Friday, November 20, 2015

11 ಮೇ 1998 ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕು ಭಾರತದ ಶತ್ರುಗಳಿಗೆಲ್ಲ ಅಂದು ಶತ್ರುವಾದ ದಿನ

1974ರಲ್ಲಿ ಇಂದಿರಾ ಗಾಂಧಿಯ ಆಡಳಿತದಲ್ಲಿ ಪರೀಕ್ಷೆ ನಡೆದಿತ್ತಾದರೂ ಇಂದಿರಾ ಗಾಂಧಿಯವರಿಗೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಜಗತ್ತು ಬಲಾಡ್ಯವಾಗುತ್ತಿದ್ದಾಗ ನಾವು ಕೈ ಕಟ್ಟಿ ಶಾಂತಿ ಮಂತ್ರ ಪಟಿಸುವುದರಲ್ಲಿ ಅರ್ಥವಿರಲಿಲ್ಲ. ನಾವಾಗೇ ಮೇಲೆರಗುವುದಿರಲಿ, ಮೇಲೆ ಬಂದವರನ್ನೂ ಕೂಡ ಶಾಂತಿ ಮಾತುಕತೆಯಲ್ಲಿ ಬಗೆಹರಸಿಕೊಳ್ಳಲು ಮೊದಲು ಪ್ರಯತ್ನಿಸಿ, ಒಪ್ಪದಿದ್ದಲ್ಲಿ ಶಿಕ್ಷೆ ಅನಿವಾರ್ಯ ಎಂಬುದನ್ನು ಕೃಷ್ಣ ಮಹಾಭಾರತದಲ್ಲಿ ಹಲವು ಕಡೆ ತೋರಿಸಿಕೊಟ್ಟಿದ್ದಾನೆ. ಅದಕ್ಕಾದರೂ ನಾವು ಸಿದ್ಧರಿರಬೇಕಲ್ಲವೇ. ಇರಲಿ, ಆದರೆ ಎರಡನೇ ಬಾರಿ ಪೋಕ್ರಾನಲ್ಲಿ ಅಣು ಬಾಂಬ್ ಸಿಡಿಸಿದ್ದು ನಿಜಕ್ಕೂ ಭಾರತ ತನ್ನ ಶಕ್ತಿಯನ್ನು ಹಾಗು ಗೌಪ್ಯವಾಗಿ ಪರೀಕ್ಷೆ ನಡೆಸಿ ಯುಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದು ವಾಜಪೇಯಿ. ವೈಜ್ನಾನಿಕ ಕ್ಷೇತ್ರದಲ್ಲಿ ಹೋಮಿ ಜಹಂಗೀರ್ ಬಾಬ, ವಿಕ್ರಮ್ ಸಾರಭಾಯ್ ಹಾಗು ಅಬ್ದುಲ್ ಕಲಾಮ್ ಅವರ ಕೊಡುಗೆ ಅಪಾರ. ಎಷ್ಟೋ ಪ್ರದಾನಿಗಳು ಬಂದರೂ ಹೋದರೂ ಆದರೆ ಪರೀಕ್ಷೆ ನಡೆಸಲು ಮುಂದಾಗಲಿಲ್ಲ, ಕಾರಣ ಇಷ್ಟೆ ತಮ್ಮ ಅಧಿಕಾರ. ಆದರೆ ಅಟಲ್ ಜಿ ನಿಜಕ್ಕೂ ಯಾವುದೋ ಇಂಗ್ಲೀಷ್ ಚಲನಚಿತ್ರದಂತೆ ತಂತ್ರ ರೂಪಿಸಿ ಗೌಪ್ಯವಾಗಿ ಭಾರತದ ಶಕ್ತಿ ಜಗಜ್ಜಾಹಿರ ಮಾಡಿದರು. 11 ಮೇ 1998ರಂದು ವಾಜಪೇಯಿ ಮಾಧ್ಯಮದೋರಿಗೆ ವಿಷಯ ತಿಳಿಸಿದಾಗ ವಿಶ್ವ ಭಾರತದ ಕಡೆ ತೆರೆದ ಬಾಯಿಯಲ್ಲಿ ನೋಡಿತ್ತು. ಅಮೇರಿಕಾದ ಬಲಾಢ್ಯ ಸೆಟಲೈಟ್ಸ್ ಗಳ ಕಣ್ಣಿಗೆ ಕಾಣದೇ ಉಡಾಯಿಸಿದ್ದರು.
ನಿಜಕ್ಕೂ ಅದು ಒಂದು ಮೈಲಿಗಲ್ಲು. ಅದಾದ ನಂತರ ಮತ್ತೆ ಕಳೆದ ಒಂದು ವರ್ಷದಿಂದ ವಿಶ್ವ ನಮ್ಮ ಕಡೆ ನೋಡುತ್ತಿದೆ. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕೆ ಹಲವು ದೇಶಗಳು ನಮ್ಮ ಪರ ನಿಲ್ಲುತ್ತಿವೆ. ಈ ಮಧ್ಯದ ಅವದಿಯಲ್ಲಿ ಭಾರತ ಎಲ್ಲಿ ಅಡಗಿತ್ತೋ ಗೊತ್ತಿಲ್ಲ.
ಚಕ್ರವರ್ತಿ ಸೂಲಿಬೆಲೆಯವರೂ ಕೂಡ ಇದರ ಬಗ್ಗೆ ಬರೆದಿದ್ದರು. ಆದರೆ ನಾನು ರಷ್ಯಾದ ಅಧ್ಯಕ್ಷ ಪುಟಿನ್ ಸಿರಿಯಾದ ಮೇಲೆ ನಡೆಸುತ್ತಿರುವ ದಾಳಿಯ ವೀಡಿಯೋಗಳನ್ನು ನೋಡಿದಾಗ, ನಮ್ಮ ಭಾರತ ಎಷ್ಟರ ಮಟ್ಟಿಗೆ ತಯಾರಿದೆ ಎಂದು ಹುಡುಕುತ್ತಿದ್ದೆ. ಆಗ ಸಿಕ್ಕ ಈ ವೀಡಿಯೋ ನಿಜಕ್ಕೂ ನನ್ನ ಮೈ ನವಿರೇರಿಸಿತು. ವೀಡಿಯೋ ಜೊತೆ #ನನಗನಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
https://www.youtube.com/watch?v=DjrKX1EJGW8

No comments:

Post a Comment