Wednesday, November 25, 2015

ನನ್ನ ಭಾರತ ನನ್ನ ಹೆಮ್ಮೆ

ನನ್ನ ಭಾರತ ಸುರಕ್ಷಿತವಾಗಿದೆ, ನನ್ನ ಭಾರತ ಸಹಿಷ್ಣು, ನನ್ನ ಭಾರತ ಸುಂದರ, ನನ್ನ ಭಾರತ ಶ್ರೀಮಂತ, ನನ್ನ ಭಾರತ ವಿಶ್ವಗುರು, ನನ್ನ ಭಾರತ ಜಗತ್ತಿಗೆ ಮಾದರಿ.
ಈತರ ಹೇಳಿ ಜಗತ್ತಿಗೆ ನಮ್ಮ ಮೇಲೆ ನಂಬಿಕೆ ಬರೋ ಹಾಗೆ ಮಾಡ್ಬೇಕ್ರಯ್ಯಾ, 4 ಜನಕ್ಕೆ, 4 ದೇಶ, 4 ಭಾಷೆ ಗೊತ್ತಿರೋರು.
ಭಾರತ ತುಂಬಾ ಕೊಲೆ ನಡಿತಾ ಇದಾವೆ, ಕೆಟ್ಟ ಚರಂಡಿ, ದಟ್ಟ ದರಿದ್ರ, ನಮ್ಮನ್ನ ಮಾತ್ರ ನೋಡಬೇಡಿ, ನಮ್ಮಲ್ಲಿ ಕಲಿಯೋದು ಏನು ಇಲ್ಲ.
ಈತರ ಹೇಳಿ,India is my country, I love it, I feel fortunate for being born here ಅಂದ್ರೆ ಏನು ಅರ್ಥ? ಅಂದ್ರೆ ವಿರೋಧಾಭಾಸ ಆಗೊಲ್ವೇ? ಈತರ ಹೇಳಿ TV program ಮಾಡಿ ದುಡ್ಡು ಮಾಡಿಕೊಳ್ಳೋದಲ್ಲ. ನನ್ನ ದೇಶದ positives ಹೇಳಿ, ಹೆಮ್ಮೆ ಇಂದ ಬೀಗೋ ಹಾಗೆ ಮಾಡಿ.‪#‎JaagoBharath‬ ತರ ದೇಶವನ್ನು ಒಳ್ಳೆ ರೀತಿಯಲ್ಲಿ ಬಿತ್ತರಿಸಿ. ಈ ದೇಶಕ್ಕೆ ಎಷ್ಟು ಜನ ಪ್ರಾಣ ತೆತ್ತಿದಾರೆ, ಋಷಿಮುನಿಗಳ ಕರ್ಮ ಭೂಮಿ, ವಿಜ್ಞಾನದ ಎಷ್ಟೋ ಆವಿಷ್ಕಾರಗಳು ಮೊದಲು ನನ್ನ ದೇಶದಲ್ಲೇ ಆಗಿದ್ದು, ತತ್ವ ಜ್ಞಾನಿಗಳು ತಮ್ಮ ಅಪಾರ ಜ್ಞಾನದಿಂದ ಈ ದೇಶಕ್ಕೆ ಬಲಿಷ್ಟ ಸಿದ್ಧಾಂತದ ತಳಪಾಯ ಹಾಕಿದಾರೆ. ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ, ಅವುಗಳನ್ನೇ ಮುಂದು ಮಾಡಿತೋರಿಸೋ ಕೆಟ್ಟ ಮನಸ್ಸು ಯಾರಿಗ್ರಯ್ಯಾ ಬೇಕು? ಅಹಿಂಸೋ ಪರಮೋ ಧರ್ಮ, ವಸುದೈವ ಕುಟುಂಬಕಂ, ಸರ್ವೇ ಜನೋ ಸುಖಿನೋ ಭವಂತು, ಕಾಯಕವೇ ಕೈಲಾಸ, ಸತ್ಯಮೇವ ಜಯತೆ ಇವೆಲ್ಲಾ ಸ್ವಾಮಿ ನನ್ನ ದೇಶದಲ್ಲಿರೋ ಗಾಳಿ, ಮಣ್ಣು, ನೀರಲ್ಲಿ ಇದೆ. ISISಲಿ ಇರುವ ಭಾರತದ ಉಗ್ರರು ಅಶಕ್ತರಂತೆ ಉಗ್ರವಾದಕ್ಕೆ. ಯಾಕಂದ್ರೆ ಅವ್ರು ಇಲ್ಲಿ ಮಣ್ಣು, ನೀರು, ಗಾಳಿ ಜೊತೆ ಬೆಳೆದೋರು. ನಾವು ಕೆಟ್ಟ ಕೆಲಸ ಮಾಡ್ತೀವಿ ಅಂದ್ರು ಸರಿ ಮಾಡೋಕೆ ಬರೊಲ್ಲಾ ಸ್ವಾಮೀ.


ನನ್ನ ಭಾರತ ಬಗ್ಗೆ ಒಳ್ಳೆದೆಲ್ಲಾ ಹೇಳಿದ್ದು ಸುಳ್ಳು ಅನ್ನೋರು google ಅಂತ ಒಂದು ಇದೆ, ಅಲ್ಲಿ ನಿಮಗೆ ಬೇಕಾದ statistics ಸಿಗೊತ್ತೆ, ಓದಿ, ಓದಿದ ಮೇಲೂ, ಭಾರತ ಕೆಟ್ಟೋಗಿದೆ ಅನ್ನೋರು ಒಣ ಹಾಕಿರೋ ## pack ಮಾಡ್ಕೋಂಡು ಹೋಗಿ, ನನ್ ಮಕ್ಳಾ...
ಧನ್ಯವಾದಗಳು.
‪#‎ನನಗನಿಸಿದ್ದು‬ ಏನ್ ಗೊತ್ತಾ..
‪#‎IndiaIsTolerant‬
‪#‎IndiaIsSafe‬
‪#‎IndiaIsGreat‬

Saturday, November 21, 2015

ಗಣಿತ ನಿಜವಾಗಿಯೂ ಒಂದು ವಿಷಯವಲ್ಲ, ಅದು ಒಂದು ಭಾಷೆ

ಬಹಳಷ್ಟು ಗಣಿತಜ್ಞರು ಗಣಿತದ ಸೌಂದರ್ಯವನ್ನು ಕಂಡಿದ್ದು ಗಣಿತದಲ್ಲಿ ಅಲ್ಲ ಬೇರೆಯದರಲ್ಲಿ. ಹೇಗೆ ತಾಯಿ ತನ್ನ ಮಕ್ಕಳಲ್ಲಿ ಸಂತೋಷ ಕಾಣುತ್ತಾಳೆಯೋ. ಗುರು ವಿಧ್ಯಾರ್ಥಿಗಳ ಯಶಸ್ಸಿನಲ್ಲಿ ಸಂತೋಷ ನೋಡುತ್ತಾರೋ ಹಾಗೆ. ಹಾಗಾಗೇ ಗಣಿತವನ್ನು ವಿಜ್ಞಾನದ ತಾಯಿ ಎಂದು ಹೋಲಿಸಿದ್ದು. Maths is mother of all sciences. ಹೌದು, ಗಣಿತದ ಸೌಂದರ್ಯ ಇರುವುದು ಗಣಿತದಲ್ಲಿ ಅಲ್ಲ ಬೇರೆಯದರಲ್ಲಿ. ಶುದ್ಧ ಗಣಿತ ನಿಜವಾಗಿಯೂ ಭಯಂಕರವಾಗಿರುತ್ತದೆ. ಅರ್ಥ ಮಾಡಿಕೊಳ್ಳಲು ಬಲು ಕಠಿಣ. ನಿಮ್ಮ ಕೈಯಲ್ಲಿರುವ ಬೆರಳುಗಳನ್ನು ಎಣಿಸಿ ಎಂದಾಕ್ಷಣ ಸುಲಭವಾಗಿ ಏಣಿಸುತ್ತೀರಲ್ಲವೇ? ಆದರೆ ಅದರ ಹಿಂದೆ ಒಂದು ದೊಡ್ಡ ಗಣಿತದ ಸಿದ್ದಾಂತವಿದೆ (countable things, which means things that can be bijectively mapped into natural numbers). ಗಣಿತ ನಮಗಾಗಿ ಬೆರಳೆಣಿಕೆಯ ಹಾಗೆ ಸುಲಭವನ್ನಾಗಿ ಮಾಡಿಯೂ ಕೂಡ ಕೊಡುತ್ತದೆ. ಹಾಗಾಗೆ ನಾನು ಹೇಳಿದ್ದು ಗಣಿತದ ಸಂದರ್ಯ ಗಣಿತದಲ್ಲಿ ಇಲ್ಲ ಎಂದು.
ವಿಜ್ಞಾನದ ಇತಿಹಾಸ ನೋಡೋಣ, ಸೌರಮಂಡಲದ ಪರಿಕಲ್ಪನೆ ಕೊಟ್ಟ ನಿಕೋಲಸ್ ಕೋಪರ್ನಿಕಸ್(Nicolaus Copernicus)ಗೆ ಪ್ರೇರಣೆ ಒಬ್ಬ ಜರ್ಮನಿಯ ಗಣಿತಜ್ಞ ಜೊಹಾನಸ್ ಕೆಪ್ಲರ್(Johannes Kepler). ಕೆಪ್ಲರ್ ಗಣಿತವನ್ನು ಉಪಯೋಗಿಸಿ ಗ್ರಹಗಳ ಚಲನೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಒಂದು ಸಮೀಕರಣದಲ್ಲಿ(equation) ಅಡಗಿಸಿಟ್ಟಿದ್ದ. ಸಮೀಕರಣ ತಯಾರಿಸಲು 200-300ಪುಟಗಳಷ್ಟು ಲೆಕ್ಕವನ್ನು 70 ಬಾರಿ ಮಾಡಿದ್ದನೆಂದರೆ ಗಣಿತದ ಸೌಂದರ್ಯ ಎಲ್ಲಿದೆ ಎಂದು ನೀವೇ ಊಹಿಸಿ.
ಗೆಲೆಲಿಯೋ ಗೆಲೆಲಿ ಯಾರಿಗೆ ತಾನೆ ತಿಳಿದಿರುವುದಿಲ್ಲ? ಭೂತಕನ್ನಡಿ ಎಂದ ಮಕ್ಕಳಿಗೆಲ್ಲಾ ಈತ ಗೊತ್ತು. ದೂರದರ್ಶಕ(Telescope) ಕಂಡು ಹಿಡಿದದ್ದು ಗೆಲೆಲಿ ಆದರೆ ಇಲ್ಲಿ ಗಮನಿಸಬೇಕಾದದ್ದು ಆತ ಒಬ್ಬ ಗಣಿತಜ್ಞನೆಂದು, ಆತನೂ ಒಂದು ಸಮೀಕರಣ ನಿರ್ಮಿಸಿ, ದೂರದರ್ಶಕದ ಸಮರ್ಥ ಉಪಯೋಗವನ್ನು ಅದರಲ್ಲಿ ಹುದುಕಿಸಿಟ್ಟ. ಸೌಂದರ್ಯ ಸಮೀಕರಣಕ್ಕಿಂತ ದೂರದರ್ಶಕದಲ್ಲೇ ಹೆಚ್ಚು ಅಲ್ಲವೇ?
ಕಾಸ್ಮೋಸ್, ಗುರುತ್ವಾಕರ್ಷಣೆ ಎಂದು ವಿಶ್ವದ ಪರಿಕಲ್ಪನೆಗೆ ಒಂದು ದ್ರುಡವಾದ ರೂಪ ಕೊಟ್ಟ ಐಸಾಕ್ ನ್ಯೂಟನ್ ಒಬ್ಬ ಗಣಿತಜ್ಞ. ಸೌಂದರ್ಯ ಹಣ್ಣು ಮರದಿಂದ ಬೀಳುವುದರಲ್ಲಿ ಇದೆಯೇ ಹೊರೆತು ಉಫ್...!!! gravity equationಲಿ ಇಲ್ಲ.
ಮಂದಗತಿಯಲ್ಲಿ ಓಡುತ್ತಿದ್ದ ಭೂಮಿಯನ್ನು ವೇಗವಾಗಿ ಓಡಿಸಿದ್ದು ಇವಾಗಿನ fast world ಗೆ ಕಾರಣ ಯಾವುದಿರಬಹುದು? ಪವನ ಶಕ್ತಿ ಉಪಯೋಗಿಸಿ ಚಲಿಸುವ ವಿಂಡ್ಮಿಲ್. ಹೌದು ಪವನ ಚಾಲಿತ ಯಂತ್ರಗಳು ಕೈಗಾರಿಕಾ ವಲಯದಲ್ಲಿ ಒಂದು ಕ್ರಾಂತಿಯನ್ನು ಮಾಡಿತು ಎಂದರೆ ತಪ್ಪಾಗಲಾಗದು. ಆದರೆ ಅದರ ವಿನ್ಯಾಸ ಮಾಡಿದ್ದು ಒಬ್ಬ ಗಣಿತಜ್ಞ ಸೈಮನ್ ಸ್ಟೀವನ್(Simon Stevin). ಸ್ಟೀವನ್ ನೀರನ್ನು ಎತ್ತಲು ಮಾತ್ರ ಉಪಯೋಗಿಸುತ್ತಿದ್ದ ವಿಂಡ್ಮಿಲ್ ಗಳನ್ನು ಗಣಿತದ ಸಮೀಕರಣದಲ್ಲಿ ಹಾಕಿ ರುಬ್ಬಿ ಅದರಿಂದ ಹೆಚ್ಚು ವೇಗ ತೆಗೆದು ಕೈಗಾರಿಕಾವಲಯದ ಉತ್ಪಾದನೆಯ ವೇಗ ಹೆಚ್ಚಾಗುವಂತೆ ಮಾಡಿದ. ಆ ಸಮೀಕರಣಕ್ಕಿಂತ ವಿಂಡ್ಮಿಲ್ ನೋಡಲು ಸುಂದರ ಅಲ್ಲವೇ?
ಆಕಾಶವನ್ನು ನೋಡುತ್ತಾ ಕೇಳಿಕೊಂಡ What is out there? ಎಂಬ ಪ್ರಶ್ನೆ ಮನುಷ್ಯನನ್ನು ಸೌರಮಂಡಲಕ್ಕೆ ಕರೆದುಕೊಂಡು ಹೋಗಿತು. ಸಮೀಕರಣಗಳಲ್ಲಿ ವಿಶ್ವವನ್ನು ಹುದುಕಿಸಿಟ್ಟ ನಂತರ ಹುಡುಕಾಟ ತನ್ನಲ್ಲೇ ಶುರುವಾಯಿತು. What is the world made of? ಅದಕ್ಕೂ ಉತ್ತರ ಸಮೀಕರಣದಲ್ಲೇ ಸಿಕ್ಕಿತೆಂದರೆ ಗಣಿತ ತಾಯಿಯಲ್ಲದೇ ಮತ್ತೇನು. ಹೌದು, ಇಟಲಿಯ ಗಣಿತಜ್ಞ ಬೊರೆಲ್ಲಿ(Giovanni Borelli) ಮನುಷ್ಯನ ಕೈ ಕಾಲುಗಳ ಚಲನೆಯ ಹಿಂದೆ ಅಡಗಿರುವ ಯಾಂತ್ರಿಕ ಕಲ್ಪನೆಯನ್ನು ತನ್ನ ಸಮೀಕರಣದಿಂದ ವಿವರಿಸುತ್ತಾನೆ. 
ನಾವೆಲ್ಲ ಉಪಯೋಗಿಸುವ computer ಬಹಳಷ್ಟು ಸುಂದರವಾಗಿದೆಯಲ್ಲವೇ? ಆದರೆ ಆ ಸೌಂದರ್ಯ, ಹಿಂದೆ ಇರುವ ಗಣಿತದಿಂದ ಬಂದಿದ್ದು, ಹಾಗು ಅದನ್ನು ಸೃಷ್ಟಿಸಿದ್ದು ಒಬ್ಬ ಗಣಿತಜ್ಞ ಚಾರ್ಲ್ಸ್ ಬ್ಯಾಬೇಜ್(Charles Babbage).


ಒಟ್ಟಾರೆ ‪#‎ನನಗನಿಸಿದ್ದು‬ ಏನೆಂದರೆ, ಗಣಿತ ನಿಜವಾಗಿಯೂ ಒಂದು ವಿಷಯವಲ್ಲ, ಅದು ಒಂದು ಭಾಷೆ, ಅದರಲ್ಲಿಯೇ ವಿಜ್ಞಾನ ಬರೆದಿರುವುದು. ಪ್ರಕೃತಿಯ ಯಾವುದೇ ಕ್ರಿಯೆ, ವಸ್ತುವನ್ನು ವಿವರಿಸಲು ಉಪಯೋಗಿಸುವ ಭಾಷೆ ಗಣಿತ. ಹಾಗಾಗಿಯೇ ಇನ್ನೂ ಅನೇಕ ಗಣಿತಜ್ಞರು ತಮ್ಮನ್ನು ಬೇರೆಯದರಲ್ಲೇ ಗುರುತಿಸಿಕೊಳ್ಳುತ್ತಾರೆ. ಶುದ್ಧ ಗಣಿತ ಒಂದು ಕಠಿಣ ಕಾವ್ಯ, ಕೆಲವೇ ಕೆಲವು ಜನರು ಅದನ್ನು ಮೆಚ್ಚಬಹುದು. ಆದರೆ ಎಲ್ಲರೂ ಗಣಿತದ ಸೌಂದರ್ಯವನ್ನು ಸವಿಯಬೇಕಾದರೆ ಗಣಿತದಲ್ಲಿ ಬಿಟ್ಟು ಬೇರೆಯದರಲ್ಲಿ ಗಣಿತವನ್ನು ಹುಡುಕಿದಾಗ ಮಾತ್ರ ಕಾಣಸಿಗುತ್ತದೆ.
ಬಹಳ ದಿನದ ನಂತರ ಗಣಿತದ ಬಗ್ಗೆ ಬರೆಯಲು ಮನಸ್ಸಾಗಿದ್ದು, ಮೋದಿಜಿ ಜಗತ್ತಿಗೆ ಪರಿಚಯಿಸಿಕೊಟ್ಟ ರಾಜಸ್ತಾನದ ಇಮ್ರಾನ್ ಖಾನ್ ಎಂಬ ಗಣಿತ ಶಿಕ್ಷಕ 52 ಮೊಬೈಲ್ ಆಪ್ ಗಳನ್ನು ನಿರ್ಮಿಸಿದ್ದನ್ನು ಕೇಳಿ. ಇತ್ತೀಚೆಗೆ ಗಣಿತವನ್ನು ಇಷ್ಟಪಡುವವರು ಅದೇಕೋ programming ಅಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ, ನನ್ನನ್ನೂ ಸೇರಿ. ಏಕಿರಬಹುದೆಂದು ಯೋಚಿಸಿದಾಗೀ ಮೇಲಿನ ವಿಷಯ ತಲೆಯಲ್ಲಿ ಹೊಳೆಯಿತು, ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

Friday, November 20, 2015

11 ಮೇ 1998 ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕು ಭಾರತದ ಶತ್ರುಗಳಿಗೆಲ್ಲ ಅಂದು ಶತ್ರುವಾದ ದಿನ

1974ರಲ್ಲಿ ಇಂದಿರಾ ಗಾಂಧಿಯ ಆಡಳಿತದಲ್ಲಿ ಪರೀಕ್ಷೆ ನಡೆದಿತ್ತಾದರೂ ಇಂದಿರಾ ಗಾಂಧಿಯವರಿಗೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಜಗತ್ತು ಬಲಾಡ್ಯವಾಗುತ್ತಿದ್ದಾಗ ನಾವು ಕೈ ಕಟ್ಟಿ ಶಾಂತಿ ಮಂತ್ರ ಪಟಿಸುವುದರಲ್ಲಿ ಅರ್ಥವಿರಲಿಲ್ಲ. ನಾವಾಗೇ ಮೇಲೆರಗುವುದಿರಲಿ, ಮೇಲೆ ಬಂದವರನ್ನೂ ಕೂಡ ಶಾಂತಿ ಮಾತುಕತೆಯಲ್ಲಿ ಬಗೆಹರಸಿಕೊಳ್ಳಲು ಮೊದಲು ಪ್ರಯತ್ನಿಸಿ, ಒಪ್ಪದಿದ್ದಲ್ಲಿ ಶಿಕ್ಷೆ ಅನಿವಾರ್ಯ ಎಂಬುದನ್ನು ಕೃಷ್ಣ ಮಹಾಭಾರತದಲ್ಲಿ ಹಲವು ಕಡೆ ತೋರಿಸಿಕೊಟ್ಟಿದ್ದಾನೆ. ಅದಕ್ಕಾದರೂ ನಾವು ಸಿದ್ಧರಿರಬೇಕಲ್ಲವೇ. ಇರಲಿ, ಆದರೆ ಎರಡನೇ ಬಾರಿ ಪೋಕ್ರಾನಲ್ಲಿ ಅಣು ಬಾಂಬ್ ಸಿಡಿಸಿದ್ದು ನಿಜಕ್ಕೂ ಭಾರತ ತನ್ನ ಶಕ್ತಿಯನ್ನು ಹಾಗು ಗೌಪ್ಯವಾಗಿ ಪರೀಕ್ಷೆ ನಡೆಸಿ ಯುಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದು ವಾಜಪೇಯಿ. ವೈಜ್ನಾನಿಕ ಕ್ಷೇತ್ರದಲ್ಲಿ ಹೋಮಿ ಜಹಂಗೀರ್ ಬಾಬ, ವಿಕ್ರಮ್ ಸಾರಭಾಯ್ ಹಾಗು ಅಬ್ದುಲ್ ಕಲಾಮ್ ಅವರ ಕೊಡುಗೆ ಅಪಾರ. ಎಷ್ಟೋ ಪ್ರದಾನಿಗಳು ಬಂದರೂ ಹೋದರೂ ಆದರೆ ಪರೀಕ್ಷೆ ನಡೆಸಲು ಮುಂದಾಗಲಿಲ್ಲ, ಕಾರಣ ಇಷ್ಟೆ ತಮ್ಮ ಅಧಿಕಾರ. ಆದರೆ ಅಟಲ್ ಜಿ ನಿಜಕ್ಕೂ ಯಾವುದೋ ಇಂಗ್ಲೀಷ್ ಚಲನಚಿತ್ರದಂತೆ ತಂತ್ರ ರೂಪಿಸಿ ಗೌಪ್ಯವಾಗಿ ಭಾರತದ ಶಕ್ತಿ ಜಗಜ್ಜಾಹಿರ ಮಾಡಿದರು. 11 ಮೇ 1998ರಂದು ವಾಜಪೇಯಿ ಮಾಧ್ಯಮದೋರಿಗೆ ವಿಷಯ ತಿಳಿಸಿದಾಗ ವಿಶ್ವ ಭಾರತದ ಕಡೆ ತೆರೆದ ಬಾಯಿಯಲ್ಲಿ ನೋಡಿತ್ತು. ಅಮೇರಿಕಾದ ಬಲಾಢ್ಯ ಸೆಟಲೈಟ್ಸ್ ಗಳ ಕಣ್ಣಿಗೆ ಕಾಣದೇ ಉಡಾಯಿಸಿದ್ದರು.
ನಿಜಕ್ಕೂ ಅದು ಒಂದು ಮೈಲಿಗಲ್ಲು. ಅದಾದ ನಂತರ ಮತ್ತೆ ಕಳೆದ ಒಂದು ವರ್ಷದಿಂದ ವಿಶ್ವ ನಮ್ಮ ಕಡೆ ನೋಡುತ್ತಿದೆ. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕೆ ಹಲವು ದೇಶಗಳು ನಮ್ಮ ಪರ ನಿಲ್ಲುತ್ತಿವೆ. ಈ ಮಧ್ಯದ ಅವದಿಯಲ್ಲಿ ಭಾರತ ಎಲ್ಲಿ ಅಡಗಿತ್ತೋ ಗೊತ್ತಿಲ್ಲ.
ಚಕ್ರವರ್ತಿ ಸೂಲಿಬೆಲೆಯವರೂ ಕೂಡ ಇದರ ಬಗ್ಗೆ ಬರೆದಿದ್ದರು. ಆದರೆ ನಾನು ರಷ್ಯಾದ ಅಧ್ಯಕ್ಷ ಪುಟಿನ್ ಸಿರಿಯಾದ ಮೇಲೆ ನಡೆಸುತ್ತಿರುವ ದಾಳಿಯ ವೀಡಿಯೋಗಳನ್ನು ನೋಡಿದಾಗ, ನಮ್ಮ ಭಾರತ ಎಷ್ಟರ ಮಟ್ಟಿಗೆ ತಯಾರಿದೆ ಎಂದು ಹುಡುಕುತ್ತಿದ್ದೆ. ಆಗ ಸಿಕ್ಕ ಈ ವೀಡಿಯೋ ನಿಜಕ್ಕೂ ನನ್ನ ಮೈ ನವಿರೇರಿಸಿತು. ವೀಡಿಯೋ ಜೊತೆ #ನನಗನಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
https://www.youtube.com/watch?v=DjrKX1EJGW8

Monday, November 2, 2015

ನಮ್ಮ ಕಾಲದಲ್ಲಿ ಹೀಗಿರಲಿಲ್ಲ‬..

http://ddnational.blogspot.in/sea…/label/Doordarshan%20Films
ಒಮ್ಮೆ ಇದಕ್ಕೆ ಬೇಟಿ ನೀಡಿ. ದೂರದರ್ಶನದಲ್ಲಿ ಬರುತ್ತಿದ್ದ ಕಾರ್ಯಕ್ರಮಗಳ ಸಂಗ್ರಹ.
ನೀಡಿದವರಲ್ಲಿ 90ರ ದಶಕದವರನ್ನು ಈ blog 15-20 ವರ್ಷ ಹಿಂದಕ್ಕೆ ಎಳೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವೇ ಇಲ್ಲ. ನಂತರದವರಿಗೆ ಹಿಂದಿನವರ ಅಭಿರುಚಿ ನಗೆ ತರಸುವುದರಲ್ಲಿ ಸಂದೇಹವಿಲ್ಲ.
ಸುಮಾರು 90ರ ದಶಕ. ಸಿದ್ಧಾರ್ಥ್ ಹಾಗು ರೇಣುಕಾ ಸಹಾನೆ ನಡೆಸಿ ಕೊಡುತ್ತಿದ್ದ ಸುರಭಿ - ಯಾರಿಗೆ ತಾನೆ ಆ ಕಾರ್ಯಕ್ರಮದ ಪ್ರಾರಂಭದಲ್ಲಿ ತೋರಿಸುತ್ತಿದ್ದ ಮಡಕೆ ಮಾಡುವುದು,ಅದರ ಒಳಗೆ ನಾವೇ ನುಸುಳುವ ಹಾಗೆ ಆಗುತ್ತಿದ್ದ ಅನುಭವ ಹಾಗು ವಿವಿಧ ಚಿತ್ರಗಳು, ವಸ್ತುಗಳು ಅದರೊಳಗೆ ಬರುವ ಹಾಗೆ ಮಾಡಿದ್ದ ಆ graphics ನೆನಪಾಗುವುದಿಲ್ಲ ಹೇಳಿ. ನಮ್ಮ ಪಾಲಿಗೆ ಅದು ಮಾಯೆಯೆ ಸರಿ, ಅದೊರೊಳಗೆ ಹೇಗೆ ಅವೆಲ್ಲಾ ಬಂದವು ಎಂಬುದು ನಮ್ಮೆಲ್ಲರ ಯಕ್ಷಪ್ರಶ್ನೆ. 93ರಲ್ಲಿ ಪ್ರಾರಂಭವಾಗಿತ್ತಂತೆ, ನನಗೆ ನೆನಪಿದ್ದಿದ್ದು 98-99ರದ್ದು. ಲಿಮ್ಕಾ ಪುಸ್ತಕದಲ್ಲಿ ಅತಿ ಹೆಚ್ಚು ವೀಕ್ಷಕರ ಪ್ರತಿಕ್ರಿಯೆ(ಸುಮಾರು ಒಂದು ವಾರಕ್ಕೆ 14ಲಕ್ಷ ಪತ್ರಗಳು) ಹೊಂದಿದ ಕಾರ್ಯಕ್ರಮವಂತೆ. ಅದನ್ನು ಪ್ರಾಯೋಜಿಸಿದ್ದು ಅಮೂಲ್.
https://www.youtube.com/watch?v=J1rNDOdFOYY
"ಅಮೂಲ್ ದಿ ಟೇಸ್ಟ್ ಆಫ್ ಈಂಡಿಯಾ", ದೇಶದ ಎಲ್ಲಾ ಸಂಸ್ಕೃತಿಯನ್ನು ತೋರಿಸುವ ಹಾಲಿನ ಉತ್ಪನ್ನಗಳ ಜಾಹಿರಾತು ನಮ್ಮೆಲ್ಲರ ಬಾಯಲ್ಲಿ ನೀರೂರಿಸುತ್ತಿದ್ದಾದರೂ ಆ ಕಾಲದಲ್ಲಿ ಅದು ಸ್ವಲ್ಪ ದುಬಾರಿಯೇ.
https://www.youtube.com/watch?v=mndv6gdZ7M0
ಇದೇ ತರ ಮತ್ತೊಂದು ಚಾಕ್ಲೇಟ್ ನೀರೂರಿಸಿದ್ದು ಎಂದರೆ cadbury dairy milk ಆಟಗಾರ six ಹೊಡೆದಾಗ ಮೈದಾನಕ್ಕಿಳಿದು ಬಂದು ಹುಡುಗಿ ವಿಚಿತ್ರವಾಗಿ ಕುಣಿಯುತ್ತಿದ್ದುದ್ದು, ತಾಯಿ ಕುಂಟಾಪಿಲ್ಲೆ ಆಡುತ್ತಿದ್ದುದ್ದು ಏನೋ ಅದರಲ್ಲಿ ನಿಜವಾಗಿಯೂ "ಕುಚ್ ಖಾಸ್ ಹೈ", ಈಗಿನ ಹಾಗೆ kiss me ಅಂತ ಬಾಯೆಲ್ಲ ಮೆತ್ತಿಕೊಂಡು, ರಾಡಿ ಮಾಡಿ ಅಸಹ್ಯವಾಗಿ ಬೆರಳನ್ನು ಚೀಪುತ್ತಿರಲಿಲ್ಲ, ತಿನ್ನುತ್ತಿರಲಿಲ್ಲ.
ಒಂದೇ ಚಾಕ್ಲೇಟ್ - ತಿನ್ನುವ ವಿಧಾನ ಮಾತ್ರ ಬೇರೆ, ಎಂತ ಬದಲಾವಣೆ ಅಲ್ವಾ.
https://www.youtube.com/watch?v=uuDKvYYMjsM
ಇನ್ನು cricket ಎಂದರೆ ನಮ್ಮೆಲ್ಲರ ಜೀವವೇ ಆಗಿತ್ತು, ಗುಂಗುರು ಕೂದಲಿನ ಸಚಿನ್ ವೇಷ ಧರಿಸಿ ಬಂದ ಶಾರುಖ್, ಸಚಿನ್ ಮುಖವಾಡ ಹಾಕಿಕೊಂಡು ಬಂದ ಹುಡುಗರು ಕೊನೆಗೆ ಹೇಳುತ್ತಿದ್ದ "ಯೆ ದಿಲ್ ಮಾಂಗೆ ಮೋರ್, ಆಹಾ". ಆಹಾ ಅದು cricket ದೇವರ ಬಾಲ್ಯ ಕೂಡ ಆಗಿತ್ತು. ದಿನಾ ಸಾಯುವವರಿಗೆ ಅಳುವರ್ಯಾರು ಎಂಬಂತೆ, ಪಂದ್ಯಗಳು ಹೆಚ್ಚಿ ಅದರ ವಿಶಿಷ್ಟತೆಯನ್ನೇ ಕಳೇದುಕೊಂಡಿದೆ.
https://www.youtube.com/watch…
ಹುಡುಗಿಗಾಗಿ ಹುಚ್ಚು ಹುಚ್ಚು stunts ಮಾಡುವ ಈಗಿನ ಗಾಡಿಗಳ ಜಾಹಿರಾತಿಗಿಂತ, ನಮ್ಮಲ್ಲಿ ದೇಶಪ್ರೇಮ ಹುಟ್ಟಿಸುತ್ತಿದ್ದ 'ಹಮಾರಾ ಬಜಾಜ್, ಬುಲಂದ್ ಭಾರತ ಕಿ ಬುಲಂದ್ ತಸ್ವೀರ್' ನಮ್ಮೆಲ್ಲರನ್ನು ಹೆಚ್ಚು ಹಿಡಿದಿಟ್ಟುಕೊಂಡಿತ್ತು. ಈಗ en-field bike ತೆಗೆದುಕೊಂಡವರಿಗಿಂತ ಹೆಚ್ಚು ಜನರಲ್ಲಿ ಸಂತೋಷ ಹಾಗು ಪ್ರೀತಿ ಹುಟ್ಟಿಸಿತ್ತು. ಮತ್ತೆ ಬಂದಂತಿದೆ ವೆಸ್ಪಾ ಗಾಡಿಗಳು.
https://www.youtube.com/watch?v=scltYH13uEY
ಕೋಡು ಬೆಳಸಿಕೊಂಡ ಬೋಡ, ಯಾರಿರಬಹುದು ನೆನಪಿಸಿಕೊಳ್ಳಲು ಸಾಧ್ಯವಾ? ಪಕ್ಕದ ಮನೆಯಲ್ಲಿ ಅಸೂಯೆ ಹುಟ್ಟಿಸಿ, ನಮ್ಮ ಮನೆಯಲ್ಲಿ ಹೆಮ್ಮೆ ತರುಸುತ್ತಿದ್ದ ಆ ಬೋಡ.
ಹೌದು ಅವನೇ ONIDA devil ಬೋಡ.
https://www.youtube.com/watch?v=_tishLr19-c
ದೊಡ್ಡವರಿಗೆಲ್ಲ ಮುಖೇಶ್ ಖನ್ನ ಭೀಷ್ಮನಾಗಿದ್ದರೆ ನಮಗೆ ಅವನು ಶಕ್ತಿಮಾನ್. ಶನಿವಾರ ಮಧ್ಯಾನ ರಜೆಯಲ್ಲಿ ಬಂದು ನೋಡಿದರೆ ಮಾತ್ರ ಶನಿವಾರದ ರಜೆ ಸಂಪೂರ್ಣ, ಅದರಂತೆ ಮನೆಯಲ್ಲೆಲ್ಲಾ ಗಿರ್ರ್ರ್ರ್ರನೆ ತಿರುಗಿಯೇ ಓಡಾಡುತ್ತಿದ್ದೆವು, ಬಡಸಿಕೊಂಡ ಉದಾಹರಣೆಯೂ ಇದೆ. ಮೇಲಿಂದ ಬಿದ್ದರೆ ಶಕ್ತಿಮಾನ್ ಬಂದು ಕಾಪಾಡುತ್ತಾನೆ ಎಂದೇ ನಂಬಿದ್ದೆವು.
https://www.youtube.com/watch?v=2HWv63p1ndg
ಅಲಿಫ್ ಲೈಲಾ ಅಲಿಫ್ ಲೈಲಾ ಎಂದು ಪ್ರಾರಂಭವಾಗುತ್ತಿದ್ದ ಧಾರವಾಹಿ ನಮ್ಮೆಲ್ಲರ ಅಜ್ಜಿಯೇ ಆಗಿತ್ತು, ಅರೇಬಿಯನ್ ನೈಟ್ಸ್ ಆಧಾರಿತ ಆ ಧಾರವಾಹಿಯಲ್ಲಿನ ಜಾದು ನಮ್ಮೆಲ್ಲರ ಬಾಯಿ ಮುಚ್ಚಿಸುತ್ತಿರಲಿಲ್ಲ, ಎರಡು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಕಾಲ, ಆಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ತಾಂತ್ರಿಕ ವಿಷಯಗಳಲ್ಲಿ ಮೂಡಿಬಂದ ಜಾದುವಿನ ಚಮತ್ಕಾರಗಳು, ಬಾಹುಬಲಿಯಲ್ಲಿ ಅದರ ಅರ್ಧದಷ್ಟು ಮೂಡಿಬಂದಿಲ್ಲ.
https://www.youtube.com/watch?v=hxVWPFIjZLE
ಇನ್ನೂ ಬಹಳಷ್ಟು ಇವೆ, ಇಲ್ಲಿ ಕೆಲವನ್ನು ಮಾತ್ರ ಸೇರಿಸಿದ್ದೇನೆ. ಒಟ್ಟಾರೆ ಹೇಳುವುದಾದರೆ, ಆಗಿನ ಜಾಹಿರಾತುಗಳು ಜನಗಳ ನಡುವೆ ಪ್ರೀತಿ, ಬಾಂದವ್ಯ ಹೆಚ್ಚಿಸುತ್ತಿದ್ದವುಗಳಾಗಿದ್ದವು. ದೇಶಪ್ರೇಮ, ದೇಶದ ಸಂಸ್ಕೃತಿಗಳನ್ನು ಬಿಂಬಿಸುತ್ತಿದ್ದವು ಹಾಗು ಯಾವುದೇ ರೀತಿಯ ಅಶ್ಲೀಲತೆ ಇರುತ್ತಿರಲಿಲ್ಲ.
ಏನೇ ಹೇಳಿ ಅವರವರಿಗೆ ಅವರ ಬಾಲ್ಯದ ದಿನಗಳೇ ಇಷ್ಟವಾಗುತ್ತದೆ. ನಮ್ಮ ಅಪ್ಪ ಅಮ್ಮ ಹೀಗೆ ರೇಡಿಯೋ ಬಂದ ಕಥೆ, ಮೊದಲು ಟೀವಿ ನೋಡಿದ ಕಥೆ ಹೇಳಿದರೆ, ನಾವು ನಮ್ಮ ಮುಂದಿನ ಪೀಳಿಗೆ ನಮ್ಮ ಈರೀತಿಯ ಕಥೆ ಹೇಳಿ, ಇವಾಗ ಸರಿಯಿಲ್ಲ, ಕಾಲ ಬದಲಾಗಿದೆ ಎಂದು ಹೇಳುತ್ತೇವೆ. ಹಾಗಾಗಿ, ನಮ್ಮ ಆ ಸಿಹಿ ನೆನಪುಗಳನ್ನು ನೆನೆದು rewind ಮಾಡಿಕೊಳ್ಳೋಣ, ‪#‎ನನಗನಿಸಿದ್ದು‬ ಇಲ್ಲಿ ಹೇಳಿದ್ದೇನೆ. Rewind ಎನ್ನುವ ಪದ ಕೂಡ tape recorder ಗೊತ್ತಿರುವವರಿಗೆ ಮತ್ತೊಂದನ್ನು ನೆನಪು ಮಾಡುತ್ತದೆ, Reynolds pen ಲಿ ಕ್ಯಾಸೆಟ್ ನಲ್ಲಿ ಹಾಕಿ ತಿರುಗಿಸುತ್ತಿದ್ದುದ್ದು. ಇರಲಿ, ಒಂದು ಸರ್ವೇ ಸಾಮಾನ್ಯ,
ನಾವು ಕೇಳಿದ ವೇದಾಂತಗಳನ್ನೇ ಮುಂದೆ ನಾವು ಹೇಳುತ್ತೇವೆ. "ನಮ್ಮ ಕಾಲದಲ್ಲಿ ಹೀಗಿರಲಿಲ್ಲ"
परिवर्तनमेव स्थिरमस्ति
Time is in essence nothing but change. And change is the only constant out there.