Monday, November 2, 2015

ನಮ್ಮ ಕಾಲದಲ್ಲಿ ಹೀಗಿರಲಿಲ್ಲ‬..

http://ddnational.blogspot.in/sea…/label/Doordarshan%20Films
ಒಮ್ಮೆ ಇದಕ್ಕೆ ಬೇಟಿ ನೀಡಿ. ದೂರದರ್ಶನದಲ್ಲಿ ಬರುತ್ತಿದ್ದ ಕಾರ್ಯಕ್ರಮಗಳ ಸಂಗ್ರಹ.
ನೀಡಿದವರಲ್ಲಿ 90ರ ದಶಕದವರನ್ನು ಈ blog 15-20 ವರ್ಷ ಹಿಂದಕ್ಕೆ ಎಳೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವೇ ಇಲ್ಲ. ನಂತರದವರಿಗೆ ಹಿಂದಿನವರ ಅಭಿರುಚಿ ನಗೆ ತರಸುವುದರಲ್ಲಿ ಸಂದೇಹವಿಲ್ಲ.
ಸುಮಾರು 90ರ ದಶಕ. ಸಿದ್ಧಾರ್ಥ್ ಹಾಗು ರೇಣುಕಾ ಸಹಾನೆ ನಡೆಸಿ ಕೊಡುತ್ತಿದ್ದ ಸುರಭಿ - ಯಾರಿಗೆ ತಾನೆ ಆ ಕಾರ್ಯಕ್ರಮದ ಪ್ರಾರಂಭದಲ್ಲಿ ತೋರಿಸುತ್ತಿದ್ದ ಮಡಕೆ ಮಾಡುವುದು,ಅದರ ಒಳಗೆ ನಾವೇ ನುಸುಳುವ ಹಾಗೆ ಆಗುತ್ತಿದ್ದ ಅನುಭವ ಹಾಗು ವಿವಿಧ ಚಿತ್ರಗಳು, ವಸ್ತುಗಳು ಅದರೊಳಗೆ ಬರುವ ಹಾಗೆ ಮಾಡಿದ್ದ ಆ graphics ನೆನಪಾಗುವುದಿಲ್ಲ ಹೇಳಿ. ನಮ್ಮ ಪಾಲಿಗೆ ಅದು ಮಾಯೆಯೆ ಸರಿ, ಅದೊರೊಳಗೆ ಹೇಗೆ ಅವೆಲ್ಲಾ ಬಂದವು ಎಂಬುದು ನಮ್ಮೆಲ್ಲರ ಯಕ್ಷಪ್ರಶ್ನೆ. 93ರಲ್ಲಿ ಪ್ರಾರಂಭವಾಗಿತ್ತಂತೆ, ನನಗೆ ನೆನಪಿದ್ದಿದ್ದು 98-99ರದ್ದು. ಲಿಮ್ಕಾ ಪುಸ್ತಕದಲ್ಲಿ ಅತಿ ಹೆಚ್ಚು ವೀಕ್ಷಕರ ಪ್ರತಿಕ್ರಿಯೆ(ಸುಮಾರು ಒಂದು ವಾರಕ್ಕೆ 14ಲಕ್ಷ ಪತ್ರಗಳು) ಹೊಂದಿದ ಕಾರ್ಯಕ್ರಮವಂತೆ. ಅದನ್ನು ಪ್ರಾಯೋಜಿಸಿದ್ದು ಅಮೂಲ್.
https://www.youtube.com/watch?v=J1rNDOdFOYY
"ಅಮೂಲ್ ದಿ ಟೇಸ್ಟ್ ಆಫ್ ಈಂಡಿಯಾ", ದೇಶದ ಎಲ್ಲಾ ಸಂಸ್ಕೃತಿಯನ್ನು ತೋರಿಸುವ ಹಾಲಿನ ಉತ್ಪನ್ನಗಳ ಜಾಹಿರಾತು ನಮ್ಮೆಲ್ಲರ ಬಾಯಲ್ಲಿ ನೀರೂರಿಸುತ್ತಿದ್ದಾದರೂ ಆ ಕಾಲದಲ್ಲಿ ಅದು ಸ್ವಲ್ಪ ದುಬಾರಿಯೇ.
https://www.youtube.com/watch?v=mndv6gdZ7M0
ಇದೇ ತರ ಮತ್ತೊಂದು ಚಾಕ್ಲೇಟ್ ನೀರೂರಿಸಿದ್ದು ಎಂದರೆ cadbury dairy milk ಆಟಗಾರ six ಹೊಡೆದಾಗ ಮೈದಾನಕ್ಕಿಳಿದು ಬಂದು ಹುಡುಗಿ ವಿಚಿತ್ರವಾಗಿ ಕುಣಿಯುತ್ತಿದ್ದುದ್ದು, ತಾಯಿ ಕುಂಟಾಪಿಲ್ಲೆ ಆಡುತ್ತಿದ್ದುದ್ದು ಏನೋ ಅದರಲ್ಲಿ ನಿಜವಾಗಿಯೂ "ಕುಚ್ ಖಾಸ್ ಹೈ", ಈಗಿನ ಹಾಗೆ kiss me ಅಂತ ಬಾಯೆಲ್ಲ ಮೆತ್ತಿಕೊಂಡು, ರಾಡಿ ಮಾಡಿ ಅಸಹ್ಯವಾಗಿ ಬೆರಳನ್ನು ಚೀಪುತ್ತಿರಲಿಲ್ಲ, ತಿನ್ನುತ್ತಿರಲಿಲ್ಲ.
ಒಂದೇ ಚಾಕ್ಲೇಟ್ - ತಿನ್ನುವ ವಿಧಾನ ಮಾತ್ರ ಬೇರೆ, ಎಂತ ಬದಲಾವಣೆ ಅಲ್ವಾ.
https://www.youtube.com/watch?v=uuDKvYYMjsM
ಇನ್ನು cricket ಎಂದರೆ ನಮ್ಮೆಲ್ಲರ ಜೀವವೇ ಆಗಿತ್ತು, ಗುಂಗುರು ಕೂದಲಿನ ಸಚಿನ್ ವೇಷ ಧರಿಸಿ ಬಂದ ಶಾರುಖ್, ಸಚಿನ್ ಮುಖವಾಡ ಹಾಕಿಕೊಂಡು ಬಂದ ಹುಡುಗರು ಕೊನೆಗೆ ಹೇಳುತ್ತಿದ್ದ "ಯೆ ದಿಲ್ ಮಾಂಗೆ ಮೋರ್, ಆಹಾ". ಆಹಾ ಅದು cricket ದೇವರ ಬಾಲ್ಯ ಕೂಡ ಆಗಿತ್ತು. ದಿನಾ ಸಾಯುವವರಿಗೆ ಅಳುವರ್ಯಾರು ಎಂಬಂತೆ, ಪಂದ್ಯಗಳು ಹೆಚ್ಚಿ ಅದರ ವಿಶಿಷ್ಟತೆಯನ್ನೇ ಕಳೇದುಕೊಂಡಿದೆ.
https://www.youtube.com/watch…
ಹುಡುಗಿಗಾಗಿ ಹುಚ್ಚು ಹುಚ್ಚು stunts ಮಾಡುವ ಈಗಿನ ಗಾಡಿಗಳ ಜಾಹಿರಾತಿಗಿಂತ, ನಮ್ಮಲ್ಲಿ ದೇಶಪ್ರೇಮ ಹುಟ್ಟಿಸುತ್ತಿದ್ದ 'ಹಮಾರಾ ಬಜಾಜ್, ಬುಲಂದ್ ಭಾರತ ಕಿ ಬುಲಂದ್ ತಸ್ವೀರ್' ನಮ್ಮೆಲ್ಲರನ್ನು ಹೆಚ್ಚು ಹಿಡಿದಿಟ್ಟುಕೊಂಡಿತ್ತು. ಈಗ en-field bike ತೆಗೆದುಕೊಂಡವರಿಗಿಂತ ಹೆಚ್ಚು ಜನರಲ್ಲಿ ಸಂತೋಷ ಹಾಗು ಪ್ರೀತಿ ಹುಟ್ಟಿಸಿತ್ತು. ಮತ್ತೆ ಬಂದಂತಿದೆ ವೆಸ್ಪಾ ಗಾಡಿಗಳು.
https://www.youtube.com/watch?v=scltYH13uEY
ಕೋಡು ಬೆಳಸಿಕೊಂಡ ಬೋಡ, ಯಾರಿರಬಹುದು ನೆನಪಿಸಿಕೊಳ್ಳಲು ಸಾಧ್ಯವಾ? ಪಕ್ಕದ ಮನೆಯಲ್ಲಿ ಅಸೂಯೆ ಹುಟ್ಟಿಸಿ, ನಮ್ಮ ಮನೆಯಲ್ಲಿ ಹೆಮ್ಮೆ ತರುಸುತ್ತಿದ್ದ ಆ ಬೋಡ.
ಹೌದು ಅವನೇ ONIDA devil ಬೋಡ.
https://www.youtube.com/watch?v=_tishLr19-c
ದೊಡ್ಡವರಿಗೆಲ್ಲ ಮುಖೇಶ್ ಖನ್ನ ಭೀಷ್ಮನಾಗಿದ್ದರೆ ನಮಗೆ ಅವನು ಶಕ್ತಿಮಾನ್. ಶನಿವಾರ ಮಧ್ಯಾನ ರಜೆಯಲ್ಲಿ ಬಂದು ನೋಡಿದರೆ ಮಾತ್ರ ಶನಿವಾರದ ರಜೆ ಸಂಪೂರ್ಣ, ಅದರಂತೆ ಮನೆಯಲ್ಲೆಲ್ಲಾ ಗಿರ್ರ್ರ್ರ್ರನೆ ತಿರುಗಿಯೇ ಓಡಾಡುತ್ತಿದ್ದೆವು, ಬಡಸಿಕೊಂಡ ಉದಾಹರಣೆಯೂ ಇದೆ. ಮೇಲಿಂದ ಬಿದ್ದರೆ ಶಕ್ತಿಮಾನ್ ಬಂದು ಕಾಪಾಡುತ್ತಾನೆ ಎಂದೇ ನಂಬಿದ್ದೆವು.
https://www.youtube.com/watch?v=2HWv63p1ndg
ಅಲಿಫ್ ಲೈಲಾ ಅಲಿಫ್ ಲೈಲಾ ಎಂದು ಪ್ರಾರಂಭವಾಗುತ್ತಿದ್ದ ಧಾರವಾಹಿ ನಮ್ಮೆಲ್ಲರ ಅಜ್ಜಿಯೇ ಆಗಿತ್ತು, ಅರೇಬಿಯನ್ ನೈಟ್ಸ್ ಆಧಾರಿತ ಆ ಧಾರವಾಹಿಯಲ್ಲಿನ ಜಾದು ನಮ್ಮೆಲ್ಲರ ಬಾಯಿ ಮುಚ್ಚಿಸುತ್ತಿರಲಿಲ್ಲ, ಎರಡು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಕಾಲ, ಆಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ತಾಂತ್ರಿಕ ವಿಷಯಗಳಲ್ಲಿ ಮೂಡಿಬಂದ ಜಾದುವಿನ ಚಮತ್ಕಾರಗಳು, ಬಾಹುಬಲಿಯಲ್ಲಿ ಅದರ ಅರ್ಧದಷ್ಟು ಮೂಡಿಬಂದಿಲ್ಲ.
https://www.youtube.com/watch?v=hxVWPFIjZLE
ಇನ್ನೂ ಬಹಳಷ್ಟು ಇವೆ, ಇಲ್ಲಿ ಕೆಲವನ್ನು ಮಾತ್ರ ಸೇರಿಸಿದ್ದೇನೆ. ಒಟ್ಟಾರೆ ಹೇಳುವುದಾದರೆ, ಆಗಿನ ಜಾಹಿರಾತುಗಳು ಜನಗಳ ನಡುವೆ ಪ್ರೀತಿ, ಬಾಂದವ್ಯ ಹೆಚ್ಚಿಸುತ್ತಿದ್ದವುಗಳಾಗಿದ್ದವು. ದೇಶಪ್ರೇಮ, ದೇಶದ ಸಂಸ್ಕೃತಿಗಳನ್ನು ಬಿಂಬಿಸುತ್ತಿದ್ದವು ಹಾಗು ಯಾವುದೇ ರೀತಿಯ ಅಶ್ಲೀಲತೆ ಇರುತ್ತಿರಲಿಲ್ಲ.
ಏನೇ ಹೇಳಿ ಅವರವರಿಗೆ ಅವರ ಬಾಲ್ಯದ ದಿನಗಳೇ ಇಷ್ಟವಾಗುತ್ತದೆ. ನಮ್ಮ ಅಪ್ಪ ಅಮ್ಮ ಹೀಗೆ ರೇಡಿಯೋ ಬಂದ ಕಥೆ, ಮೊದಲು ಟೀವಿ ನೋಡಿದ ಕಥೆ ಹೇಳಿದರೆ, ನಾವು ನಮ್ಮ ಮುಂದಿನ ಪೀಳಿಗೆ ನಮ್ಮ ಈರೀತಿಯ ಕಥೆ ಹೇಳಿ, ಇವಾಗ ಸರಿಯಿಲ್ಲ, ಕಾಲ ಬದಲಾಗಿದೆ ಎಂದು ಹೇಳುತ್ತೇವೆ. ಹಾಗಾಗಿ, ನಮ್ಮ ಆ ಸಿಹಿ ನೆನಪುಗಳನ್ನು ನೆನೆದು rewind ಮಾಡಿಕೊಳ್ಳೋಣ, ‪#‎ನನಗನಿಸಿದ್ದು‬ ಇಲ್ಲಿ ಹೇಳಿದ್ದೇನೆ. Rewind ಎನ್ನುವ ಪದ ಕೂಡ tape recorder ಗೊತ್ತಿರುವವರಿಗೆ ಮತ್ತೊಂದನ್ನು ನೆನಪು ಮಾಡುತ್ತದೆ, Reynolds pen ಲಿ ಕ್ಯಾಸೆಟ್ ನಲ್ಲಿ ಹಾಕಿ ತಿರುಗಿಸುತ್ತಿದ್ದುದ್ದು. ಇರಲಿ, ಒಂದು ಸರ್ವೇ ಸಾಮಾನ್ಯ,
ನಾವು ಕೇಳಿದ ವೇದಾಂತಗಳನ್ನೇ ಮುಂದೆ ನಾವು ಹೇಳುತ್ತೇವೆ. "ನಮ್ಮ ಕಾಲದಲ್ಲಿ ಹೀಗಿರಲಿಲ್ಲ"
परिवर्तनमेव स्थिरमस्ति
Time is in essence nothing but change. And change is the only constant out there.

No comments:

Post a Comment