ್ದರೆ ನಮಗೆ ಅವನು ಶಕ್ತಿಮಾನ್. ಶನಿವಾರ ಮಧ್ಯಾನ ರಜೆಯಲ್ಲಿ ಬಂದು ನೋಡಿದರೆ ಮಾತ್ರ ಶನಿವಾರದ ರಜೆ ಸಂಪೂರ್ಣ, ಅದರಂತೆ ಮನೆಯಲ್ಲೆಲ್ಲಾ ಗಿರ್ರ್ರ್ರ್ರನೆ ತಿರುಗಿಯೇ ಓಡಾಡುತ್ತಿದ್ದೆವು, ಬಡಸಿಕೊಂಡ ಉದಾಹರಣೆಯೂ ಇದೆ. ಮೇಲಿಂದ ಬಿದ್ದರೆ ಶಕ್ತಿಮಾನ್ ಬಂದು ಕಾಪಾಡುತ್ತಾನೆ ಎಂದೇ ನಂಬಿದ್ದೆವು.
https://www.youtube.com/watch?v=2HWv63p1ndg
ಅಲಿಫ್ ಲೈಲಾ ಅಲಿಫ್ ಲೈಲಾ ಎಂದು ಪ್ರಾರಂಭವಾಗುತ್ತಿದ್ದ ಧಾರವಾಹಿ ನಮ್ಮೆಲ್ಲರ ಅಜ್ಜಿಯೇ ಆಗಿತ್ತು, ಅರೇಬಿಯನ್ ನೈಟ್ಸ್ ಆಧಾರಿತ ಆ ಧಾರವಾಹಿಯಲ್ಲಿನ ಜಾದು ನಮ್ಮೆಲ್ಲರ ಬಾಯಿ ಮುಚ್ಚಿಸುತ್ತಿರಲಿಲ್ಲ, ಎರಡು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಕಾಲ, ಆಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ತಾಂತ್ರಿಕ ವಿಷಯಗಳಲ್ಲಿ ಮೂಡಿಬಂದ ಜಾದುವಿನ ಚಮತ್ಕಾರಗಳು, ಬಾಹುಬಲಿಯಲ್ಲಿ ಅದರ ಅರ್ಧದಷ್ಟು ಮೂಡಿಬಂದಿಲ್ಲ.
https://www.youtube.com/watch?v=hxVWPFIjZLE
ಇನ್ನೂ ಬಹಳಷ್ಟು ಇವೆ, ಇಲ್ಲಿ ಕೆಲವನ್ನು ಮಾತ್ರ ಸೇರಿಸಿದ್ದೇನೆ. ಒಟ್ಟಾರೆ ಹೇಳುವುದಾದರೆ, ಆಗಿನ ಜಾಹಿರಾತುಗಳು ಜನಗಳ ನಡುವೆ ಪ್ರೀತಿ, ಬಾಂದವ್ಯ ಹೆಚ್ಚಿಸುತ್ತಿದ್ದವುಗಳಾಗಿದ್ದವು. ದೇಶಪ್ರೇಮ, ದೇಶದ ಸಂಸ್ಕೃತಿಗಳನ್ನು ಬಿಂಬಿಸುತ್ತಿದ್ದವು ಹಾಗು ಯಾವುದೇ ರೀತಿಯ ಅಶ್ಲೀಲತೆ ಇರುತ್ತಿರಲಿಲ್ಲ.
ಏನೇ ಹೇಳಿ ಅವರವರಿಗೆ ಅವರ ಬಾಲ್ಯದ ದಿನಗಳೇ ಇಷ್ಟವಾಗುತ್ತದೆ. ನಮ್ಮ ಅಪ್ಪ ಅಮ್ಮ ಹೀಗೆ ರೇಡಿಯೋ ಬಂದ ಕಥೆ, ಮೊದಲು ಟೀವಿ ನೋಡಿದ ಕಥೆ ಹೇಳಿದರೆ, ನಾವು ನಮ್ಮ ಮುಂದಿನ ಪೀಳಿಗೆ ನಮ್ಮ ಈರೀತಿಯ ಕಥೆ ಹೇಳಿ, ಇವಾಗ ಸರಿಯಿಲ್ಲ, ಕಾಲ ಬದಲಾಗಿದೆ ಎಂದು ಹೇಳುತ್ತೇವೆ. ಹಾಗಾಗಿ, ನಮ್ಮ ಆ ಸಿಹಿ ನೆನಪುಗಳನ್ನು ನೆನೆದು rewind ಮಾಡಿಕೊಳ್ಳೋಣ, ‪#‎ನನಗನಿಸಿದ್ದು‬ ಇಲ್ಲಿ ಹೇಳಿದ್ದೇನೆ. Rewind ಎನ್ನುವ ಪದ ಕೂಡ tape recorder ಗೊತ್ತಿರುವವರಿಗೆ ಮತ್ತೊಂದನ್ನು ನೆನಪು ಮಾಡುತ್ತದೆ, Reynolds pen ಲಿ ಕ್ಯಾಸೆಟ್ ನಲ್ಲಿ ಹಾಕಿ ತಿರುಗಿಸುತ್ತಿದ್ದುದ್ದು. ಇರಲಿ, ಒಂದು ಸರ್ವೇ ಸಾಮಾನ್ಯ,
ನಾವು ಕೇಳಿದ ವೇದಾಂತಗಳನ್ನೇ ಮುಂದೆ ನಾವು ಹೇಳುತ್ತೇವೆ. "ನಮ್ಮ ಕಾಲದಲ್ಲಿ ಹೀಗಿರಲಿಲ್ಲ"
परिवर्तनमेव स्थिरमस्ति
Time is in essence nothing but change. And change is the only constant out there.

Sunday, October 18, 2015

‎ನನ್ನ ಸನಾತನ ನನ್ನ ಹೆಮ್ಮೆ‬..

ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಷಿ ಕೊಡಬಹುದು ಹಾಗಾದರೆ ಸಂತೋಷಕ್ಕೆ ವಿಜ್ಞಾನದಲ್ಲಿರುವ ವ್ಯಾಖ್ಯಾನವೇನು?
"ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು" ಎಂಬುದರ ಹಿಂದಿನ ನಿಜವಾದ ಮರ್ಮವೇನು?
ಅಂತರಂಗ ಶುದ್ಧಿಯು ಬಹಿರಂಗ ಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಮನಸ್ಸು ಎಂಬುದು ಎಲ್ಲದಕ್ಕೂ ಮೂಲ, ಇದನ್ನು ನಿಮ್ಮ ವಿಜ್ಞಾನವೂ ಇತ್ತೀಚೆಗೆ ಒಪ್ಪಿದೆ. ಮನಸ್ಸಿನಿಂದ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕ್ಕೊಳ್ಳಬಹುದು. ನಿಮ್ಮ ಮನಸ್ಸನ್ನು ಯಾವುದಾದರೂ ಒಂದು ವಿಷಯದಲ್ಲಿ ಕೇಂದ್ರೀಕರಿಸಲು ಸುತ್ತಮುತ್ತಲಿನ ವಾತಾವರಣ ಹಾಗು ದೇಹಕ್ಕೆ ಸ್ಪರ್ಷವಾಗಿರುವ ಎಲ್ಲಾ ವಸ್ತುಗಳು ಅತ್ಯಂತ ಪ್ರಭಾವ ಬೀರುತ್ತದೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ,
1. ಧ್ಯಾನ ಮಾಡಲು ಕೈಯ್ಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡರೆ ಸಾಧ್ಯವಿಲ್ಲ, ಹಾಗಾಗಿ ಧ್ಯಾನ ಮಾಡುವಾಗ ಆ ರೀತಿಯ ವಸ್ತುಗಳಿಂದ ದೂರವಿರಬೇಕು ಇದನ್ನೇ ಮಡಿ ಎಂಬುವರು.
2. ಹೊಸ ಬಟ್ಟೆ ಅಥವ ತನಗೆ ಇಷ್ಟವಾದ ಬಟ್ಟೆ ಹಾಕಿ ಧ್ಯಾನ ಮಾಡಲು ಕುಳಿತರೆ ಮರ್ಕಟವೆಂಬ ಮನಸ್ಸು ಸದಾ ಅದರ ಕಡೆಯಲ್ಲಿ ಇರುತ್ತದೆ, ತಾನು ಹೇಗೆ ಕಾಣುವೆ, ಸರಿಯಾಗಿದೆಯ, ನನ್ನ ನೋಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಹಾಗಾಗಿ ಧ್ಯಾನಕ್ಕೆ ಅಥವ ದೇವರ ಪೂಜೆ ಮಾಡುವಾಗ ಅದಕ್ಕಾಗಿಯೇ ವಿಶೇಷ ಉಡುಪು ಅಗತ್ಯ ಅದನ್ನೇ ಮಡಿ ಬಟ್ಟೆ ಎಂಬುವರು.
3. ದೇಹಕ್ಕೆ ಸುಖ ಸಿಕ್ಕಾಗ ಮನಸ್ಸು ಎಂಬ ಪ್ರೊಸೆಸರ್ ಆಫ್ ಆಗುವುದು ಸಾಮಾನ್ಯ, ವಿಶ್ರಾಂತಿ ಅಥವ ನಿದ್ದೆ ಬಯಸುತ್ತದೆ, ಸ್ವಲ್ಪ ಬೆಚ್ಚನೆಯ ವಾತಾವರಣ ನಮ್ಮ ದೇಹಕ್ಕೆ ತಾಕಿದ ಕೂಡಲೇ ಮನಸ್ಸು ಹಾಗೆ ವಿಶ್ರಮಿಸಲು ಶುರು ಮಾಡುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ, ಒದ್ದೆ ಬಟ್ಟೆ ಉಟ್ಟು ಕೂಡುವುದು, ಇದನ್ನೇ ಮಡಿಯಲ್ಲಿ ಸ್ನಾನ ಮಾಡುವುದು ಎನ್ನುತ್ತಾರೆ.
4. ಧ್ಯಾನದ, ಪೂಜೆಯ ಸಮಯ ನೋಡಿ, ಎಲ್ಲಾ ಬೆಳಗಿನ ಜಾವದಲ್ಲೆ ಹೆಚ್ಚು, ಏಕೆಂದರೆ ಬೆಳಗಿನ ಸಮಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳ್ಯಾವು ಇರುವುದಿಲ್ಲ, ಹಾಗಾಗಿ ಜೀರ್ಣಕ್ರಿಯೆ ವಿಶ್ರಾಂತಿಯಲ್ಲಿ ಇರುತ್ತದೆ, ಹಾಗಾಗಿ ಮನಸ್ಸು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಹಾಗೂ ಸೂರ್ಯನ ಕಿರಣಗಳು ಒಂದು ನಿರ್ಧಿಷ್ಟ ಓರೆಯಲ್ಲಿ ಬೀಳುವುದರಿಂದ ಪ್ರಕೃತಿ ನಮ್ಮ ದೇಹಕ್ಕೆ ಒಂದು ಧನಾತ್ಮಾಕ ವಾತಾವರಣ ಕಲ್ಪಿಸಿಕೊಡುತ್ತದೆ. (ಸೂರ್ಯನ ಕಿರಣಗಳಿಂದಾಗುವ ಪರಿಣಾಮಗಳು ವಿಜ್ಞಾನದಲ್ಲಿ ಬಹಳಷ್ಟು ಹೇಳಿಯಾಗಿದೆ)
ಹಾಗಾಗಿ ಬಾಹ್ಯ ಮಡಿಯೂ ಅತ್ಯಗತ್ಯ. 
ದಾಸರು, ವಚನಕಾರರು ಹೇಳಿರುವುದು ಬಟ್ಟೆಯನು ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ, ಮದ, ಮತ್ಸರ ಬಿಟ್ಟು ನಡೆದರೆ ಅದೆ ಮಡಿಯು. ಅಂದರೆ ಬಟ್ಟೆಯನು ನೀರೊಳಗದ್ದದೇ ಸೂಟು ಬೂಟು ಹಾಕಿಯೂ ಮದ ಮತ್ಸರ ಬಿಡಬಹುದು ಎಂದಲ್ಲ, ಅದು ಸಾಧ್ಯವಿಲ್ಲ. ಅವರು ಹೇಳಿರುವುದು ಏನೆಂದರೆ ಬರೀಯ ಬಾಹ್ಯ ಮಡಿ ಮಾಡಬೇಡಿ ಅಂತರಂಗವನ್ನು ಶುದ್ಧಿಕರಿಸಿ ಎಂದೇ ಹೊರೆತು, ಬಾಹ್ಯವನ್ನು ಶುದ್ಧಿಗೊಳಿಸದೇ ಅಂತರಂಗವನ್ನು ಶುದ್ಧಿಗೊಳಿಸಿ ಎಂದಲ್ಲ, ಅದು ಸಾಧ್ಯವೇ ಇಲ್ಲ. 
ಎಲ್ಲವನ್ನು ವೈಜ್ಣ್ಯಾನಿಕವಾಗಿ ನೋಡಲು ಹೋಗುವುದು ಅತ್ಯಂತ ಮೂರ್ಖತನ. ವೈಜ್ಞಾನಿಕವಾಗಿ ನೆಮ್ಮದಿ, ಸಂತೋಷ ಎಂಬ ಪದಗಳಿಗೆ ಸರಿಯಾದ ವ್ಯಾಖ್ಯಾನ ಇಲ್ಲ. ಬಡವನಿಗೆ ಒಂದು ಮೈಸೂರು ಪಾಕ್ ಸಂತೋಷ ಕೊಟ್ಟರೆ, ಶ್ರೀಮಂತನಿಗೆ ದೊಡ್ಡ ಹೋಟೆಲ್ಲಿನಲ್ಲಿ ಬರ್ಗರ್ ಖುಶಿ ಕೊಡಬಹುದು. ಹೀಗೆ ಎರೆಡು ವ್ಯಾಖ್ಯಾನಗಳನ್ನು ವಿಜ್ಞಾನ ಒಪ್ಪುವುದಿಲ್ಲ. ಯಾವುದನ್ನು ತಪ್ಪು ಅಥವ ಸುಳ್ಳು ಎಂಬುದು ಹೇಳಲು ಬರುವುದೋ ಅದನ್ನು statement ಎಂದು mathematical reasoningಲಿ ಕರೆಯುತ್ತಾರೆ, ಹಾಗೆ ಆ statement ಲಿ ಯಾವುದೇ ಗುಣವಾಚಕಗಳು ಇರಬಾರದು, ಉದಾಹರಣೆಗೆ ಗಣಿತ ಒಂದು ಸುಂದರ ವಿಷಯ, ಇಲ್ಲಿ ಸುಂದರ ಎಂಬುದು ಗುಣವಾಚಕ, ಇದು ವ್ಯಕ್ತಿಯ ಭಾವನೆಗಳ ಮೇಲೆ ಅವಲಂಬಿತ, ಒಬ್ಬನಿಗೆ ಸುಂದರವಾಗಿ ಕಂಡದ್ದು ಇನ್ನೊಬ್ಬನಿಗೆ ಕಾಣದೇ ಇರಬಹುದು, ಹಾಗಾಗಿ ಅಂಥ statement ಅಲ್ಲದೇ ಇರುವುದಕ್ಕೆ mathematical formation ಮಾಡಲು ಸಾಧ್ಯವಿಲ್ಲ, mathematics ಲಿ express ಮಾಡಲು ಸಾಧ್ಯವಾಗದಿದ್ದರೆ ಅದನ್ನು ವಿಜ್ಞಾನ ತನ್ನ ವ್ಯಾಪ್ತಿ ಇಂದ ಹೊರಗಿಡುತ್ತದೆ. ಮನಸ್ಸು ಕೂಡ ಹಾಗೆ ಮನಸ್ಸಿನ ಭಾವನೆಗಳನ್ನು ವಿಜ್ಞಾನ ವ್ಯಾಖ್ಯಾನಿಸಲೂ ಸಾಧ್ಯವೇ ಇಲ್ಲ. ಆದರೆ ಆ ಭಾವನೆಗಳ ಮಹತ್ವ ದೊಡ್ಡದ್ದು.
1. ಮಗುವಿಗೆ ಎಷ್ಟೇ ವೈಜ್ಞಾನಿಕ ಔಷಧಿಗಳನ್ನು ಕೊಟ್ಟು ಬೆಳಸಿದರೂ ತಾಯಿಯ ಪ್ರೀತಿಯ ಹಾಲು ಸಮವಾಗಲಾರದು.
2. ತುಂಬಾ ಕಷ್ಟದಲ್ಲಿ ದೇವರ ಮುಂದೆ ಬಂದು ನಿಂತು ಮನಃಪೂರ್ತಿಯಾಗಿ ಬೇಡಿಕೊಂಡಾಗ ಆಗುವ ಸಂತೃಪ್ತಿಗೆ ಹಾಗು ಸಿಗುವ ಆತ್ಮಸ್ಥೈರ್ಯಕ್ಕೆ ಬೇರೆ ಪರಿಹಾರವಿಲ್ಲ.
3. ನಂಬಿಕೆ ಎಂಬುದಕ್ಕೆ ವಿಜ್ಞಾನದಲ್ಲಿ ಏನಿದೆ? ವಿಜ್ಞಾನದ ಕುಡಿಗಳೇ ಆದ ಇಬ್ಬರು ವೈದ್ಯರ ಬಳಿ ಆಯ್ಕೆ ಮಾಡುವಾಗ ವಿಜ್ಞಾನ ಮಧ್ಯ ಬರುವುದಿಲ್ಲ, ನಮ್ಮಲ್ಲಿ ಇರುವ ನಂಬಿಕೆ ವೈದ್ಯನನ್ನು ಹುಡುಕಲು ನೆರವಾಗುತ್ತದೆ. ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವೇ?
4. ವಿಜ್ಞಾನ ಉಪಯೋಗಿಸುವ ಪ್ರಕೃತಿ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಇಲ್ಲ. ಇವೆಲ್ಲಾ ಪ್ರಕೃತಿಯ ವಿಸ್ಮಯ ಎಂದು ಕೈ ತೊಳೆದುಕೊಳ್ಳುತ್ತಾರೆ, ನಾವು ಅದನ್ನೇ ದೇವರ ಆಟ ಎಂದರೆ ಮೂಗೆಳೆಯುತ್ತಾರೆ, ಮೂಢನಂಬಿಕೆ ಎಂದು ಬೊಬ್ಬೆಹಾಕುತ್ತಾರೆ.
ಆಚರಣೆಗಳನ್ನು ಮನಸ್ಸಿನ ನೆಮ್ಮದಿಗೋಸ್ಕರ ಮಾಡುವುದು, ಅದರಲ್ಲಿ ವಿಜ್ಞಾನದ ಎಳೆಯನ್ನು ಹುಡುಕುವುದು ಅತ್ಯಂತ ಮೂರ್ಖತನವಲ್ಲದೇ ಮತ್ತೇನಲ್ಲ.
‪#‎ನನ್ನ_ಸನಾತನ_ನನ್ನ_ಹೆಮ್ಮೆ‬
‪#‎ನನಗನಿಸಿದ್ದು‬

Friday, October 9, 2015

ಸಂಭವನೀಯತೆ ಸಿದ್ಧಾಂತ(probability theory)

ಸಂಭವನೀಯತೆ ಸಿದ್ಧಾಂತ(probability theory)
ಎಲ್ಲೋ ಒದಿದ್ದು, ಸಂಭವನೀಯತೆ ಸಿದ್ಧಾಂತ ಹೇಗೆ ಜನ್ಮ ತಾಳಿತು ಎಂದು. ಪ್ರತೀ ಬಾರಿ ನಾನು ಪ್ರೊಬಾಬಿಲಿಟಿ ಕ್ಲಾಸ್ ಮಾಡುವಾಗ ಹೇಳಿರುತ್ತೇನೆ. ಈ ಥೀಯರಿ ಅರಿವಿಲ್ಲದೇ ಬಹಳ ಕಡೆಯಲ್ಲಿ ಉಪಯೋಗಿಸುತ್ತಿದ್ದಾದರೂ ಅದಕ್ಕೆ ಗಣಿತದ ಒಂದು ರೂಪ ಕೋಟ್ಟಿದ್ದು 17ನೇ ಶತಮಾನದಲ್ಲಿ, ಬ್ಲೈಸ್ ಪಾಸ್ಕಲ್ ಮತ್ತು ಪೀರ್ರೆ ಡೆ ಫೆರ್ಮ್ಯಾಟ್‌ ಎಂಬುವರು ಇದಕ್ಕೆ ಸಂಖ್ಯಾಶಾಸ್ತ್ರವನ್ನು ಸೇರಿಸಿ ಮುನ್ನಡೆಸಿದರು. ಈ ಕಥೆ ಅವರ ಬಗ್ಗೆ.
ಒಮ್ಮೆ ಪಾಸ್ಕಲ್ ಮತ್ತು ಫೆರ್ಮ್ಯಾಟ್ ಒಂದು ಉದ್ಯಾನವನದಲ್ಲಿ ಯಾವೂದೋ ಗಣಿತದ ಧೀರ್ಘ ಚರ್ಚೆಯಲ್ಲಿ ಮುಳುಗಿದ್ದರಂತೆ. ಅಲ್ಲಿಯೇ ಪಕ್ಕ ಸ್ವಲ್ಪ ದೂರದಲ್ಲಿ ಜೂಜಾಟದಲ್ಲಿ ತನ್ನ ಎಲ್ಲಾ ಸಂಪತ್ತನ್ನು ಕಳೆದು ದಿವಾಳಿಯಾಗಿದ್ದ ಒಬ್ಬ ಕುಡುಕ ಕೂಗುತ್ತಾ ಬಿದ್ದಿದ್ದನಂತೆ. ಅವನ ಆ ಕೂಗಾಟ ಈ ಗಣಿತಜ್ಞರ ಧೀರ್ಘ ಚರ್ಚೆಗೆ ತೊಂದರೆಯುಂಟಾಯಿತು. ಇವರು ಆ ಕುಡುಕನಿಗೆ ನಾವಿಲ್ಲಿ ಗಣಿತದ ಬಗ್ಗೆ ಏನೋ ಘಂಭೀರ ಚರ್ಚೆ ಮಾಡುತ್ತಿದ್ದೇವೆ ಅತ್ತ ಹೋಗು ಎಂದು ಗದರಿಸಿದರಂತೆ. ಅದರಿಂದ ಕೋಪಗೊಂಡ ಕುಡುಕ, ಹತ್ತಿರ ಬಂದು, ನೀವು ಬಹಳಾ ದೊಡ್ಡ ಗಣಿತಜ್ಞರೇ ಹಾಗಾದರೇ ನನ್ನ ಸವಾಲಿಗೆ ಉತ್ತರಿಸಿ ಎಂದು ಸವಾಲೆಸೆದನು. ಅವನ ಸವಾಲು ಹೀಗಿತ್ತು. ನನ್ನ ಬಳಿ ಈಸ್ಪೀಟ್ ಕಾರ್ಡ್ಸ್ಗಳಿವೆ, ನಾನು ಈಗ ತೆಗೆಯುವ ಕಾರ್ಡ್ ಯಾವುದೆಂದು ಹೇಳುವಿರ?
ಸವಾಲನ್ನು ಕೇಳಿ ಇಬ್ಬರ ಮನಸಲ್ಲಿ ಕುತೂಹಲ ಮೂಡಿತಂತೆ, ಆ ಪ್ರಶ್ನೆಗೆ ಉತ್ತರ ಇಲ್ಲವೆಂದು ಗೊತ್ತಿದ್ದರೂ ಎಲ್ಲೋ ಮೂಲೆಯಲ್ಲಿ ಒಂದು ಥೀಯರಿಯ ಜನ್ಮವಾಯಿತು. ಅದೇ ಸಂಭವನೀಯತೆ ಸಿದ್ಧಾಂತ. ಅದರಿಂದ ಅವರು ಜಗಕ್ಕೆ ಕೊಟ್ಟಿದ್ದು, ಒಂದು ನಾಣ್ಯವನ್ನು ಹಾರಿಸಿದಾಗ ಅದರ ಯಾವ ಮುಖ ಮೇಲಾಗಿ ಬೀಳುತ್ತದೆಂದು ಹೇಳಲು ಸಾಧ್ಯವೇ ಇಲ್ಲ, ಆದರೆ ಒಂದು ಮುಖ ಬೀಳುವ ಸಂಭವನೀಯತೆ ಎಷ್ಟು ಎಂದು ಹೇಳಬಹುದು.
ಗಣಿತದ ಭಾಷೆಯಲ್ಲಿ ಬರೆಯುವುದಾದರೆ, Head and Tail ಇರುವ ನಾಣ್ಯ ಹಾರಿಸಿದಾಗ Head ಬೀಳುವ ಸಂಭವನೀಯತೆ 1/2 (50%) ಹಾಗೇ Tail ಬೀಳುವ ಸಂಭವನೀಯತೆ 1/2 (50%).
ಹಾಗಾಗಿ ಜಗತ್ತಿನ ದೊಡ್ಡ ದೊಡ್ಡ ಆವಿಷ್ಕಾರಗಳೆಲ್ಲ ಅತೀ ಸಣ್ಣ ಸಣ್ಣ ಸಂದರ್ಭಗಳಲ್ಲೇ ಉದ್ಭವಿಸಿರುತ್ತವೆ. ಹೇಗೆ ನ್ಯೂಟನ್ ನ ಗುರುತ್ವಾಕರ್ಷಣೆ ಸೇಬು ಬೀಳುವುದರಿಂದ ಹುಟ್ಟಿತೋ, ಆರ್ಕಿಮಿಡಿಸ್ ಗೆ ಹೇಗೆ "volume of water displaced must be equal to the volume of the part of his body he had submerged" ಎಂಬುದು ಸ್ನಾನದ ಮನೆಯಲ್ಲಿ ಹೊಳೆಯಿತೋ, ಗೂಗಲ್, ಫೇಸ್ ಬುಕ್ ಒಂದು ಗ್ಯಾರೇಜ್ನಲ್ಲಿ ಜನ್ಮ ತಾಳಿತೋ ಹಾಗೆ.
ಪ್ರಕೃತಿಯ ಬಗ್ಗೆ, ಸುತ್ತಮುತ್ತಲಿನ ಪರಿಸರದ ಚಲನವಲನಗಳ ಮೇಲೆ ಕುತೂಹಲವೊಂದಿದ್ದರೆ ಈ ರೀತಿಯ ಆವಿಷ್ಕಾರಗಳು ನಡೆಯುತ್ತವೆ.
‪#‎ಬಾಲ್ಯಕ್ಕಿಂತ_ಮಿಗಿಲಾದ_ಶಾಲೆಯಿಲ್ಲ‬
‪#‎ಕುತೂಹಲಕ್ಕಿಂತ_ಮಿಗಿಲಾದ_ಟೀಚರ್_ಇಲ್ಲ‬.
ಈ ಥೀಯರಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕೆಳಗಿನ ಕೊಂಡಿಯನ್ನು ಒತ್ತಿ ಬಹಳ ಸರಳವಾಗಿ ಕನ್ನಡದಲ್ಲಿ ಇದರ ಬಗ್ಗೆ ವಿವರಿಸಿದ್ದಾರೆ.
ನೆನ್ನೆ ಶೋಲೆ ಎಂಬ ಹಿಂದಿ ಸಿನಿಮಾ ನೋಡುವಾಗ ಈ ಥೀಯರಿ ಒಮ್ಮೆ ನನ್ನ ಕಣ್ಣ ಮುಂದೆ ಹಾದು ಹೋಯಿತು. ಆ ಚಿತ್ರದ screenshot ಹಾಕಿದ್ದೇನೆ. ಅದರಲ್ಲಿ ಗಬ್ಬರ್ ತನ್ನ 3 ಢಕಾಯಿತರನ್ನು ಕೊಲ್ಲಲು ಮುಂದಾದ ಪಿಸ್ತೂಲ್ ನಲ್ಲಿ 6 ಬುಲೆಟ್ಸ್ ಇರುತ್ತದೆ, ಆಗ ಪ್ರತಿಯೊಬ್ಬರ ಪ್ರಾಣ ಹೋಗುವ ಸಂಭವನೀಯತೆ 100%. ಆದರೆ ಅದು ಸರಿಯಲ್ಲ ಎಂದು 3ನ್ನು ಗಾಳಿಯಲ್ಲಿ ಹಾರಿಸಿ 3 ಉಳಿಸುತ್ತಾನೆ. ಈಗ ಪ್ರಾಣ ಹೋಗುವ ಸಂಭವನೀಯತೆ 50%(3 bullets among 6 options, 3/6=1/2). ಮೊದಲೇಯವನ ತಲೆಗೆ ಪಿಸ್ತೂಲಿಟ್ಟು ಟ್ರಿಗ್ಗರ್ ಎಳೆದಾಗ ಗುಂಡು ಹಾರುವುದಿಲ್ಲ ಆಗ ಎರಡನೇಯವನ ಪ್ರಾಣ ಹೋಗುವ ಸಂಭವನೀಯತೆ ಹೆಚ್ಚಾಗುತ್ತದೆ 60% (3 bullets among 5 options, 3/5). ಎರಡನೇಯವನೂ ಗುಂಡಿನಿಂದ ತಪ್ಪಿಸಿಕೊಳ್ಳುತ್ತಾನೆ ಆಗ 3ನೇಯವನ ಪ್ರಾಣ ಹೋಗುವುದು ಇನ್ನು ಹೆಚ್ಚಾಗುತ್ತದೆ 75% (3 bullets among 4 options, 3/4).
ಹಾ ಇವಾಗ ‪#‎ನನಗನಿಸಿದ್ದು‬, ಈ ತಲೆಕೆಡಿಸುವ probability ಪೋಸ್ಟ್ ಓದಿ ಬಯ್ಕೊಳ್ಳುವವರ ಸಂಭವನೀಯತೆ????.
ಒಕೆ ಒಕೆ ಬಯ್ಕೋಬೇಡಿ, ಕಥೆ ಓದಿ ಸಾಕು.

Wednesday, October 7, 2015

ವೈಜ್ಞಾನಿಕ ಮನೋಭಾವ ಎಂಬ ಮೂಢನಂಬಿಕೆ.

ವಿಜ್ಞಾನದಿಂದ ನಮ್ಮ ಸಂಸ್ಕೃತಿಯಲ್ಲಿಯ ಮೌಢ್ಯ ಹೋಗಲಾಡಿಸಬಹುದು ಎಂದು ನಮ್ಮ ಮೇಲೆ ಗೂಬೆ ಕೂರಿಸಿ ನಮ್ಮನ್ನು ಆಳಿಹೋದ ಬ್ರಿಟೀಷರ ಮರಕ್ಕೆ ಜೋತುಬಿದ್ದಿರುವ ಬುದ್ದಿಜೀವಿಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಹಾಗದರೆ ವಿಜ್ಞಾನದಲ್ಲಿಯ nuclear weapons, biological weapons, cyber crimes ಇವೆಲ್ಲಾ ವೈಜ್ಞಾನಿಕ ಮೌಢ್ಯವಲ್ಲವೇ? ವಿಜ್ಞಾನದಿಂದ ಹುಟ್ಟಿದ ಇವುಗಳು ಮನುಕುಲಕ್ಕೆ ಹಾನಿಕಾರಕವಲ್ಲವೇ? ಇವುಗಳೂ ಕೂಡ ಜನರಿಗೆ ಮಂಕು ಬೂದಿ ಎರಚಿ ದುಡ್ಡು ಮಾಡುತ್ತಿಲ್ಲವೇ? ಇವುಗಳನ್ನು ಪ್ರಶ್ನೆ ಮಾಡುವರ್ಯಾರು?
ಮಾನಸಿಕ ನೆಮ್ಮದಿಗಾಗಿ ನಡೆಸುವ ಆಚರಣೆಗಳಿಗೆ ವಿಜ್ಞಾನದಲ್ಲಿ ಉತ್ತರ ಹುಡುಕಲು ಸಾಧ್ಯವಿಲ್ಲ. ಅದರಿಂದ ಜನರಿಗಾಗುವ ನೆಮ್ಮದಿ, ಖುಷಿ ವಿಜ್ಞಾನದ sin, cos, tan ಇಂದ ಸಿಗುವುದಿಲ್ಲ. ಭಾರತದ ಸಂಸ್ಕೃತಿ, ಜ್ಞಾನ ಹಲಸಿನ ಹಣ್ಣಾದರೆ, ವಿಜ್ಞಾನ ಆ ಹಣ್ಣಲ್ಲಿರುವ ಬೀಜ. ಬೀಜದಲ್ಲಿ ಹಣ್ಣು ಹುಡುಕುವ ಕೆಲಸ ಬಿಡಿ.
> ಹಬ್ಬದ ದಿನ ಹೊಸ ಬಟ್ಟೆ ಹಾಕಿ ಪಡುವ ಖುಷಿಗೆ ವೈಜ್ಞಾನಿಕ ಕಾರಣ ಹುಡುಕಿ.
> ಹೊಸ ವಾಹನ ತಂದಾಗ ಪೂಜೆ ಮಾಡುವಾಗ ಆಗುವ ಉಲ್ಲಾಸಕ್ಕೆ ವೈಜ್ಞಾನಿಕ ಮನೋಭಾವದಲ್ಲಿ ಜಾಗವಿಲ್ಲ.
> ದೀಪಾವಳಿಯಂದು ಮಕ್ಕಳು ಹಾರಿಸುವ ಪಟಾಕಿಯಲ್ಲಿ ಅವರ ಸಂತೋಷ ಅಡಗಿರುವುದನ್ನು ನಿಮ್ಮ ವಿಜ್ಞಾನದ ಕನ್ನಡಕದಲ್ಲಿ ಕಾಣಸಿಗುವುದಿಲ್ಲ.
> ಮದುವೆಯನ್ನು ವೈಜ್ಞಾನಿಕವಾಗಿ ಯೋಚಿಸಿದರೆ ಪ್ರಾಣಿಗಳಿಗೂ ನಮಗೂ ಭೇದವಿರುವುದಿಲ್ಲ.
ಹೇಳಲು ಬಹಳಷ್ಟು ಸಿಗುತ್ತವೆ.
ಹೊಸದಿಗಂತದಲ್ಲಿ ಬಂದಿರುವ ರಾಜರಾಮ ಹೆಗಡೆಯವರ ಅಂಕಣವನ್ನು ಓದಿ ‪#‎ನನಗನಿಸಿದ್ದು‬
http://hosadigantha.in/index.php…
page no 6

Thursday, October 1, 2015

ನೋಡಿ ಸ್ವಾಮಿ ನಾವಿರೋದೇ ಹೀಗೆ

‪#‎ಆ_ನೋ_ಭದ್ರಾಃ_ಕೃತವೋ_ಯಂತು_ವಿಶ್ವತಃ‬|| ಅರ್ಥ ಮುಂದೆ ಹೇಳ್ತೀನಿ. ಶ್ಲೋಕದ ಜೊತೆ ಈ ಹಾಡು ನೆನಪಾಯ್ತು.
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು_ಕಿವಿ_ಮುಚ್ಚಿದರು_ನನಗಿಲ್ಲ_ಚಿಂತೆ.
ಇದನ್ನು ಏಕೆ ಹೇಳ್ತಾ ಇದಿನಿ ಅಂದ್ರೆ, ಇವತ್ತು ನನ್ನ ಸ್ನೇಹಿತನೊಬ್ಬ ತನ್ನ ಫೇಸ್ಬುಕ್ ಲಿ news feed scroll down ಮಾಡ್ತಾ ಇರುವಾಗ ನಾನು ನೋಡ್ತಾ ಇದ್ದೆ. ಅವಾಗ ‪#‎ನನಗನಿಸಿದ್ದು‬.
ಆತನ news feedಲಿ ಕೆಳಗಿನ ಸಂಗತಿಗಳು ಹೆಚ್ಚಾಗಿ ಕಾಣುಸ್ತಾ ಇತ್ತು. ಇದು ಸಾಧಾರಣವಾಗಿ ಎಲ್ಲರದ್ದು ಇವೇ ಇರುತ್ತದೆ.
೧. ಹಲ್ಲು ಕಿರಿದಿಕೊಂಡು, ತಲೆ ಸೊಟ್ಟ ಮಾಡಿಕೊಂಡು, ಬರೀ ಕಣ್ಣು, ಮೂಗು ಬಾಯಿ ಅಥವ ಕೂದಲು ಮುಚ್ಚಿಕೊಂಡ ಮುಖ ಇರುವ, ವಿಚಿತ್ರ ವಿಚಿತ್ರ ಮುಖ ಮಾಡಿಕೊಂಡು ತೆಗೆದುಕೊಂಡ selfiಗಳು, ಅದಕ್ಕೆ ಅರ್ಥ ಆಗದ, ಸಂಭಂದವೇ ಇರದ ಸ್ವಯಂ ಘೋಷಿತ captions. (ಹೆಚ್ಚಾಗಿ ಹುಡುಗಿಯರದ್ದೇ selfieಗಳು)
೨. ಕರ್ನಾಟಕದೋರಾಗಿದ್ರು ಮಹೇಶ್ ಬಾಬು, ಪ್ರಭಾಸ್ ಮತ್ತಿತರ ತೆಲುಗು ನಾಯಕರ ಫೋಟೋಗಳು, ಅಪರೂಪಕ್ಕೆ ನಮ್ಮ ಸುದೀಪ್ ಕೂಡ ಕಾಣುಸ್ತಿದ್ರು ತೆಲುಗು ಚಿತ್ರದಲ್ಲಿ ನಟಿಸಿದ ಕಾರಣಕ್ಕೋ ಏನೊ. ಬಿಟ್ರೆ ನಾಯಕಿಯರದ್ದು ಅದೇನ್ ಸಿಗೊತ್ತೋ ಅವರ ಫೋಟೋ ಇಂದ ನಾ ಕಾಣೆ.
೩. good morning, good night, good evening ಈ ಫೋಟೋಕೆ like ಮಾಡಿ ಎಂದು ಅಂಗಲಾಚೋ ಫೋಟೋಗಳು, photoshop ಲಿ ಕಂಡಕಂಡಲ್ಲೆಲ್ಲಾ ದೇವರ ಚಿತ್ರ ಹಾಕಿ like ಮಾಡಿ ಇಲ್ಲ ಎಂದರೆ ಕಾಟ ತಪ್ಪಿದ್ದಲ್ಲ ಎಂದು ದೇವರ ಹೆಸರಲ್ಲಿ like ಗಿಟ್ಟಿಸುವ ಫೋಟೋಗಳು.
೪. life ಬಗ್ಗೆ, love ಬಗ್ಗೆ ಅಥವ friendship ಬಗ್ಗೆ quotesಗಳು, ಇನ್ನು ಒಂದು ಮಜಾ ಸಂಗತಿ ಎಂದರೆ, ಇಲ್ಲೆ ಶಿವಮೊಗ್ಗ ಇಂದ ದಾವಣಗೆರೆಗೋ ಅಥವ ತಮ್ಮ ಊರಿಗೋ ಹೋಗ್ತಾ ಇರ್ತಾರೆ ಅದ್ರುದ್ದು status ಲಿ airplane ಚಿತ್ರ.
ಇಷ್ಟೆಲ್ಲರ ಮಧ್ಯೆ ಮಧ್ಯೆ ನನ್ನ updates(ಸ್ವಲ್ಪ ಜಾಸ್ತೀನೇ ಇದ್ವು ಅನ್ನಿ, ಯಾಕಂದ್ರೆ ನಂದು FBಲಿ ಸ್ವಲ್ಪ ಜಾಸ್ತಿ activities), ವಿಜ್ಞಾನದ ಬಗ್ಗೆನೋ, ಹಿಂದು ಸಂಸ್ಕೃತಿ ಬಗ್ಗೆನೊ, ಪ್ರಸ್ತುತ ರಾಜಕೀಯದ ಬಗ್ಗೆನೋ ಅಥವ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಬಗ್ಗೆನೋ ಇರ್ತಿದ್ವು.
ಇವಾಗ ಮೇಲಿನ ಜಿ. ಎಸ್. ಶಿವರುದ್ರಪ್ಪನವರ ಹಾಡು ಏಕೆ ಬರೆದೆ ಅಂತ ಹೇಳ್ತೀನಿ. ಅಷ್ಟೊಂದು news feedಲಿ ನನ್ನ ಸ್ನೇಹಿತ ಯಾವುದನ್ನು like ಮಾಡಬಹುದು, ಅವನ ಅಭಿರುಚಿ ಎಂತದ್ದು ಅಂತ ಕಾಯ್ತಾ ಕುತಿದ್ದೆ. ನನ್ನ ದುರಂತ ಎಂದರೆ like ಬಯಸಲಿಲ್ಲ ನಾನು, ಕೊನೇ ಪಕ್ಷ ನನ್ನ updatesಲಿ ಇದ್ದ ವಿಷಯದ ಕಡೆಗೆ ಗಮನ ಕೂಡ ಹರಿಸಲಿಲ್ಲ. ಮೇಲಿನ ೪ ಅಂಶದಲ್ಲಿನವುಗಳನ್ನು like, share ಮಾಡಿದ.
ಛೇ, ನಮ್ಮ ಸಂಸ್ಕೃತಿಯನ್ನು ತಿಳಿಸುವ, ಅಥವ ವಿಜ್ಞಾನದ ಮಾಹಿತಿಗಳನ್ನು ತಿಳಿದುಕೊಳ್ಳುವ ಆಸಕ್ತಿಯೇ ಇಲ್ಲವಲ್ಲಾ ಎಂದೆನಿಸಿತು. ಹಾಗೆ ನನ್ನ postಗಳಿಗೆ ಅವನೇನೆಂದುಕೊಳ್ಳುವನು ಎಂದು ಓಹಿಸಿದೆ. ಇವನ್ಯಾವನೋ ಬರೀ facebook ಲೇ ಸಾಯ್ತಿರ್ತಾನೆ. ಹುಚ್ಚುಚ್ಚಾಗಿ ಬರಿತಾನೆ ಏನೇನೊ ಅಂತ ಅವನಷ್ಟೆ ಅಲ್ಲ ಇನ್ನು ಹಲವರೂ ಎಂದು ಕೊಳ್ಳಬಹುದು. ಕೆಲವರು ನೇರವಾಗಿ ಹೇಳಿಯೂ ಇದ್ದಾರೆ. ಹಾಗಾಗೆ ಮೇಲೆನ ಸಾಲುಗಳು ನಮಗಾಗೆ ಬರೆದು ಕೊಟ್ಟಹಾಗೆ ಇದೆ. 
ನೀವು social mediaವನ್ನು ಹೇಗೆ ಬಳಸಿಕೊಳ್ಳುತ್ತೀರೋ ಹಾಗೆ ಕಾಣುತ್ತದೆ. ನನ್ನ news feedಲಿ ಮೇಲಿನ ಅಂಶಗಳನ್ನು ಯಾರದರು ನನ್ನ ಸ್ನೇಹಿತರು ಪದೆ ಪದೆ ಹಾಕುತ್ತಿದ್ದರೆ ಅಂತವರನ್ನು unfollow ಮಾಡುತ್ತೇನೆ. ಹಾಗು ನಾನು groupಗಳಿಗೆ ಸೇರುವುದು ಕೂಡ ಅದರಿಂದ ಯಾವ ಮಾಹಿತಿ ನನಗೆ ಸಿಗುತ್ತದೆ ಎನ್ನುವುದರ ಆಧಾರದ ಮೇಲೆ. ಹಾಗಾಗಿ ನನ್ನ news feed ತುಂಬ ವಿಜ್ಞಾನದ, ಸಂಸ್ಕೃತಿಯ ಬಗ್ಗೆ, ಆಚರಣೆಗಳು, ಆಧ್ಯಾತ್ಮ, ಹೆಮ್ಮೆಯ ಮೋದಿ ಬಗ್ಗೆ ಅಥವ ಯಾವುದೇ ಜ್ಞಾನದ postಗಳೇ ತುಂಬಿರುತ್ತದೆ. ಅವುಗಳನ್ನು ಓದಿ ನನಗೆ ನಿಮ್ಮ ಬಳಿ ಹಂಚಿಕೊಳ್ಳಬೇಕೆಂದೆನಿಸಿ share ಮಾಡುತ್ತೇನೇ ಹೊರೆತು ಯಾವುದೇ likeಗಳಿಗಾಗಿ ಅಲ್ಲ. ಇನ್ನು ಒಂದು ಗಮನಿಸಿದ್ದೇನೆ, ನಾನು ಎಂದಾದರು ನನ್ನ profile pic update ಮಾಡಿದಾಗ ಎಲ್ಲಿಲ್ಲದ likeಗಳು ಬರುತ್ತದೆ. ಅದನ್ನು ನೋಡಿದಾಗ ನನಗನಿಸೋದು ಒಂದೆ, ನನ್ನ profile pic ಇಂದ ಅವರಿಗೇನು ಲಾಭ? ಅಷ್ಟೊಂದು ವಿಷಯಗಳನ್ನು ಬಿಟ್ಟು ನನ್ನ pic like ಮಾಡ್ತರಲಾ ಎಂದು. ನನ್ನ ಮುಖ ಅಷ್ಟೊಂದು ಇಷ್ಟ ಎಂತಾದರೆ ಖುಷಿಯೇ ಆದರೂ ನನಗೆ ಹೆಚ್ಚು ಖುಷಿಯಾಗೋದು ನನ್ನಿಂದ ಸ್ವಲ್ಪವಾದರೂ knowledge share ಆದಾಗ.
ಹಾ, ಇವಾಗ ಮತ್ತೆ ಹಾಡಿಗೆ ಬರೋಣ, (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಯಾರಿಗಾದರೂ ನನ್ನ post irritate ಆಗುತ್ತಿದ್ದರೆ ನನ್ನ ಮುಖಪುಟಕ್ಕೆ ಹೋಗಿ unfollow ಆಗಿ, ನಿಮ್ಮ ನೆಚ್ಚಿನ ನಾಯಕ ನಾಯಕಿಯರ updates ಮಾತ್ರ ಪಡೆದುಕೊಳ್ಳಿ.
ಇನ್ನೊಂದು ಹೇಳ ಬಯಸುತ್ತೇನೆ, ನಾನೆಂದು ಬರೆದವನಲ್ಲ, facebook ನನ್ನ ಬರೆಯಲು ಪ್ರೇರೇಪಿಸಿದೆ. ನನ್ನ drawings, paintings, programming ಗಳ ಬಗ್ಗೆ ಆಸಕ್ತರ ಬಳಿ ಹಂಚಿಕೊಳ್ಳಲು ಸಹಾಯ ಮಾಡಿದೆ. (ಹಾಡುವುದು ಅನಿವಾರ್ಯ ಕರ್ಮ ನನಗೆ, ಕೇಳುವವರಿಹರೆಂದು ನಾ ಬಲ್ಲೆ ಅದರಿಂದ, ಹಾಡುವೆನು ಮೈದುಂಬಿ ಎಂದಿನಂತೆ)
ನನ್ನ ಬಳಿ ಹೇಳ್ಕೊಳೊಕ್ಕೆ ತುಂಬ ಇದೆ ಸ್ವಾಮಿ, ಹೇಳ್ಕೊತೀನಿ. ನಿಮಿಗೆ ಬೇಡ ಎಂದ್ರೆ unfollow ಮಾಡಿ ಇಲ್ಲ unfriendಏ ಮಾಡಿ. ಒಂದಂತು ಸತ್ಯ,
"#ಆ_ನೋ_ಭದ್ರಾಃ_ಕೃತವೋ_ಯಂತು_ವಿಶ್ವತಃ "
ಅಂಥ ಋಗ್ವೇದದಲ್ಲಿ ಒಂದು ಮಾತಿದೆ. ಅಂದರೆ, ಒಳ್ಳೆ ವಿಷಯ ಪ್ರಪಂಚದ ಯಾವುದೇ ಮೂಲೆಲಿದ್ರೂ ತೆಗೆದುಕೊಳ್ಳಬಹುದು ಅಂಥ.

Tuesday, September 22, 2015

ಪುರಾಣ vs ಇತಿಹಾಸ

‪#‎ನನಗನಿಸಿದ್ದು‬
ನನಗೆ ಕಲಿಸಿದ ಹಾಗೆ ಪುರಾಣಗಳಿಗೂ ಇತಿಹಾಸಕ್ಕೂ ಇರುವ ವ್ಯತ್ಯಾಸವೇನೆಂದರೆ, ಪುರಾಣಗಳು ಕೇವಲ ಕಥೆಗಳು. ರಾಮನ ಕಥೆ, ಕೃಷ್ಣನ ಕಥೆ ಎಂದು ನಮಗೆ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇತಿಹಾಸ ಎಂದೆಂದಿಗೂ ನಿಜ, ಟಿಪ್ಪು ಎಂಬ ಮಹಾ ರಾಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನು, ಮಕ್ಕಳ ಪ್ರೇಮಿ ಚಾಚ ನೆಹರು ಎಂದು ಉದಾಹರಣೆಗಳನ್ನು ಕೊಡುತ್ತಿದ್ದರು. ಆದರೆ ಇವಾಗಿನ ಬೆಳವಣಿಗೆಗಳ ಪ್ರಕಾರ ಇತಿಹಾಸ ತನ್ನ ರಾಜನ ಒಲಿಸಿಕೊಳ್ಳುವುದಕ್ಕಾಗಿ, ಪ್ರಶಸ್ತಿ, ಸಂಭಾವನೆ ಪಡೆಯುವುದಕ್ಕಾಗಿ ಬರೆದಿರುವುದು. ಪುರಾಣಗಳು ಎಂದೆಂದಿಗೂ ಸತ್ಯ ಹಾಗು ಬದಲಾಗದ ಮಹಾ ಗ್ರಂಥಗಳು. ಈ ಇತಿಹಾಸವನ್ನು ಕಥೆಗಳೆಂದು, ಪುರಾಣಗಳನ್ನು ಸತ್ಯವೆಂದು ತಿಳಿಸಿಕೊಟ್ಟ ಅಂತರ್ಜಾಲ ಹಾಗು ತಂತ್ರಜ್ಞಾನಕ್ಕೆ ಶರಣು.
ಸುಮ್ಮನೇ ಸಮಾಜ ಮೇಷ್ಟ್ರತ್ರ ಮೊಘಲರ ದೊರೆ ಗೊತ್ತಿಲ್ಲದೇ ಪೇಚಾಡಿ ಮುಷ್ಟಿ ಏಟು ತಿಂದಿದ್ದೆ, ಹತ್ತತ್ತಸಲ ಇತಿಹಾಸ ಬರ್ದಿದ್ದೆ, ಹುಡುಗಿರ ಮುಂದೆ ಮರ್ಯಾದೆ ತಗೆದು ಹೊರಗೆ ಹಾಕಿದ್ರು. ಇದು ನಮ್ಮೆಲ್ಲರ ಇತಿಹಾಸ.. ಅನ್ಯಾಯವಾಗಿ ನನ್ನ ಹೊಡೆದ್ರಲ್ಲಾ ಮೇಷ್ಟ್ರೇ.. ಇನ್ಮುಂದಾದ್ರು ಅಜ್ಜಿ ಹತ್ರ ಕೇಳಿದ್ದ ಕಥೆ ಇತಿಹಾಸ ಪುಸ್ತಕದಲ್ಲಿ ಬರ್ಲಿ. ಏನಂತೀರ?

ref:
https://www.facebook.com/1555043871409222/photos/a.1555049441408665.1073741827.1555043871409222/1654923281421280/?type=3

Wednesday, September 16, 2015

ಸ್ವಲ್ಪ ಭಾವನಾತ್ಮಕವಾಗಿ ಯೋಚಿಸೋಣ.

ನಮ್ಮ ದೇಶದ ಸಂಸ್ಕೃತಿ ಹೇಗಿದೆಯೆಂದರೆ ಇಂದು ಮಾರುಕಟ್ಟೆಗೆ ಹೋದಾಗ ‪#‎ನನಗನಿಸಿದ್ದು‬ .
ಗಣಪತಿ ಹಬ್ಬ ಅಥವ ಯಾವುದೇ ಹಬ್ಬ ಬರಿಯ ದೇವತಾರಾಧನೆಯಷ್ಟೇ ಅಲ್ಲದೇ ರೈತರ ಹಾಗು ಅನೇಕ ವ್ಯಾಪಾರಿಗಳ ಸುಗ್ಗಿಯ ಕಾಲ ಕೂಡ. ನಮ್ಮ ಪೂರ್ವಿಕರು ಏನೆ ಮಾಡಿದರೂ ಅದರ ಹಿಂದೆ ನೈಸರ್ಗಿಕವಾಗಿ ಜನಜೀವನಕ್ಕೆ ಹತ್ತಿರವಾಗೇ ಇರುತ್ತದೆ. ನಾನಿಲ್ಲಿ ವೈಜ್ಞಾನಿಕ ಕಾರಣ ಹೇಳುವುದಿಲ್ಲ. ನಿಮ್ಮ ವೈಜ್ಞಾನಿಕ ಕನ್ನಡಕ ಕಳಚಿ, ಚಕ್ರವರ್ತಿ ಸೂಲಿಬೆಲೆ ಹೇಳಿದಂತೆ, ಎಲ್ಲಿ ವಿಜ್ಞಾನ ಕೊನೆಯಾಗುತ್ತದೋ ಅಲ್ಲಿ ನಮ್ಮ ವೇದಗಳ ಜ್ಞಾನ ಪ್ರಾರಂಭ, ಹಾಗಾಗಿ ಸ್ವಲ್ಪ ಭಾವನಾತ್ಮಕವಾಗಿ ಯೋಚಿಸೋಣ.
ಹಬ್ಬಗಳಂದು ಹೂವು, ಹಣ್ಣು, ತರಕಾರಿ ಮಾರುವವರಿಗೆ ಎಂದಿಲ್ಲದ ಆದಾಯ ಹಾಗು ಸಂತೋಷ. ಬಾಳೆಗಿಡದಲ್ಲಿ ಬಾಳೆಹಣ್ಣಷ್ಟೇ ಜನ ತಿನ್ನಲು ಉಪಯೋಗಿಸಿದರೆ, ಹಬ್ಬ ಹರಿದಿನಗಳಲ್ಲಿ ಬಾಳೆಕೊಂಬು, ಬಾಳೆ ಎಲೆಗಳಿಗೆ ಎಲ್ಲಿಲ್ಲದ ಬೇಡಿಕೆ. ನಗರಗಳಲ್ಲಿ ಅನಾಯಾಸವಾಗಿ ಮಾವಿನ ಸೊಪ್ಪು, ಗರಿಕೆಗೂ ಗಳಿಕೆ ಬರುತ್ತದೆ. ಅಂದಮೇಲೆ ಈ ಬಾಳೆ ಬೆಳೆದವರಿಗೆ ಡಬ್ಬಲ್ ಧಮಾಕವಲ್ಲವೇ? ಯಾವ ಜನಪ್ರಿಯತೆ ಕೋರದ, ತನ್ನ (ಬೆಲೆ ಕಟ್ಟಲಾಗದ)ಕಲೆಯನ್ನು ಸಣ್ಣ ಮೊತ್ತಕ್ಕೆ (ಮುಳುಗಿಸುತ್ತಾರೆಂದು ಗೊತ್ತಿದ್ದು)ಮಾರುವ ಕುಂಬಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆಯಲ್ಲವೇ?
ಇನ್ನು ಭಾವನಾತ್ಮಕವಾಗಿ ಯೋಚಿಸೋಣ, ನಾಳೆ ನಮ್ಮ ಮನೆಯವರೆಲ್ಲಾ ಒಟ್ಟಿಗೆ ಸೇರುತ್ತಿದ್ದೇವೆ. ಎಲ್ಲೆಲ್ಲೋ ವಾಸವಾಗಿರುವ ನಾವೆಲ್ಲ ಹಬ್ಬಕ್ಕಾದರೂ ಸೇರಿ ಖುಶಿಯಾಗಿ ಕಳೆಯುವುದಕ್ಕೆ ಸಹಾಯ ಮಾಡುತ್ತವೆ ಈ ಹಬ್ಬಗಳು. ಪಟಾಕಿ ಹೊಡೆಯುವ ಸಣ್ಣ ಮಕ್ಕಳನ್ನು ನೋಡಿದಾಗ ತಮ್ಮ school, class, tables, formulas ಎಲ್ಲಾ ಮರೆತು ಸಂತೋಷದಿಂದಿರುತ್ತವೆ. ದಿನವಿಡೀ ಕೆಲಸ ಮಾಡುವ ಮನೆಯ ಮಹಿಳೆಯರಿಗೆ ಹಬ್ಬದ ದಿನ ಕೆಲಸ ಎರಡಷ್ಟಾದರೂ ಚೂರೂ ನೋಯಿಸಿಕೊಳ್ಳದೇ ಸಡಗರದಿಂದ ಓಡಾಡಲು ಎಲ್ಲಿಂದ ಶಕ್ತಿ ಬರುತ್ತದೆ, ಹಬ್ಬಗಳಿಂದ ತಾನೆ?
ನಮ್ಮ ಸರಕಾರದ ಬೊಕ್ಕಸಕ್ಕೂ ಹಬ್ಬಗಳು ಸಹಾಯ ಮಾಡುತ್ತವೆ. ಹೇಗೆ ಗೊತ್ತೇ? ಈ 3-4 ದಿನ ಬಸ್ಸುಗಳು ತುಂಬಿ ತುಳುಕುತ್ತವೆ.ಖುಷಿಯಾಗಿ ಕೆಲಸ ಮಾಡುವ ಜಾಗ ಹೊಸತಾಗಿ ಸಡಗರದಿಂದ ಹೊಳೆಯುತ್ತಿರುತ್ತವೆ. ನಂತರದ 3-4 ದಿನ ಕೆಲಸ ಮಾಡುವರ ಮನಸ್ಸು ಒಂದಿಷ್ಟು ಹೆಚ್ಚೇ ದುಡಿಸುತ್ತದೆ.
ಹಬ್ಬಗಳಂದು ಹಣದ ಬಗ್ಗೆ ಯಾರೂ ಯೊಚಿಸುವುದಿಲ್ಲ. ಅಂದು ಅತಿ ಹೆಚ್ಚು ವಹಿವಾಟು ನಡೆಯುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಹಬ್ಬಗಳ ಆಚರಣೆ ಮೂಢನಂಬಿಕೆ ಎನ್ನುವ ಈ ಬುದ್ದಿಜೀವಿಗಳಿಗೂ ಹಬ್ಬ ಪುಕ್ಕಸಟ್ಟೆ ಪ್ರಚಾರ ಕೊಡುತ್ತವೆ.
ನೀವೇ ಹೇಳಿ, ಈ ಮನುಷ್ಯ ಸಮಾಜ ಜೀವಿ, ವಹಿವಾತಿನಿಂದ ತನ್ನಲ್ಲಿದ್ದ ಸಂಪತ್ತನ್ನು ಇನ್ನೊಬ್ಬನಿಗೆ transfer ಮಾಡಿ ತಾನೂ ಸಂತೊಷ ಪಟ್ಟು ಮತ್ತೊಬ್ಬನನ್ನೂ ಸಂತೋಷ ಪಡಿಸುವ ಹಬ್ಬಗಳು ಮೂಡನಂಬಿಕೆ ಹೇಗಾಗುತ್ತವೆ? ನನ್ನ ಅಭಿಪ್ರಾಯ ಇಷ್ಟೇ, ಯಾವುದೇಕಾರಣಕ್ಕೂ ಈ ಬುದ್ದಿಜೀವಿಗಳ, ಪ್ರಗತಿಪರರ ಮಾತುಗಳಿಗೆ ಕಿವಿಗೊಡಬೇಡಿ, ನಿಮ್ಮ ಶಕ್ತ್ಯಾನುಸಾರ ಸಂಭ್ರಮಿಸಿ, ನಿಮ್ಮ ಸಂಭ್ರಮದ ಹಿಂದೆ ಎಷ್ಟೋ ವ್ಯಾಪಾರಿಗಳ, ರೈತರ ಸಂಭ್ರಮ ಅಡಗಿದೆ. ವಿಶಾಲವಾಗಿ ಯೋಚಿಸಿ. ನಮ್ಮ ಪೂರ್ವಿಕರು ಸಾವಿರಾರು ವರ್ಷ ತಪಗೈದು ಸಂಪಾದಿಸಿದ ಜ್ಞಾನದಿಂದ ಮಾಡಿದ ಆಚರಣೆಗಳನ್ನು ವಿರೋಧಿಸುವ ಈ ಲದ್ದಿ ಜೀವಿಗಳ ತರ್ಕ ಸಮವಲ್ಲ.
ಹಾಗೇ ಇನ್ನೊಂದು, ತಮಾಷೆಗೆಂದೂ ಉಪ್ಪಿ2 ಗಣೇಶ, ಬಾಹುಬಲಿ ಗಣೇಶ ಇಂಥವುಗಳಿಗೆ ಪ್ರೋತ್ಸಾಹಿಸಬೇಡಿ. ಏಕೆಂದರೆ ನಮಗೆ ದೇವರ ರೂಪ ಗೊತ್ತಿಲ್ಲ, ನಮ್ಮಂಥವರಿಗಾಗೇ ನಮ್ಮ ಋಷಿಮುನಿಗಳು ಸಾವಿರಾರು ವರ್ಷ ಸಾಧನೆಗೈದು, ದೇವರನ್ನು ಸಾಕ್ಷಾತ್ಕರಿಸಿ ರೂಪಗಳ ವರ್ಣನೆ ಕೊಟ್ಟಿದ್ದಾರೆ. ಅದನ್ನೇ ಆರಾಧಿಸೋಣ. ನಮ್ಮ ಸಂಸ್ಕೃತಿಯ ರಕ್ಷಣೆ ನಮ್ಮ ಕೈಲಿದೆ.
ಅಂದಹಾಗೆ ಕೊನೆಯದಾಗಿ,
ಗಣೇಶ ಬಂದ, ಕಾಯಿಕಡುಬು ತಿಂದ
ಚಿಕ್ಕ ಕೆರೆಲಿ ಎದ್ದ, ದೊಡ್ಡ ಕೆರೆಲಿ ಮುಳುಗಿದ
ಗಣಪತಿ ಬೊಪ್ಪ ????


Sunday, September 13, 2015

ಆಯುಷ್ಮಾನ್ ಭವ

ಅದ್ಯಾವುದೋ day cake cut ಮಾಡಿದ್ದನ್ನು ನೋಡಿ today ‪#‎ನನಗನಿಸಿದ್ದು‬ .
ಭಾರತಕ್ಕೆ ಇಲ್ಲಿಯ ಸಂಸ್ಕೃತಿಯ ಬಗ್ಗೆ ಅಪಾರವಾಗಿ ಕೇಳಿ ಕುತೂಹಲದಿಂದ ಬಂದಿದ್ದ ಬ್ರಿಟೀಷ್ ವ್ಯಕ್ತಿ ತಾನು ಉಳಿದುಕೊಂಡಿದ್ದ ಹೋಟೆಲ್ ರೂಮ್ ನ ಪಕ್ಕದ ರೂಮ್ ಹುಡುಗ "take this uncle, today is my birthday" ಎಂದು cake ತಂದು ಕೊಟ್ಟಾಗ ಮುಗುಳ್ನಕ್ಕನಂತೆ ಆ ಬ್ರಿಟೀಷ್. ನಂತರ ಒಂದು thanks ಹೇಳಿ "where did you get this cake?" ಎಂದು ಕೇಳಿದಾಗ from my dad ಎಂದು ಬಂದ ಉತ್ತರ ಮುಗ್ಡವೆನಿಸಿದರೂ cake ಜನಕರಾದ ಬ್ರಿಟೀಷ ವ್ಯಕ್ತಿಗೆ ತಾವು ಮಾಡಿದ್ದ ಆಕ್ರಮಣದ ಪ್ರಭಾವ ಅರಿವಾಗುತ್ತದೆ. ಅಷ್ಟೇ ಸಾಲದೆಂದು ಕೆಳಗಡೆ ಇದ್ದ party hall ಗೆ ಹೋದ ಅವನಿಗೆ, ಅಲ್ಲಿದ್ದ ಬಲೂನ್ಸ್, ಹಾಕಿದ್ದ ಹ್ಯಾಟ್ ಗಳು, ದ್ವಿಮುಖಿಗಳಾಗಿ ತೋರಿಕೆಗಾಗಿ ನಗು ನಗುತ್ತಾ ಮಾತಾಡುತ್ತಿದ್ದ ಮುಖಗಳನ್ನು ನೋಡಿದಾಗ, ತನ್ನ ಕಲ್ಪನೆಯ ಭಾರತ ಇದೇನಾ? ಎಂದು ರೂಮ್ ಗೆ ಹಿಂತಿರುಗಿದನಂತೆ. ಮಾರನೇ ದಿನ ಹೊರಬಂದಾಗ ದಾರಿಯಲ್ಲಿ greetings cardಗಳನ್ನು ನೋಡಿ ಕುತೂಹಲದಿಂದ ಹತ್ತಿರ ಹೋಗಿ ಓದಿದಾಗ happy valentines day ಎಂದು ಇದ್ದಿದ್ದನ್ನು ನೋಡಿ ಮನಸ್ಸಿನಲ್ಲೇ ಬೇಸರಗೊಂಡು, ನಮ್ಮ ಭಾರತದ ಪೂರ್ವಿಕರಿಗೆ ಮನಪೂರ್ವಕವಾಗಿ ಕ್ಷಮೆಯಾಚಿಸುತ್ತಾ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ತನ್ನ ದೇಶಕ್ಕೆ ವಾಪಸಾಗುತ್ತಾನೆ.
"ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ" ಎಂದು ಪ್ರಾರ್ಥನೆಯೊಂದಿಗೆ ಗರ್ಭ ಧರಿಸಿ ಪ್ರಾಣ ಒತ್ತೆಯಿಟ್ಟು ಜನ್ಮ ನೀಡಿದ ತಾಯಿ, ಯಾವ ಸ್ವಾರ್ಥವಿಲ್ಲದೇ ಹೆಂಡತಿ ಮಕ್ಕಳಿಗಾಗಿ, ಮಕ್ಕಳ ಅಭಿವೃದ್ಧಿಗಾಗಿ ದುಡಿವ ತಂದೆ, ಶ್ರೇಷ್ಟ ದಾನವಾದ ವಿದ್ಯಾದಾನ ಮಾಡಿದ ಗುರುಗಳನ್ನು ಪ್ರತಿದಿನ ನೆನೆಸಿಕೊಳ್ಳುವುದನ್ನು ಬಿಟ್ಟು ಒಂದು ದಿನ cake cut ಮಾಡಿ ಕೈತೊಳೆದುಕೊಳ್ಳುವುದು fathers day, mothers, day teachers day ಎಂದು wish ಮಾಡಿ ಏನೋ ಸಾಧಿಸಿದಂತೆ ಬೀಗುವುದು ಎಷ್ಟು ಮಟ್ಟಿಗೆ ಸರಿ? ಅದರಲ್ಲೂ cake cut ಮಾಡಿಸುವ ಸಂಪ್ರದಾಯ ನಾವು ನಮ್ಮತನವನ್ನು ಕಳೆದು ಕೊಂಡಿರುವುದನ್ನು ತೋರಿಸುತ್ತದೆ. ಪ್ರತಿದಿನ ಶಾಲೆಗಳಲ್ಲಿ ಮೇಲಿನ ಮಂತ್ರ ಹೇಳಿಸಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬೀಜ ಬಿತ್ತಿದಿದರೆ ಸಂಸ್ಕೃತದ ಶ್ಲೋಕ ಎಂದು ಅದು ಕೋಮುವಾದ ಆಗುತ್ತದೆ ಎಂದು ಹೌಹಾರಿಕೊಳ್ಳುವ ಬುದ್ದಿಜೀವಿಗಳ ಮಂಗಾಟ ನಗು ತರಿಸುವಂತದ್ದೆ.
"ಸಮುದ್ರವಸನೇ ದೇವಿ ಪರ್ವತಸ್ಥನ ಮಂಡಲೆ, ವಿಷ್ಣುಪತ್ನಿ ನಮಸ್ಥುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ" ಎಂದು ನಮ್ಮಂಥಾ ಸಾವಿರಾರು ಪಾಪಿಗಳು ತುಳಿದು, ಮೈತುಂಬೆಲ್ಲಾ ರಂಧ್ರಗಳನ್ನು ಕೊರೆದು, ಅಗೆದು ಬಗೆದು ಹಾಳು ಮಾಡುತ್ತಿದ್ದರೂ ಸಹಿಸಿಕೊಂಡಿರುವ ಭೂಮಿತಾಯಿಗೆ ಕ್ಷಮೆಯಾಚಿಸುವ ಮಂತ್ರ ಹೇಳಿಕೊಟ್ಟು ಪ್ರತಿನಿತ್ಯ ಪಠಿಸಿ ಪರಿಸರದ ಬಗ್ಗೆ ಕಾಳಜಿ, ಗೌರವ ಅದರ ಅನಂತಾನಂತ ಕರುಣೆಯ ಸ್ಮರಣೆ ಮಾಡದೆ ಎಂದೋ ಒಂದು ದಿನ environment day ಎಂದು ದುಡ್ಡು ಕೊಟ್ಟು ಗಿಡ ನೆಟ್ಟು 4 photo ತೆಗೆಸಿಕೊಂಡು facebook ಲಿ ಹಾಕಿದರೆ ಏನು ಪ್ರಯೋಜನ. ಅಲ್ಲದೇ ಅಂದು ನೆಟ್ಟ ಗಿಡಗಳನ್ನು ನಮ್ಮ ಕ್ಷಮಯಾ ಧರಿತ್ರಿಯೇ ಮುಂದೆ ಕಾಪಾಡಬೇಕು, ನೆಟ್ಟವರು ಅದಕ್ಕೆ ಇನ್ನೆಂದೂ ನೀರಾಕಲಾರರು.
"ಗಂಗೇ ಚ ಯಮುನೇಚೈವ ಗೋದಾವರೀ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ನಶಿಸಿ ಹೋಗುತ್ತಿರುವ ನಮ್ಮ ಜೀವನಾಧಾರದ ಬಗ್ಗೆ ಕಾಳಜಿ ಹಾಗು ಗೌರವಗಳನ್ನು ಬೆಳಸಬಹುದಲ್ಲವೇ? ಬದಲಾಗಿ water day ಅಂತೆ.
ಹುಟ್ಟು ಹಬ್ಬದ ದಿನ ಅತಿ ಹೆಚ್ಚು calories ಸಿಗುವ ಎಣ್ಣೆ ಹಚ್ಚಿ ಸ್ನಾನ ಮಾಡಿ ಗುರು ಹಿರಿಯರಿಗೆ ನಮಸ್ಕಾರ ಮಾಡಿ ಹೊಸ ಉಡುಪು ಧರಿಸಿ, "ಆಯುಷ್ಮಾನ್ ಭವ" ಆಯುಷ್ಯ, ಆರೋಗ್ಯ, ಸಂಪತ್ತು ಸಿಗಲೆಂದು ಆಶಿರ್ವಾದ ಪಡೆದು, ದೇವಸ್ಥಾನಗಳಿಗೆ ಹೋಗಿ ಒಂದು ಧನಾತ್ಮಕ ಮನಸ್ಸು ಗಳಿಸಿಕೊಂಡು, ಅಮ್ಮ ಮಾಡಿದ ತನಗಿಷ್ಟದ ಅಡಿಗೆ ಊಟ ಮಾಡಿ ಕೂಡ ಸಂತೋಷ ಪಡಬಹುದಲ್ಲವೇ? 25000 ವರ್ಷಗಳ ನಮ್ಮ ಸಂಸ್ಕೃತಿಯನ್ನು ಒದ್ದು ಮೊನ್ನೆ ಮೊನ್ನೆ ಸೃಷ್ಟಿಯಾದ ಪಾಶ್ಚಿಮಾತ್ಯರ cake cut ಮಾಡುವುದನ್ನು ಸರ್ವೇಸಾಮಾನ್ಯವಾಗಿ ಎಂಬಂತೆ ಪ್ರತಿಯೊಬ್ಬರೂ ಆಚರಿಸುವುದನ್ನು ನೋಡಿದಾಗ ನಮ್ಮಂಥಾ ಶತ ಸಹಸ್ರ ಮೂಡರು ಇನ್ನಿಲ್ಲ ಎಂದೆನಿಸುತ್ತದೆ. ನಿಮ್ಮ ಮಾಹಿತಿಗಾಗಿ cake ಎಂಬ ತಿನಿಸು ನಮ್ಮ ಭಾರತಕ್ಕೆ ತಂದಿದ್ದು ಬ್ರಿಟೀಷರ ಕಾಲದಲ್ಲಿ ಅಂದರೆ 200-300 ವರ್ಷಗಳ ಹಿಂದೆ. ಅಲ್ಲಿಯವರೆಗು ನಮ್ಮ ಪ್ರಾಚೀನರು ಜನ್ಮದಿನವನ್ನು ಆಚರಿಸುತ್ತಲೇ ಇದ್ದರು ಎಂಬುದನ್ನು ಮರೆಯಬಾರದು.
"ಓಂ ಸಹ ನಾವವತು, ಸಹ ನೌ ಬುನಕ್ತೋ, ಸಹ ವೀರ್ಯಂ ಕರವಾವಹೈ, ತೇಜಸ್ವಿ ನಾವಧೀತಮಸ್ತು ಮಾವಿದ್ವಿಶಾವಹೈ, ಓಂ ಶಾಂತಿ: ಶಾಂತಿ: ಶಾಂತಿಃ" ಎಂದು ಶಾಲೆಗಳಲ್ಲಿ ಎಲ್ಲರೂ ಕೈ ಮುಗಿದು ಪ್ರಾರ್ಥನೆ ಮಾಡಿ ಹಂಚಿ ಊಟ ಮಾಡುವಾಗ, ಸರ್ವರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸುತ್ತಿದ್ದ ಆ ಸಂಸ್ಕೃತಿ ಮಾಯವಾಗಿದೆ. ನಮ್ಮ ಪೂರ್ವಿಕರು ಮಾಡಿರುವ ಹಬ್ಬ ಹರಿದಿನಗಳ ಆಚರಣೆಯ ಹಿಂದೆ ಪ್ರಕೃತಿಯ ಸಂರಕ್ಷಣೆ ಹಾಗು "ಓಂ ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿದುಖ:ಭಾಗ್ಭವೇತ್, ಓಂ ಶಾಂತಿ: ಶಾಂತಿ: ಶಾಂತಿಃ" ಎಂದು ಸರ್ವರ ಸಂತೋಷ ಬಯಸಿದರೂ ಅದನ್ನು ಅಲ್ಲೆಗಳೆದು cake cutting ಭೂತ ಕುಣಿಯುತ್ತಿದೆ. ಇನ್ನಾದರೂ ಆ day ಈ dayಗಳೆಂದು cake cut ಮಾಡುವುದನ್ನು ಬಿಟ್ಟು, ವಿಶ್ವಗುರು ಭಾರತದತ್ತ ತಿರುಗಿರುವ ಬೇರೆ ದೇಶದವರನ್ನು ಸ್ವಾಗತಿಸಿ ನಮ್ಮ ಸಂಸ್ಕೃತಿಯ ವೈಭವವನ್ನು ಸಾರುವ ಕೆಲಸವಾಗಬೇಕಿದೆ.
https://www.youtube.com/watch?v=eZZfxngJh80

Saturday, September 5, 2015

ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರೆಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು.


ನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.

ಸ್ಟಾಫ್ ರೂಮ್ಗೆ ಬಂದಾಗ, ಮೊದಲ ಅನುಭವ ಕೇಳಲು ಕಾಯುತ್ತಿದ್ದ ಸೀನಿಯರ್ಸ್ ಗಳ ಬಳಿ ನನ್ನ ಮರ್ಯಾದೆ ಹೋಗಬಾರದೆಂದು ಹೆಚ್ಚಾಗಿ ಏನೂ ಹೇಳದೇ ಹಾಗೇ ಬಂದು ಕುಳಿತೆ. ನಂತರ ಒಂದೆರಡು ತಿಂಗಳುಗಳ ಕಾಲ ಕಷ್ಟವೆನಿಸಿದರೂ ನಿಧಾನವಾಗಿ ಇಷ್ಟವಾಗುತ್ತಾ ಹೋಯಿತು. ದಿನೇ ದಿನೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹುಡುಗರನ್ನು ನನ್ನ ಪಾಠದ ಕಡೆ ಆಕರ್ಷಿಸಲು ಪ್ರಯತ್ನ ಜೋರಾಗಿಯೇ ನಡೆದಿತ್ತು. ಸರ್ ಸ್ವಲ್ಪ ಫಾಸ್ಟ್, ಸರ್ ಕ್ಲಾಸ್ ಲಿ ಹಿಂದೆ ತುಂಬ ಗಲಾಟೆ ಮಾಡ್ತಾರೆ, ಸರ್ ತುಂಬಾ ಹೇಳ್ತಾರೆ ಎಂಬ ಚಾಳಿಗಳು ಸ್ವಲ್ಪ ಮನ ಕೆಡಿಸಿದರೂ ಸವಾಲಾಗಿ ತೆಗೆದುಕೊಂಡೆ. ಸ್ಟಾಫ್ ರೂಮೇ ನನಗೆ ಸರಿಯಾದ ದಾರಿ ತೋರಲು ಸಾಧ್ಯ ಎಂದು ಅರಿತ ನಾನು, ಕಾರಿಡಾರ್ನಲ್ಲಿ ಹೋಗುತ್ತಾ ಬರುತ್ತಾ ಸಹೋದ್ಯೋಗಿಗಳು ಹೇಗೆ ಮಾಡುತ್ತಾರೆ, ಅವರ ಎಡವು ತೊಡವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮನಸ್ಥಿತಿಯನ್ನು ಜ್ಞಾಪಿಸಿಕೊಂಡು, ಹಾಗೆಯೇ ವಿದ್ಯಾರ್ಥಿಗಳಿಂದ ಅವರಿಗರಿಯದೇ ಅವರು ಏನು ಬಯಸುತ್ತಾರೆ ಎಂದು ತಿಳಿದು, ಪ್ಲಾನ್ ಮಾಡಲು ಪ್ರಾರಂಭಿಸಿದೆ. ಅದುವರೆಗೂ ಸಂಪಾದಿಸಿದ ವಿಜ್ಞಾನದ ಅನೇಕ ವಿಷಯಗಳನ್ನು ಸಮಯಕ್ಕೆ ತಕ್ಕಂತೆ ಗಣಿತದ ಜೊತೆ ಕೂಡಿಸಿ ಹೇಳುತ್ತಿದ್ದಾಗ ಆಗುತ್ತಿದ್ದ ಸೂಜಿ ಬಿದ್ದರೂ ಕೇಳುವಷ್ಟು ಮೌನ, ಕ್ಲಾಸ್ ರೂಮ್ ನಲ್ಲಿ ಆದ ಬದಲಾವಣೆಗಳು ನನ್ನ ವೃತ್ತಿಯ ಶ್ರೇಷ್ಠತೆ ಹಾಗು ಸವಾಲಿನ ಪರಿಕಲ್ಪನೆ ತಿಳಿಸುತ್ತಾ ಬಂದಿತು. ಈಗಿನ ವಿದ್ಯಾರ್ಥಿಗಳಿಗೂ ಕೋಲು ಹಿಡಿದು, ಹೊಡೆದು ಬಡೆದು, ಬಯ್ದು ಹೆದರಿಸಿ ಹೇಳಿ ಕೊಡುವ ಶಿಕ್ಷಕರಿಗಿಂತ ಅವರ ಮನ ಗೆಲ್ಲುವ, ಕ್ಲಾಸ್ ರೂಮ್ನಲ್ಲಿ ಒಂದು ಮಟ್ಟಿಗೆ ಸ್ವೇಚ್ಛೆಯಾಗಿರಲು ಬಿಡುವ ಶಿಕ್ಷಕರನ್ನೇ ಹೆಚ್ಚು ಇಷ್ಟಪಡುತ್ತಾರೆ.
ಅಂತೂ ವರ್ಷಾಂತ್ಯದಲ್ಲಿ ನನ್ನ ಕ್ಲಾಸ್ ಇಷ್ಟ ಪಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ವೃತ್ತಿಯ ಮೇಲೆ ಇದ್ದ ಗೌರವ ಹಾಗು ಪ್ರೀತಿ ಜಾಸ್ತಿ ಆಗುತ್ತಾ ಬಂದಿತು. ಕ್ಲಾಸ್ ರೂಮ್ನಲ್ಲಿ ನಡೆಸುತ್ತಿದ್ದ ವಿಷಯಗಳ ವಾಗ್ವಾದಗಳು ವಿದ್ಯಾರ್ಥಿಗಳನ್ನು ಹೆಚ್ಚು ಓದಿನತ್ತ ತೊಡಗಿಸಿಕೊಳ್ಳಲು ಸಹಾಯವಾಗುತ್ತಿತ್ತು. ನಾನು ಗಣಿತವೇ ಶ್ರೇಷ್ಠ ಎಂದು ಹೇಳಿದರೆ, ಹುಡುಗರು ನನ್ನನ್ನು ಸೋಲಿಸಲಿಕ್ಕಾದರೂ ಹುಡುಕಿ ತರುತ್ತಿದ್ದ ಬೇರೆ ವಿಷಯಗಳ ಅಂಶಗಳು ನನ್ನ ಜ್ಞಾನ ಹೆಚ್ಚಿಸುವುದರ ಜೊತೆಗೆ ನನ್ನ ಮನಸ್ಸಿನ ಖುಶಿಗೆ ಮೂಲವಾಗುತ್ತಿತ್ತು. ನನ್ನ ಮಾತು ಕೇಳುವ ನೂರಾರು ಕಿವಿಗಳಿವೆ ಎಂದುಕೊಂಡಾಗ ಆಗುವ ಗರ್ವ, ಸಂತೋಷ, ಜವಾಬ್ದಾರಿಯ ಪ್ರಜ್ಞೆ ಅನುಭವಿಸದೇ ಅರಿವಿಗೆ ಬಾರದು. ಕ್ಲಾಸ್ ಗೆ ಶರ್ಟಿನ ತೋಳು ಮಡಚುತ್ತಾ, ಒಂದು ಕೈಲಿ ಡಸ್ಟರ್ ನ ಧೂಳು ಕೊಡವುತ್ತಾ ಕ್ಲಾಸ್ ರೂಮ್ಗೆ ಹೋಗಿ ಪಾಠ ಮುಗಿಸಿ ಹೊರ ಬರುವಾಗ ನನ್ನ ಆಯಸ್ಸು 1 ಘಂಟೆ ಹೆಚ್ಚಾದಂತೆ ಅನಿಸುತ್ತಿತ್ತು.
ಗುರಿ ಮುಂದೆ, ಗುರು ಹಿಂದೆ ಎಂಬಂತೆ ನನ್ನ ಹಿಂದೆ ನಿಂತು ನನ್ನ ನೂರಾರು ವಿದ್ಯಾರ್ಥಿಗಳ ಮುಂದೆ ದೂಡಿ ಮಾರ್ಗದರ್ಶನ ಮಾಡಿದ ಗುರುಗಳಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು. ನನ್ನ ರೂಪಿಸಿದ ಗುರುಗಳ ಪಟ್ಟಿ ದೊಡ್ಡದು. ಒಂದಕ್ಷರ ಕಲಿಸಿದಾತಂ ಗುರು ಎಂದು ತಲೆಯಲ್ಲಿ ತುಂಬಿದ, ಇಷ್ಟೊಂದು ಬರೆಯುವುದಕ್ಕೂ ಮೊದಲು ನನ್ನ ಮೊದಲ, ತೊದಲು ನುಡಿ ಕೇಳಿ ಖುಷಿ ಪಟ್ಟು ಮಾತು ಕಲಿಸಿದ ನನ್ನ ಮೊದಲ ಗುರು ತಾಯಿ, ಇದು resistor, transistor ಎಂದು ಮನೆಯಲ್ಲಿಯ TV, radio ಗಳನ್ನು ಬಿಚ್ಚುವಾಗ ಕೂರಿಸಿಕೊಂಡು, ಗ್ರಹಣಗಳು, ಹಗಲು ರಾತ್ರಿ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆ ಅರಿವು ಮೂಡಿಸಿ ನನ್ನಲ್ಲಿ ಸೃಜನಶೀಲತೆ ಬೆಳಸಿದ ನನ್ನ ತಂದೆ, ಮನೆಯ ಕಡಪ ಕಲ್ಲಿನ ಮೇಲೆ trigonometry derivations ಹೇಳಿಕೊಟ್ಟು ಗಣಿತದ ಕಡೆ ಒಲವು ಮೂಡಿಸಿದ ನನ್ನಣ್ಣ, ಅಜ್ಜಿಯ ಕನ್ನಡಕ, ಅಪ್ಪನ ಪಂಚೆ, ಥಿಯೇಟರ್ಗಳ ಪಕ್ಕ ಬಿದ್ದ advertisement ರೀಲ್ ಇಂದ film ಬಿಡುವ, ಅಗರಬತ್ತಿ ಕೊಳವೆಯಲ್ಲಿ telescope ಮಾಡಲು ಸಹಾಯ ಮಾಡಿದ್ದ ಬಾಲ್ಯ ಸ್ನೇಹಿತರು, ಶಿಕ್ಷಕ ವೃತ್ತಿಯಲ್ಲಿ ಬೆಳೆಯಲು ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದ ಸಹೋದ್ಯೋಗಿಗಳು ಎಲ್ಲರೂ ನನ್ನ ಗುರುಗಳೇ. ಶಿಕ್ಷಕ ವೃತ್ತಿಗಿಂತಲೂ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಸಮಾಧಾನ, ಸಂತೃಪ್ತಿ, ಪ್ರೀತಿ, ಗೌರವ ಎಲ್ಲವೂ ಸಿಗುವುದು ಶಿಕ್ಷಕನ ಕೆಲಸದಲ್ಲಿ.
ಇಂಜಿನಿಯರಿಂಗ್ ಓದಲು ನಾ ಮುಂದು ತಾ ಮುಂದು ಎಂದು ಓಡುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಸಲಹೆ ಅಷ್ಟೇ, ಹಾಗಂತ ಇಂಜಿನಿಯರಿಂಗ್ ಅನ್ನು ಯಾವುದೇ ಕಾರಣಕ್ಕೂ ಕಡಿಮೆ ಎನ್ನುತ್ತಿಲ್ಲ, ಎಲ್ಲಾ ವೃತ್ತಿಗಳಿಗೂ ತನ್ನದೇ ಆದ ಸ್ಥಾನಮಾನಗಳಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಿಸುವ ಶಿಕ್ಷಕರು ಬೇಕಾಗಿದ್ದಾರೆ. ಚಾಣಕ್ಯ ಹೇಳಿದಂತೆ ‘ರಾಜ ತನ್ನ ಕರ್ತವ್ಯದ ದಾರಿ ತಪ್ಪಿದಾಗ, ರಾಜ್ಯವನ್ನು ನಡೆಸುವ ಜವಾಬ್ದಾರಿ ಶಿಕ್ಷಕನ ಕೈಯಲ್ಲಿರುತ್ತದೆ’. ಮೊನ್ನೆ ಯಾವುದೋ ಬೇರೆ ಊರಿನಲ್ಲಿ ಒಬ್ಬ ಹುಡುಗ ಬಂದು ಸರ್ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಂಡಾಗ ಸಿಕ್ಕ ಖುಷಿ ಮತ್ತೆಲ್ಲಿ ಸಿಗುತ್ತದೆ ಹೇಳಿ. ‘ಸ್ವರಾಷ್ಟ್ರೇ ಪೂಜ್ಯಾತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||’ ದೇಶದಲ್ಲಿ ಮಾತ್ರ ರಾಜನಿಗೆ ಗೌರವ, ಆದರೆ ಜ್ಞಾನಿಗಳಿಗೆ ಎಲ್ಲಾ ಕಡೆಯಲ್ಲೂ ಗೌರವ ಸಿಗುತ್ತದೆ. ಅಂತಹ ಜ್ಞಾನವನ್ನು ಕೊಡುವ ವೃತ್ತಿಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳಸಿಕೊಳ್ಳಲಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಅರಿವು ಮೂಡಿಸುವಂತವರಾಗಲಿ. ದೇಶದಲ್ಲಿ ಒಳ್ಳೆ ಶಿಕ್ಷಕರಿದ್ದರೆ ‘ಹರ್ ಘರ್ ಸೆ ಅಫ್ಜಲ್ ನಹಿ ಚಾಣಕ್ಯ/ಕೌಟಿಲ್ಯ/ಆರ್ಯಭಟ/ಸುಶ್ರುತ/ನರೇಂದ್ರ ನಿಕಲೇಗ’.

Friday, August 14, 2015

‪ಅರ್ಥವಾಗದಿದ್ದರೆ ನಿರ್ದೇಶಕನ ಬುದ್ದಿವಂತಿಕೆ ಎಂಬ ಶೀರ್ಷಿಕೆ ಸರಿಯೇ‬?

ಉಪ್ಪಿ2 ಚಿತ್ರ ನೋಡಿ ‪#‎ನನಗನಿಸಿದ್ದು‬:
ಎಂದಿನಂತೆ ಅರ್ಥವಾಗದ ಹಾಗೆ ದೊಡ್ಡ ಫಿಲಾಸಫಿಯನ್ನು ಪಕ್ಕ ಲೋಕಲ್ ಸ್ಟಯ್ಲಲ್ಲಿ ಹೇಳಲು ಹೋಗಿ, ಉಪ್ಪಿಲ್ಲದ(ಕಥೆ) ಉಪ್ಪಿಟ್ಟು ಕೊಟ್ಟಿದ್ದಾರೆ ಉಪೇಂದ್ರ. ಉಪ್ಪಿಗಿಂತ ರುಚಿ ಇಲ್ಲ ಎಂದು ಹಾಡಿದವರೇ ಉಪ್ಪು ಹಾಕುವುದು ಮರೆತ ಹಾಗಿದೆ. ಅರ್ಥವಾಗದ ಹಾಗೆ ಚಿತ್ರ ಮಾಡುವುದು ಬುದ್ದಿವಂತಿಕೆ ಎನ್ನುವುದಾದರೆ ಈ ಚಿತ್ರ ಒ.ಕೆ.
ಫಿಲಾಸಫಿಯನ್ನು ಸುಂದರವಾಗಿ ಅರ್ಥವಾಗುವ ಹಾಗೆ ಹೇಳಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಅರಿಷಡ್ವರ್ಗಗಳ ಹತೋಟಿ ಬಗ್ಗೆ ಎಡಕಲ್ಲು ಗುಡ್ಡದ ಮೇಲೆ, ಧರಣಿ ಮಂಡಲ ಮಧ್ಯದೊಳಗೆ ಹೀಗೆ ಪುಟ್ಟಣ್ಣನವರು ತೋರಿಸಿಕೊಟ್ಟಿದ್ದಾರೆ. ಆದರೆ ಈರೀತಿ ತಿಕ್ಕುಲುತನ ಎಲ್ಲೂ ಕಂಡುಬಂದಿಲ್ಲ. ಇನ್ನು ಪ್ರೇಕ್ಷಕರ ಮೆದುಳು ಕೆದುಕುವಂಥಾ, Intervalನಲ್ಲಿ ಚರ್ಚೆಗೆ ಎಡೆ ಮಾಡಿಕೊಡುವ ಚಿತ್ರಗಳು ಸಾಕಷ್ಟಿವೆ. ಲೂಸಿಯ, ಉಳಿದವರು ಕಂಡಂತೆ, ರಂಗೀತರಂಗ ಇಂಗ್ಲೀಷ್ ನ Memento, Interstellar, etc,. ಆದರೆ ಈರೀತಿ ಮಕ್ಕಳ ಕಥೆಯ ಹಾಗೆ ತಲೆ ಬುಡವಿಲ್ಲದೆ ಮಾಡಿರುವುದು ವಿಚಿತ್ರವೇ ಸರಿ. ಹಣಗಳಿಸುವ ವ್ಯವಹಾರಿಕವಾಗಿ ಮಾಪನದಲ್ಲಿ ಇದು ದಾಕಲೆ ಮಾಡಬಹುದು ಆದರೆ ಮನಸಿಗೆ ಮುದ ನೀಡುವಲ್ಲಿ, ವಿಷಯ ತಲುಪಿಸುವಲ್ಲಿ ಸೋತಿದೆ.
ಚಿತ್ರದ ಆರಂಭ, ಕಥೆ ಎಂದು ಹೇಳಲಾರೆ, ಚಿತ್ರದಲ್ಲಿಯ ಕೆಲ ಕ್ರಿಯಾಶೀಲತೆ ಅಲ್ಲದೇ ಹಳೇ ಚಿತ್ರವನ್ನು ಮುಂದುವರಿದ ಭಾಗವಾಗಿ ಮಾಡಿ ಹೆಣೆದಿರುವುದು ಚೆನ್ನಾಗಿ ಮೂಡಿ ಬಂದಿದೆ. ಅದಕ್ಕೆ ಸ್ವಲ್ಪ ಕಥೆಯ ಬುನಾದಿ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತೋ ಏನೋ.
ಒಂದು ರೀತಿ ಜನ ಮುಗಿ ಬಿದ್ದು ನೋಡುತ್ತಿರುವುದು (ಕನ್ನಡ ಸಿನಿಮಾದ ಬಗ್ಗೆ ಇರುವ ಕ್ರೇಜಿತನ) ಖುಷಿ ತಂದು ಕೊಟ್ಟರೆ, ತಮ್ಮನ್ನು ತಾವು ಬುದ್ದಿವಂತರೆಂದು ಸಾಭೀತು ಪಡೆಸಲು ಹೊಗುಳುವುದನ್ನು ನೋಡಿದರೆ ನಗೆ ಬರುತ್ತದೆ.
ಹಲಸಿನ ಹಣ್ಣಿನ ಉಪ್ಪಿನಕಾಯಿ ತಿನ್ನುವುದು, ಸೊಪ್ಪಿನ ಪಾಯಸದಲ್ಲಿ ಮೆಣಸಿನ ಕಾಯಿ ಸಿಗುವುದು,
ಉಪ್ಪಿ೨ನಲ್ಲಿ ಕಥೆ ಹುಡುಕಿದಂತೆಂದ ಜಿತೇಂದ್ರ(ಜಗ್ಗಣ್ಣನ ಕ್ಷಮೆಯೊಂದಿಗೆ)


Wednesday, July 8, 2015

ಗ್ರಹಗಳು ಮನುಷ್ಯನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಅಥವಾ ಬೀರುತ್ತವೆಯಾ?

ಜ್ಯೋತಿಷ್ಯದ ಬಗ್ಗೆ ಚಕ್ರವರ್ತಿ ಸೂಲಿಬೆಲೆಯವರ ಲೇಖನ ಓದಿ ‪#‎ನನಗನಿಸಿದ್ದು‬
ಗ್ರಹಗಳು ಮನುಷ್ಯನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಅಥವಾ ಬೀರುತ್ತವೆಯಾ? ಜ್ಯೋತಿಷ್ಯಶಾಸ್ತ್ರವನ್ನು ಅವರು Data analysis ಗೆ ಹೋಲಿಸಿ ಬರೆದಿದ್ದಾರೆ. ಹೌದು , ವಿಜ್ಞಾನದ ಕನ್ನಡಕದಲ್ಲೇ ಈ ವಿಷಯವನ್ನು ನೋಡೋಣ, google ಹೇಗೆ ಕೆಲಸ ಮಾಡುತ್ತದೆ ಎಂದು ಒಮ್ಮೆ ಅರಿಯೋಣ, 
Googleನಲ್ಲಿ banks ಎಂದು ಬರೆದರೆ ಅದು banks in india, banks wages, banks jobs ಹೀಗೆ ತಾನಾಗಿಯೇ ಊಹಿಸಿ ನಮಗೆ ನಮ್ಮ ಹುಡುಕಾಟವನ್ನು ಸರಳಗೊಳಿಸುತ್ತದೆ. ಅಂಕಿಅಂಶಗಳ ಪ್ರಕಾರ ಅದರ ಊಹೆ ಪ್ರತಿಶತ 80ರಷ್ಟು ಸರಿಯಾಗಿಯೇ ಇರುತ್ತದೆ. ಒಂದು ಯಂತ್ರ ನಮ್ಮ ಮನಸ್ಸಿನಲ್ಲಿರುವುದನ್ನು ಹೇಗೆ ಊಹಿಸಿತು? ಇದು ಸಾಧ್ಯವಾದದ್ದು data analysis ಇಂದ.
Google ಪ್ರಪಂಚದ ಎಲ್ಲಾ ಹುಡುಕಾಟಗಳ ಅಂಕಿ ಅಂಶವನ್ನು ಇಟ್ಟು ಕೊಂಡು, ಹೆಚ್ಚು ಹುಡುಕಾಟ ಯಾವುದಾಗಿರುತ್ತದೆಯೋ ಅದನ್ನು ನಮಗೆ ತೋರಿಸುತ್ತದೆ. ಅಲ್ಲದೇ ಅದು ಹುಡುಕಾಟದ ಕ್ಷೇತ್ರದ ಮೇಲೂ ಅಂದರೆ Geo location ಮೇಲೂ ನಿರ್ಧರಿಸುವಷ್ಟು ಜಾಣ್ಮೆಯನ್ನು "ಮನುಷ್ಯ ತನ್ನ algorithm ಮೂಲಕ computer ಗೆ ಉಣಬಡಿಸಿದ್ದಾನೆ. ಮೇಲಿನ banks ಎಂದು ಅಮೇರಿಕಾದ computer ಲಿ ಬರೆದರೆ banks of America ಎಂದು ತೋರಿಸಿ ಬಹುದು. ಒಬ್ಬ ಮನುಷ್ಯನ ಮನಸ್ಸನ್ನು ಮಾನವ ನಿರ್ಮಿತ ಯಂತ್ರ ಅಳೆದರೆ ಮನುಷ್ಯನ ಕೈಯಲ್ಲಿ ಯಾಕೆ ಸಾಧ್ಯವಿಲ್ಲ? ಹೇಳಬೇಕೆಂದರೆ ಮನುಷ್ಯ ಊಹಿಸುವುದಲ್ಲಾ ನಿಖರವಾಗಿ ಹೇಳಬಹುದು. 
ನಮ್ಮ ಋಷಿಮುನಿಗಳ ಜ್ಯೋತಿಷ್ಯಶಾಸ್ತ್ರದಲ್ಲಿ ಇದೆಲ್ಲಾ ಸಾಧ್ಯವಾಗುತ್ತದೆ. Google ಮಾಡಿದ data analysis ಅನ್ನು ಋಷಿಗಳು ಸಾವಿರಾರು ವರ್ಷಗಳ ಹಿಂದೆ ಮನುಷ್ಯನ ಮೇಲೆ, ಗ್ರಹಗಳ, ಸೂರ್ಯನ, ಚಂದ್ರನ ಪರಿಣಾಮಗಳ ಮೇಲೆ ಮಾಡಿ ನಮಗೆ ಜ್ಯೋತಿಷ್ಯಶಾಸ್ತ್ರದ ಕೊಡುಗೆ ನೀಡಿದ್ದಾರೆ.
ಇನ್ನು ಅಲ್ಪರಾದ ನಮಗೆ ಅನುಭವವಾಗುವ ಕೆಲ ಪರಿಣಾಮಗಳನ್ನು ಗಮನಿಸೋಣ. ಕತ್ತಲಾದ ಮೇಲೆ ಎಲ್ಲೋ ಮೂಲೆಯಲ್ಲಿ ಭಯ, ಆತಂಕ ಮನೆ ಮಾಡುತ್ತದೆ ಏಕೆ? ಎಷ್ಟೇ ಪ್ರಯತ್ನ ಪಟ್ಟರೂ ರಾತ್ರಿಯ ವೇಳೆ ನಿದ್ರೆಯಿಂದ ಎಚ್ಚರವಿರಲು ಸಾಧ್ಯವಿಲ್ಲ, ಅಥವ ಎಚ್ಚರವಿದ್ದರೂ ಮನಸ್ಸು ಉಲ್ಲಾಸದಿಂದಿರಲು ಸಾಧ್ಯವಿಲ್ಲ, ಹಾಗೇ ಉದಯಕಾಲದ ಹೊಸತನ ಮಧ್ಯಾಹ್ನದ ವೇಳೆ ಇರುವುದಿಲ್ಲ. ಇದಕ್ಕೆಲ್ಲಾ ಒಂದು ಅಂಶ ಕಾರಣವಿರಬಹುದು, ಅದೇ ಸೂರ್ಯನ ಇರುವಿಕೆ. ಸೂರ್ಯನಿಲ್ಲದಿದ್ದರೆ ಅಥವ ಸೂರ್ಯ ಭೂಮಿಗೆ ಯಾವ ಕೋನದಲ್ಲಿದ್ದರೆ ಯಾವ ಯಾವ ಪರಿಣಾಮವಾಗುತ್ತದೆಂದು ಗಮನಿಸಬಹುದು.
ಚಂದ್ರ, ಉತ್ತಮ ಉದಾಹರಣೆ ಪೂರ್ಣ ಚಂದ್ರ ಪ್ರೇಮಿಗಳಲ್ಲಿ ಮಾಡುವ ಬದಲಾವಣೆ(ಕೇಳಿದ್ದು, ನೋಡಿದ್ದು) , ಸಾಗರದ ಅಲೆಗಳಲ್ಲಿ ಏರಿಳಿತಗಳ ಬದಲಾವಣೆ. 
ನಕ್ಷತ್ರವಾದ( ವಿಙ್ಞಾನದ ಪ್ರಕಾರ) ಸೂರ್ಯ ಹಾಗು ಉಪಗ್ರಹವಾದ ಚಂದ್ರನಿಂದ ಇಷ್ಟೊಂದು ಪರಿಣಾಮಗಳು ನಮ್ಮ ಅಲ್ಪಾನುಭವಕ್ಕೆ ಬಂದರೆ, ಅವೆರಡರ ಮಧ್ಯ ಬರುವ ಗ್ರಹಗಳೂ ಕೂಡ ಪರಿಣಾಮ ಬೀರಬಹುದಲ್ಲವೇ, ಇದೇ ಒಂದು ರೀತಿಯ data analysis.
ನಂತರ ಅವುಗಳ ಶಕ್ತಿ(intensity of radiations or gravity) , ನಮ್ಮ ಭೂಮಿಗೆ ಅವುಗಳ ಕೋನ ಇವುಗಳನ್ನೆಲ್ಲಾ ಅಧ್ಯಯನ ಮಾಡಿ ತಿಳಿಯುತ್ತಿದ್ದ ಋಷಿಗಳು ಸಾವಿರಾರು ಜನರ ಮೇಲೆ ಮಾಡಿದ ಏರುಪೇರುಗಳನ್ನೆಲ್ಲಾ ಒಂದಟ್ಟಿಗೆ ಹಾಕಿ(collection of data) data analysis ಇಂದ ಹೊರಬಂದಿರುವುದೇ ಜ್ಯೋತಿಷ್ಯಶಾಸ್ತ್ರ.
ಹಾಗಾದರೆ, ಈ ಜ್ಯೋತಿಷ್ಯಶಾಸ್ತ್ರ ಸುಳ್ಳಾದ ಉದಾಹರಣೆಗಳೇ ಹೆಚ್ಚು ಏಕೆ? ಉತ್ತರ ಬಹಳ ಸುಲಭ. ಸರಿಯಾಗಿ ಅಧ್ಯಯನ ಮಾಡಿದ ಜ್ಯೋತಿಷಿಗಳು ಬೆರಳೆಣಿಕೆ ಮಾತ್ರ. ಅವರ ಜ್ಯೋತಿಷ್ಯ ಕೂಡ ಸುಳ್ಳಾಗಬಹುದು ನಾವು ಕೊಟ್ಟ data ತಪ್ಪಿದ್ದರೆ. ಹಾಗಾಗಿ ಜ್ಯೋತಿಷ್ಯ ಸತ್ಯ. ಆದರೆ ಇಂದಿನ ಪರಿಸ್ಥಿತಿಗೆ ಅದು ಮಾರಾಟದ ಅಥವ ಪ್ರಚಾರದ ವಸ್ತುವಾಗಿದೆ.
Atomic bomb ವಿಙ್ಞಾನದ ದುರುಪಯೋಗವಲ್ಲವೇ , ಇದರಿಂದ ವಿಙ್ಞಾನವೇ ಅಪಾಯಕಾರಿ ಎಂಬ ತೀರ್ಮಾನ ಒಪ್ಪುವಂತದಲ್ಲ. ಹಾಗೇ ಜ್ಯೋತಿಷ್ಯ ಎಷ್ಟೋ ಜನರ ಹೊಟ್ಟೆಪಾಡಾಗಿರಬಹುದು, ಅದಕ್ಕಾಗಿ ಸಾಕಷ್ಟು ಮೋಸಗಳನ್ನು ಮಾಡಿರಬಹುದು. ಅದು ಏಕೆ ದುರುಪಯೋಗ ಎನ್ನಿಸಿಕೊಳ್ಳುವುದಿಲ್ಲ? ಅದನ್ನು ಮಾತ್ರ ಸುಳ್ಳು ಎಂಬ ತೀರ್ಮಾನಕ್ಕೆ ತಿರುಗುವುದು ಏಕೆ? ಉತ್ತರ ನಾವು ಹಾಕಿಕೊಂಡು ನೋಡುತ್ತಿರುವ ಕನ್ನಡಕ. 
ಆ ಕನ್ನಡಕ ಹಾಕಿಕೊಂಡು ಜ್ಯೋತಿಷ್ಯವನ್ನು ಅಣುಕಿಸಿ ಸಾಕಷ್ಟು ಚಿತ್ರಗಳು ಕೂಡ ಬಂದಿದೆ. ಜ್ಯೋತಿಷಿಗಳು ತಮ್ಮ ಬದುಕನ್ನೇ ನಿರ್ಧರಿಸಲು ಸಾಧ್ಯವಿಲ್ಲ ಇನ್ನು ಬೇರೆಯವರ ಭವಿಷ್ಯ ಹೇಗೆ ಹೇಳುತ್ತಾನೆ ಎಂಬ ಗೇಲಿ ಇರುತ್ತದೆ. ಇದಕ್ಕೆ ಉತ್ತರ ಮೇಲೆ ಹೇಳಿದ ವಿಷಯ ಒಂದಾದರೆ, contradictory ಕೆಲವು ಉದಾಹರಣೆ ನೋಡೋಣ. 
1. ಪರಾಶರು ತಮ್ಮ ಜ್ಯೋತಿಷ್ಯ ಜ್ಞಾನದಿಂದ ಮಹಾ ಸಂತಾನ ವೇದವ್ಯಾಸರಿಗೆ ಜನ್ಮ ಕೊಟ್ಟಿಲ್ಲವೇ(ಹುಟ್ಟು ಸಾವಿಲ್ಲದ ವಿಷ್ಣುವಿನ ಅವತಾರವಾದರೂ ನಮ್ಮಂಥ ಹುಲುಮಾನವರಿಗೆ ಅರಿವಾಗಲೆಂದು ಜನ್ಮ ತಾಳಿದರು ಎನ್ನಬಹುದು) 
2. ಸಂಧ್ಯಾಸಮಯದಲ್ಲಿ ಅಥವಾ ನಿರ್ಧಿಷ್ಟ ಸಮಯದಲ್ಲಿ ಮಿಲನದಿಂದಾದ ಮಕ್ಕಳು ರಾಕ್ಷಸರಾಗುತ್ತಾರೆಂದು ಕಷ್ಯಪರು ಹೇಗೆ ತಿಳಿದಿದ್ದರು?
3. ಗಾಂಧಾರಿಗೆ ತನ್ನ ಸಂತಾನ ದುಷ್ಟಬುದ್ಧಿಯವನು ಎಂದು ತಿಳಿದಿರಲಿಲ್ಲವೇ?
4. ಕಲಿಯುಗದಲ್ಲೂ ವ್ಯಾಸರಾಜರು ಪುರಂದರದಾಸರ, ಕನಕದಾಸರ ಆಗಮನದ ಬಗ್ಗೆ ಹಾಗೂ ಅವರ ಪೂರ್ವ ಅವತಾರದ ಬಗ್ಗೆ ತಿಳಿದವರಾಗಿದ್ದರು.
5. ಕೋಡಿ ಮಠದ ಎಷ್ಟೋ ಭವಿಷ್ಯ ನಿಜವಾಗಿದೆ.
ಭವಿಷ್ಯವನ್ನರಿತು ತಮ್ಮನ್ನು ತಾವು ಸುಧಾರಿಸಿಕೊಂಡವರು ತುಂಬಾ ಜನರಿದ್ದಾರೆ.
ಹಾಗಾಗಿ ಕೊನೆಯದಾಗಿ ನನ್ನ ಅಭಿಪ್ರಾಯ
ಜ್ಯೋತಿಷ್ಯ ಸತ್ಯ, ಆದರೆ ಅದನ್ನು ಅರಿಯುವ ಸಾಹಸ ಬೇಡ. ಭಗವದ್ಗೀತೆಯಲ್ಲಿ ಹೇಳಿದಂತೆ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾ ಚನ
ಮಾ ಕರ್ಮಫಲಹೇತುರ್ಭೋ ಮಾ ತೇ ಸಂಗೋsಸ್ತ್ವ ಕರ್ಮಣಿ
ನಮ್ಮ ಕೆಲಸ ನಾವು ಮಾಡೋಣ. ಫಲಾಫಲಗಳನ್ನು ಕೊಡುವ ಜವಾಬ್ದಾರಿ ಭಗವಂತನದು. ಭಗವಂತ ಅತಿ ದೊಡ್ಡ data analyst. ಅವನ ಬಳಿ ಜಗತ್ತಿನ ಪ್ರತಿಯೊಂದು data ಇದೆ, infact ಜಗದುದರ. ನಮ್ಮ data ಅಂದರೆ ಪೂರ್ವಕರ್ಮಗಳ ತುಲನೆ ಮಾಡಿ ಫಲ ಕೊಡುವುದಂತು ನಿಜ..

Sunday, July 5, 2015

‎ರಂಗೀತರಂಗ‬ ಕನ್ನಡದಲ್ಲಿ ಮೂಡಿಸಬಹುದೇ ಹೊಸ ತರಂಗ?

‪#‎ರಂಗೀತರಂಗ‬ ‪#‎SaveSandalwood‬
ಕನ್ನಡದಲ್ಲಿ ಮೂಡಿಸಬಹುದೇ ಹೊಸ ತರಂಗ?
ರನ್ನ ಚಿತ್ರ ನೋಡಿದ ಅಂಧಾಭಿಮಾನಿಗಳಿಗೆ ೨ ನಿಮಿಷ ಮೌನಾಚರಿಸುತ್ತಾ,
ಯಾವ ಲಾಂಗು ಮಚ್ಚು, ಹುಚ್ಚು ಕುಣಿತ, ಅರ್ಥವಿಲ್ಲದ ಹಾಡುಗಳು, ಅದೇ ಲವ್ ಸ್ಟೋರಿ, ಟಾಟ ಸುಮೋಗಳಿಲ್ಲದೆ,
ತುಳುನಾಡ ಮಡಿಲಲ್ಲಿ, ಸುಂದರವಾದ ಪ್ರಕೃತಿಯಲ್ಲಿ, ಸಂದರ್ಭೋಚಿತ ಪ್ರೇಮ ಕಥೆ ಹಾಗು ಇಂಪಾದ ಸಂಗೀತದಲ್ಲಿ,
ಮೈಕಂಪಿಸುವಂಥಾ ಭಯಂಕರ ಭೂತಗಳ ನಡುವೆ ಕುತೂಹಲವನ್ನು ಮತ್ತು ಚಿಪ್ಸ್ ಅನ್ನು ತಿನ್ನದೇ ಕೈಯಲ್ಲಿ ಹಿಡಿದು ನೋಡಬೇಕಾದಂಥ ಚಿತ್ರ ರಂಗೀತರಂಗ.
ನಿಜವಾಗಿಯೂ ಕನ್ನಡದ ಅಪರೂಪದ ಚಿತ್ರ, ತೆಲುಗು ತಮಿಳು ಚಿತ್ರಗಳನ್ನು ತಲೆಮೇಲೆ ಕೂರಿಸಿ ಕನ್ನಡ ಚಿತ್ರಗಳನ್ನು ಮೂಲೆಗುಂಪು ಮಾಡಿ ಬಾಹುಬಲಿಗಾಗಿ ಜೊಲ್ಲು ಸುರಿಸಿ ಕಾಯುತ್ತಿರುವ ನಿರಭಿಮಾನಿ ಪ್ರೇಕ್ಷಕರಿಗೆ ಇದು ಸವಾಲು. ನೀವು ನಿಜವಾಗಿಯು ಸದಭಿರುಚಿಯ ಚಿತ್ರ ಬಯಸುವವರೋ ಅಥವ ಕುರಿಗಳ ಹಾಗೆ , ಜನ ಮರಳೋ ಜಾತ್ರೆ ಮರಳೋ ಎಂಬಂತೆ ಒಂದರ ಬಾಲ ಇನ್ನೊಂದು ಹಿಡಿದು ಸಾಗುವವರೋ ನೀವೆ ನಿರ್ಧರಿಸಿ.
ಲೂಸಿಯ, ಉಳಿದವರು ಕಂಡಂತೆ, ಅಟ್ಟಹಾಸ ಈ ರೀತಿಯ ಚಿತ್ರಗಳ ಸಾಲಿಗೆ ಸೇರಿಸ ಬಹುದು.. ಇಷ್ಟೊಂದು ಖಾರವಾಗಿ ನುಡಿಯಲು ಕಾರಣ, ಈ ಚಿತ್ರದ ಹೆಸರೇ ಬಹಳ ಜನ ಕೇಳಿಲ್ಲವೆಂದು. ತೆಲುಗಿನ ರೀಮೇಕ್ ಚಿತ್ರ ರನ್ನವನ್ನು ಪ್ರೋತ್ಸಾಹಿಸುತ್ತಿರುವ ಜನರಿಗೆ ಇಂಥ ಚಿತ್ರಗಳು ಯಾಕೆ ಇಷ್ಟವಾಗುವುದಿಲ್ಲವೋ ನಾಕಾಣೆ.
ಚಿತ್ರದ ಒಂದು ಝಲಕ್ , ಈ ಹಾಡಿನ ಅರ್ಥ ಚಿತ್ರ ನೋಡಿದ ಮೇಲೆ ಹುಡುಕಿ.
ಕರೆಯೋಲೆ ಕರೆವಾಓಲೆ ಕರೆಮಾಡಿ ಕರೆದೋಳೆ
ಕರದಲ್ಲಿ ಕಲಮ ಹಿಡಿದು ಕರಿಶಾಹಿ ಬರೆದೋಳೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೋಳೆ
ಕನಕಾಂಗಿ ಕೈಯಲ್ಲೊಂದು ಕಂಚೀನ ಕೊಡಪಾನ
ಕೆರೆನೀರ ಕುಡಿಯೋದಕ್ಕು ಕಟುವಾದ ಕಡಿವಾಣ
ಕೆರೆದಂಡೆ ಕಡೆಯಲ್ಲು ಕುಂತವ್ನೆ ಕಡುಜಾಣ
ಅತಿಕ್ಷೀಣ ಸ್ಮೃತಿಯುಳ್ಳೋನ ಕೆಂದಾವರೆ ಲಕುಷಾಣ
ಕೆಂಪಾದ ಕಮಲ ಕಂಡು ಕೆಸರಲ್ಲಿ ಕಲೆತೋಳೆ
ಕ್ಷಣವೆಲ್ಲ ಕೃತಕ ಕಥೆಯಲಿ ಕಳೆಯೋದ ಕಲಿತೋಳೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೋಳೆ
‪#‎ನನಗನಿಸಿದ್ದು‬